ಮನಸ್ಸೇ

ಮನಸ್ಸೇ
ಓ ಮನಸ್ಸೇ ನೀನೇಕೆ ಕೇಳದಾದೆ ನನ್ನನು
ಏನೋ ತಳಮಳ ಅರ್ಥವಾಗದ ಬೇಸರ
ಸರಿ ತಪ್ಪುಗಳ ನಿರ್ಧಾರದ ಗೊಂದಲ
ಹೀಗೇಕೆ? ಇದಾವ ಅನುಭವ ಹೊಸಥರ
ಮನಸ್ಸೇ
ಏನೋ ಆಲಿಸುವ ತವಕ ಹೃದಯಕೆ
ಬೇಡದ ಯೋಚನೆ ಒಳಗೆ ಕ್ಷಣ ಕ್ಷಣಕೆ
ಸನಿಹವಿದ್ದರೂ ದೂರವಿದ್ದರೂ ಅಸಹನೆ
ಹಿಂದೆಂದೂ ಇರದ ಈ ಬಗೆಯ ಯೋಚನೆ
ಮನಸ್ಸೇ
ಮದ್ಧಿಲ್ಲದ ಮನಸಿನ ಮರುಳು ರೋಗ
ಹುಚ್ಚು ಹಿಡಿಸಿದೆ ದಿಕ್ಕು ತೋರದೆ
ದೂರ ಮಾಡು ಅತಿಯಾದ ಭಾವನೆಯ
ಕೇಳು ಒಮ್ಮೆಯಾದರೂ ನನ್ನ ಅಂತರಾಳವ
ಓ ಮನಸ್ಸೇ …

Uma Bhatkhande.

Leave a Reply