![Deepika Chate](https://cdn.vividlipi.com/wp-content/uploads/2023/10/30163024/deepika-chate.png)
Deepika Chate
ದೀಪಿಕಾ ಚಾಟೆ ಅವರು 1966 ಜುಲೈ 16 ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಜನಿಸಿಸದರು. ಪರಿತ್ಯಕ್ತ ಮತ್ತು ಇತರ ಕತೆಗಳು, ಸುಂದರ ನಾಳೆ ಮತ್ತು ಇತರ ಕತೆಗಳು ಅವರ ಸಣ್ಣಕಥಾ ಸಂಕಲನಗಳು. ಶ್ರೀಮತಿ ದೀಪಿಕಾ ಚಾಟೆಯವರದು. ಇತ್ತೀಚೆಗೆ ಕಥಾಲೋಕದಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಸರು. ನಿಯತಕಾಲಿಕೆಗಳಲ್ಲಿ ಬಹುಮಾನಿತರಾದ, ಕರ್ನಾಟಕ ಮಹಿಳಾ ಮಂಡಳದ ಕಾರ್ಯಕಾರಿ ಸದಸ್ಯೆಯಾದ, ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಕಾರ್ಯಕಾರಿ ಸದಸ್ಯೆಯಾದ, ನಮ್ರತಾ ಮಹಿಳಾ ಬ್ಯಾಂಕಿನ ಚೇರಮನ್ ರಾಗಿ ಐದು ವರ್ಷ ಸೇವೆಸಲ್ಲಿಸಿದ, ಗೃಹಿಣಿಯಾಗಿರುವ ‘ಚಾಟೆ’ಯವರು ಮಹಿಳಾ ಪರವಾಗಿ ಕಥೆಗಳನ್ನು ಕೊಟ್ಟಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಇವರ ‘ಪರಿತ್ಯಕ್ತ ಮತ್ತು ಇತರ ಕಥೆಗಳು’ ಎಂಬ ಪ್ರಥಮ ಕಥಾ ಸಂಕಲನದಲ್ಲಿ ಆಧುನಿಕ ಪರಿಸರದಲ್ಲಿ ಮಹಿಳಾ ಸಂವೇದನೆ ಕುರಿತ ಕಥೆಗಳೇ ಇವೆ. ವಿವಿಧ ಪತ್ರಿಕೆಗಳಲ್ಲಿ ಅನೇಕ ವೈಚಾರಿಕ ಲೇಖನಗಳನ್ನು ಪ್ರಕಟಿಸಿದ ಲೇಖಕಿ ಅದರ ಮುಂಬಡ್ತಿ ಎಂಬಂತೆ ಕಥೆಗಳಿಗೆ ಕೈ ಇಕ್ಕಿರುವುದು ಸಹಜವೇ ಆಗಿದೆ. ಹತ್ತು ಕಥೆಗಳ ಹರಹಿನಲ್ಲಿ ಅವರ ಅನುಭವಗಳು ಅನಾವರಣಗೊಂಡಿವೆ.
-
-
-
ಪರಿತ್ಯಕ್ತ ಮತ್ತು ಇತರ ಕತೆಗಳು
$0.72Original price was: $0.72.$0.43Current price is: $0.43. -
ಹೊಸ ಹಾಡಿನ ಪಲ್ಲವಿ ಮತ್ತು ಇತರ ಕಥೆಗಳು
$0.72Original price was: $0.72.$0.43Current price is: $0.43. -
-