ನಿವೇದನೆ

ಸತ್ತವರೇ
ನೆಮ್ಮದಿ ನಿಶ್ಚಿಂತೆಗಳ
ಶಾಶ್ವತವಾಗಿ ಅಪ್ಪಿ
ಮರೆಯಾದವರೇ

ನಿಮಗರಿವಿದೆಯೇ?
ನಿಮ್ಮ ನೆನಪು
ಕಣಕಣವಾಗಿ
ಕೊಲ್ಲುವುದೆಮ್ಮ

ನಿಮ್ಮ ಅಗಲಿಕೆಯ
ಗಾಯ ಮಾಗದೆ
ಆಗಾಗ ಒಡೆದು
ಉರಿ ನೋವು

ನಿಮ್ಮೊಡನಾಟ
ಹಂಬಲಿಸಿದೆ ಮನ
ನಿಮ್ಮ ಸಾನಿಧ್ಯವ
ಬಯಸಿದೆ ಮನ

ನೀವೇನೋ
ಹೊರಟುಬಿಟ್ಟಿರಿ…
ಈ ಮಾಗದ ಗಾಯ
ಅಳಿಸಲಾಗದ ಛಾಯೆ
ನೀಗದ ನೋವು
ನಾವಿರುವವೆಗೆ..

4 Comments

  1. ನೆನಪು ಮನುಷ್ಯನಿಗೆ ಒಂದು ವರ…….
    ಕೆಲವೊಮ್ಮೆ ಈ ನೆನಪು ವರ ಎನ್ನಬೇಕೋ, ಕಷ್ಟ ಎನ್ನಬೇಕೋ ಅನುಭವಿಸುವರಿಗೆ ಗೊತ್ತು.

  2. ಆತ್ಮೀಯರ ಅಗಲಿಕೆಯ ನೆನಪು ಬಹಳ ಕಾಲದವರೆಗೆ ಇರುತ್ತದೆ. ಅವರ ಇಚ್ಛೆ/ಉಳಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿದರೆ ಮನಕ್ಕೆ ಸಂತಸವಾಗುತ್ತದೆ, ಸಮಾಧಾನವಾಗುತ್ತದೆ.

  3. ಹೋದವರು ಬಂದಿದ್ದವರಲ್ಲವೇ
    ಬಂದಿರುವ ನಾವು ಯಾರನ್ನೋ ಬಿಟ್ಟು ಬಂದಿಲ್ಲವೇ
    ಹೋಗಿ ಬರುತ್ತಿರುವುದು
    ಇರುವವರು ತಿಳಿಯಲಲ್ಲವೇ

    ತಿಳಿದಮೇಲೇಕಿನ್ನು
    ಓಡಾಟದ ಗೊಜಲು
    ಹೋಗಿದ್ದು ಕಾಲ
    ಬರುವುದು ಕೊಟ್ಟಿದ್ದ ಸಾಲ

    ಮನ ಇಲ್ಲಿ ನಿಲ್ಲದಿರೆ
    ಅಲ್ಲಿಂದಿಲ್ಲಿಗೆ
    ಅಂಡಲೆಯುವುದು

    (ನಿಮ್ಮ ಭಾವ, ಬರಹ ಸೊಗಸಾಗಿದೆ)

    1. ಧನ್ಯವಾದಗಳು

Leave a Reply