ಬಿ.ಆರ್. ವಾಡಪ್ಪಿ ಅವರು ಗದಗ ಜಿಲ್ಲೆಯ ಅಣ್ಣಿಗೇರಿಯಲ್ಲಿ 10-03-1914 ರಂದು ಜನಿಸಿದರು. ತಂದೆ ರಾಘವೇಂದ್ರರಾವ್, ತಾಯಿ ಜೀವೂಬಾಯಿ. ಪ್ರಾಥಮಿಕ ವಿದ್ಯಾಭ್ಯಾಸ ಅಣ್ಣಿಗೇರಿಯಲ್ಲಿ. ಕರ್ನಾಟಕ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿ ಅಲ್ಲಿಯೇ ನಿವೃತ್ತಿ ಹೊಂದಿದರು. ನಾಟಕ-ರಾಯರ ಸೋಲು, ನಿತ್ಯನಾಟಕಗಳು. ಪ್ರಮುಖ ಬರಹಗಾರರ ಕೃತಿಗಳನ್ನು ವಿಮರ್ಶಿಸಿದ್ದಾರೆ. ಧಾರವಾಡದ ರೇಡಿಯೋ ಕೇಂದ್ರದಿಂದ ಹರಟೆಗಳು, ಚಿಂತನಗಳು, ಭಾಷಣಗಳು, ವಿಮರ್ಶೆಗಳ ಪ್ರಸಾರವಾಗಿವೆ. ಮುಳ್ಳು ಕಂಟಿ, ಗುಡುಗು ಮಿಂಚು -ಇವು ಕವನ ಸಂಕಲನಗಳು.ಗಾಳಿಗುದರಿ, ತಾರಕಂಬಗಳು, ಸುಳಿಗಾಳಿ, ಗುಬ್ಬೀಗೂಡು, ಹುಚ್ಚು ಹರಟೆಗಳು, ಅಂಗಳದಲ್ಲಿ ಮಂಗಗಳು -ಇವು ಪ್ರಬಂಧಗಳು. ಯಾರು ಹೊಣೆ, ಜೀವನ ರಂಗ-ಇವು ಕಥಾ ಸಂಕಲನಗಳು.