ಮರಡೂರಗೆ ಖಯಾಲ್‌ ಸಂಗೀತ ರತ್ನ ಪ್ರಶಸ್ತಿ

ಪಂ. ಸೋಮನಾಥ ಮರಡೂರ. ಹೆಸರು ಕೇಳಿದರೆ ಸಾಕು, ವೇದಿಕೆ ಮುಂದೆ ಹಾಜರಾಗುತ್ತಾರೆ ಸಂಗೀತಪ್ರೇಮಿಗಳು. ಪಂ. ಸೋಮನಾಥರ ಸಂಗೀತ ಸುಧೆಯ ವೈಖರಿಯೇ ಅಂಥದ್ದು. ಇದೇ 25ರಂದು, ಭಾನುವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಖಯಾಲ್‌ ಸಂಗೀತ ಉತ್ಸವದಲ್ಲಿ ಅವರ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮವಿದೆ. ಇದೇ ಸಂದರ್ಭದಲ್ಲಿ ಅವರಿಗೆ ‘ಖಯಾಲ್‌ ಸಂಗೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಮರಡೂರು ಪಂ. ಸೋಮನಾಥರ ಹುಟ್ಟೂರು. ಮಾತು ಕಲಿಯುವ ವಯಸ್ಸಿನಲ್ಲಿಯೇ ಸಂಗೀತ ಕಲಿಯಲು ಆರಂಭಿಸಿದ ಸೋಮನಾಥ ನಾಲ್ಕನೇ ವಯಸ್ಸಿಗೇ ವೀರಪ್ಪಯ್ಯ ಸ್ವಾಮೀಜಿ ಅವರಿಂದ ಸಂಗೀತಾಭ್ಯಾಸ ಶುರುಮಾಡಿದರು. ಮುಂದಿನ ಸಂಗೀತಾಭ್ಯಾಸಕ್ಕೆ ಗದಗಿನ ಪಂ. ಪುಟ್ಟರಾಜ ಗವಾಯಿಗಳು ಗುರುವಾದರು. ಶಾಸ್ತ್ರೀಯ ಸಂಗೀತದ ಆಯಾಮಗಳಿಗೆ ಪಂ. ಬಸವರಾಜ ರಾಜಗುರು ಹಾಗೂ ಪಂ.ಮಲ್ಲಿಕಾರ್ಜುನ ಮನ್ಸೂರರ ಮಾರ್ಗದರ್ಶನ ಲಭಿಸಿತು. ನಾಡಿನ ವಿದ್ವಾಂಸರಿಂದ ಹಿಂದೂಸ್ತಾನಿ ಹಾಗೂ ಶಾಸ್ತ್ರೀಯ ಸಂಗೀತ ಕಲಿತು, ಅದರ ಆಧಾರದ ಮೇಲೆ ತಮ್ಮದೇ ಆದ ಸಂಗೀತಪ್ರಭೆಯನ್ನು ಬೆಳೆಸಿಕೊಂಡರು. ಹಿಂದೂಸ್ತಾನಿ ಸಂಗೀತವನ್ನು ಪ್ರಪಂಚದಾದ್ಯಂತ ಪ್ರಚುರಪಡಿಸಲು ದೇಶ–ವಿದೇಶಗಳಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆ ಅವರದು.

courtsey:prajavani.net

https://www.prajavani.net/artculture/music/maraduru-got-khayal-sangeeth-660082.html

Leave a Reply