ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ.
ಇವರು ೧೯೩೯ ಸೆಪ್ಟಂಬರ ೨೩ರಂದು ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಯಲ್ಲಿ ಜನಿಸಿದರು. ನವ್ಯ ಸಾಹಿತ್ಯ ಯುಗದ ಪ್ರಥಮ ಪಂಕ್ತಿಗೆ ಸೇರುವ ವಿಮರ್ಶಕರು.ಗಿರಡ್ಡಿಯವರ ಪ್ರಾಥಮಿಕ ಶಿಕ್ಷಣ ಅಬ್ಬಿಗೇರಿಯಲ್ಲಿಯೆ ಆಯಿತು. ಮಾಧ್ಯಮಿಕ ಶಿಕ್ಷಣವನ್ನು ರೋಣದಲ್ಲಿ ಪೂರ್ಣಗೊಳಿಸಿದ ಗಿರಡ್ಡಿಯವರು ೧೯೫೭ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ೧೯೬೧ರಲ್ಲಿ ಧಾರವಾಡದಲ್ಲಿರುವ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿಯನ್ನು ಪಡೆದ ಗಿರಡ್ಡಿಯವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಎ. ಇಂಗ್ಲಿಷ್ ಪದವಿಯನ್ನು ೧೯೬೩ರಲ್ಲಿ ಹಾಗು. ಎಮ್.ಎ. ಕನ್ನಡ ಪದವಿಯನ್ನು ೧೯೬೯ರಲ್ಲಿ ಪಡೆದರು. ಗಿರಡ್ಡಿ ಗೋವಿಂದರಾಜರು ಸೃಜನಶೀಲ ಸಾಹಿತ್ಯ ಹಾಗು ವಿಮರ್ಶೆ ಎರಡರಲ್ಲೂ ಖ್ಯಾತರಾಗಿದ್ದಾರೆ. ಇವರ ಕೃತಿಗಳು ಇಂತಿವೆ