ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?

ಮಂಗಳ ಗ್ರಹದಲ್ಲಿ ನಾಗರೀಕತೆ ಇತ್ತೆ?

1.1 ಪರಿಚಯ

ಇತ್ತೀಚೆಗೆ ಮಂಗಳ ಗ್ರಹದ ಬಗ್ಗೆ ಅತಿ ಕುತೂಹಲಕಾರಿ ಬೆಳವಣಿಗೆಗಳೂ ವೈಜ್ಞಾನಿಕ ರಂಗದಲ್ಲಿಯೂ, ಮೂಗಿನ ಮೇಲೆ ಬೆರಳಿಡುವಂತಾ ಅನುಮಾನ, ಗುಮಾನಿ ಮತ್ತು ಸುಳಿವುಗಳು ಅರೆ-ವೈಜ್ಞಾನಿಕ ಅಂದರೆ conspirationalist ಅಥವಾ ರಹಸ್ಯವಾದಿಗಳ ಮೀಡಿಯಾ ಕಾರ್ಖಾನೆಯಿಂದಲೂ ಹೊರಬೀಳುತ್ತಲೇ ಇವೆ.

ನಮ್ಮ ಮುಂದಿರುವ ದಾಖಲೆಗಳು, ಚಿತ್ರಗಳು, ಸಂದೇಹಗಳಲ್ಲದೇ ಕೆಲವು ಪ್ರಮುಖ ಮುಂದುವರಿದ ದೇಶಗಳಾದ ಅಮೆರಿಕಾ ಮತ್ತು ಚೀನಾ ಈಗ ಸ್ಪೇಸ್ ಯಾನಗಳ ಮುಂದಾಳತ್ವ ವಹಿಸಿರುವುವು- ಕುತೂಹಲಕಾರಿಯಾಗಿ ಹಲವಾರು ದಶ ಕೋಟಿ ಡಾಲರುಗಳ ವೆಚ್ಚದ ಮಂಗಳ ಯಾನ, ಉಪಗ್ರಹ, ರೋಬೋಟುಗಳನ್ನು ತಯಾರಿಸಿ ಪೈಪೋಟಿಗೆ ಬಿದ್ದಂತೆ ಮುನ್ನುಗ್ಗುತ್ತಿರುವುದು-ಇವನ್ನೆಲ್ಲಾ ನಾವು ಈಗ ಗಮನಿಸಲೇಬೇಕಾಗಿದೆ, ತಿರಸ್ಕರಿಸುವಂತಿಲ್ಲ.

ಹಾಗಾಗಿ ಇದೆಲ್ಲದರ ಸಾರವನ್ನು ಓದಿ ನನ್ನ ತಿಳುವಳಿಕೆಯ ವ್ಯಾಪ್ತಿಯಲ್ಲಿ ಬಂದದ್ದನ್ನು ಇಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.  ನಾನು ಸ್ಪೇಸ್ ಸಂಶೋಧಕನೂ ಅಲ್ಲ, ಖಗೋಳ ತಜ್ಞನಂತೂ ಅಲ್ಲವೇ ಅಲ್ಲ…

ಬರಹದಲ್ಲಿ ಪಂಡಿತನೂ ಅಲ್ಲ.

ನಿಮ್ಮೆಲ್ಲರಂತೆ ಬಾಹ್ಯಾಕಾಶ, ಸೌರಮಂಡಲ, ಗಗನಯಾನದ ಬಗ್ಗೆ ಆಸಕ್ತರಲ್ಲೊಬ್ಬನಷ್ಟೆ. ಹಾಗಾಗಿ ಯಾವುದನ್ನು ಎಷ್ಟು ನಂಬುವಿರಿ ಬಿಡುವಿರಿ ನಿಮ್ಮ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದೇನೆ.

1.2 ಮಂಗಳ ಎಲ್ಲಿದೆ? ಹೇಗಿದೆ?

ಭೂಮಿಯ ಕಕ್ಷೆಗೆ ಕನಿಷ್ಟ ಅಂದರೆ 5.4 ಕೋಟಿ ಕಿಮೀ ದೂರದಲ್ಲಿ ( 54.6 ಮಿಲಿಯನ್ ಕಿಮೀ) ಸಿಗುವ ನಮ್ಮ ನೆರೆ ಗ್ರಹ ಮಂಗಳನು ಭೂಮಿಗಿಂತಾ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಗಾತ್ರದಲ್ಲಿದ್ದಾನೆ! ಇಲ್ಲಿನ ಗುರುತ್ವ-gravity ಶಕ್ತಿಯು ಭೂಮಿಯ 38% ದಷ್ಟು ಮಾತ್ರ ಇದ್ದು, ಅದು ಸಹಾ ಮಾನವ ದೇಹಕ್ಕೆ ಸಾಕು ಎಂಬ ಥಿಯರಿಗಳು ವಿಜ್ಞಾನದ ವಲಯಗಳಲ್ಲಿ ಕೇಳಿಬರುತ್ತದೆ. ಈಗ ಅಲ್ಲಿನ ವಾತಾವರಣ ಬಹಳ ಲಘುವಾಗಿದ್ದು ಭೂಮಿಗಿಂತಾ ವ್ಯತ್ಯಾಸವುಳ್ಳದ್ದಾಗಿದೆ. (ಆದರೆ ಅದು ಅಲ್ಲಿ ಬಿಲಿಯನ್ ವರ್ಷಗಳ ಹಿಂದೆ ನಡೆದ ದೊಡ್ಡ ಪರಮಾಣು ಅನಾಹುತದ ಪರಿಣಾಮ, ಅದಕ್ಕೆ ಮುಂಚೆ ಅಲ್ಲಿ ಹವೆ ಆರೋಗ್ಯಕರವಾಗಿತ್ತು ಎನ್ನುವವರಿದ್ದಾರೆ. ಅದಕ್ಕೆ ಆಮೇಲೆ ಬರೋಣ!)

ಮೇಲೆ ನೋಡಿ ಮಂಗಳ ಮತ್ತು ಭೂಮಿ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸಗಳು. ತೀರಾ ಭಿನ್ನವಾಗಿಲ್ಲ. ಭೂಮಿಯಂತೆ ಅಂದಾಜಿಗೆ 20ಡಿಗ್ರೀಗೆ ವಾಲಿದೆ. ದಿನ ರಾತ್ರಿಗಳಿವೆ, 4 ಋತುಗಳು ಇವೆ ಅಲ್ಲಿ ಧೂಳು ಮಿಶ್ರಿತ ಬಿರುಗಾಳಿವೆ, ಆದರೆ ಗುರುತ್ವ ಕಡಿಮೆಯಿರುವಿದರಿಂದ ಅದರ ಅಡ್ಡ ಪರಿಣಾಮ ಲಘುವಾಗಿರುತ್ತದೆ. ಆದರೆ ಒಂದು ವರ್ಷಕ್ಕೆ 687 ದಿನಗಳಂತೆ. (ಇರಲಿಬಿಡಿ ಹೆಚ್ಚು ತಿಂಗಳುಗಳು ಕ್ಯಾಲೆಂಡರಿನಲ್ಲಿ ಬಂದಾವು! 😊) )

1.3 ಗಾಳಿ ನೀರು ಇಲ್ಲ !

ಎಂಬುದೇ ಮಂಗಳನ ಬಗ್ಗೆ ದೊಡ್ಡ ದೂರಾಗಿತ್ತು. ಈಗೀಗ ಬಂದ ಸಂಶೋಧನೆಗಳಿಂದ ನೀರಿನ ಬರ್ಫ್ ಇದೆಯೆಂದೂ ಹಿಂದೊಮ್ಮೆ ನದಿಗಳು ಹರಿಯುತ್ತಿದ್ದವೆಂದೂ, ಈಗ ಭೂಗತವಾಗಿ ಅಂತರ್ಜಲದಂತೆಯೇ ಇರಬಹುದೆಂಬ ಬಲವಾದ ನಂಬಿಕೆಗಳು ವಿಜ್ಞಾನಿಗಳಿಗೆ ಮೂಡುತ್ತಿದೆ. ಮುಂದೆ ವಿವರಗಳನ್ನು ನೋಡೋಣ

1.4 ಏನಿದು ಕೆಂಪು ಮಣ್ಣು?

ಧೂಳೀಪಟವಾದ ಈ ಗ್ರಹದ ಮೇಲ್ಮೈ ಪೂರ್ತಿ ಕೆಂಪು ಮಣ್ಣಿನಲ್ಲಿ ಆವರಿಸಿಕೊಂಡಿದೆಯಂತೆ… ಧೂಳೀಪಟವೇ, ಅದು ಯಾರು ಮಾಡಿದರೋ ಗೊತ್ತಿಲ್ಲ… ಅದಕ್ಕೂ ಆಮೇಲೆ ಬರೋಣ

ಆದರೆ ಈಗ ಅಲ್ಲಿನ ಬಂಡೆಗಳಲ್ಲಿ ಕಬ್ಬಿಣದ ಅಂಶ ಇದ್ದು. ಅದು ತುಕ್ಕು ಹಿಡಿದು ಧೂಳಾಗಿ ಸುತ್ತಲಿನ ನೆಲ ಹವೆಯೆಲ್ಲಾ ತುಕ್ಕು ಕೆಂಪಾಗಿ ಕಾಣುತ್ತದೆಂದು ನಂಬಲಾಗಿದೆ. ಆದರೆ ಈಗಾಗಲೇ 9 ವರ್ಷಗಳಿಂದ ಅಮೆರಿಕನ್ ನಾಸಾದ ಮಾರ್ಸ್ ನಿವಾಸಿಯಾಗಿರುವ ಕ್ಯುರಿಯೋಸಿಟಿ ರೋವರ್ ಕಳಿಸಿದ್ದ ಚಿತ್ರಗಳು ತಿಳಿ ಹಳದಿ ಅಥವಾ ಬಟರ್ ಸ್ಕಾಚ್ ರಂಗಿನಲ್ಲಿದೆಯೆಂದು ತಿಳಿದು ಬರುತ್ತದೆ

1.5. ಮಂಗಳ ಸ್ಪರ್ಶನ ದರ್ಶನ

ಅಮೆರಿಕಾ ಸಾಧನೆಗಳು

1. ಮರೀನರ್ 9- 1971 ರಲ್ಲೇ ಮಂಗಳನ ಮೇಲೆ ಇಳಿದು ಅಲ್ಲಿನ ಮೇಲ್ಮೈನಲ್ಲಿ ನೀರಿನ ಕುರುಹುಗಳಿದ್ದನ್ನು ವರದಿ ಮಾಡಿತ್ತು.

2. ವೈಕಿಂಗ್ 1 ಮತ್ತು 2 ಉಪಗ್ರಹಗಳು -1975-76 ರಲ್ಲಿ ಮಂಗಳನ ದರ್ಶನ ಸ್ಪರ್ಶನ ಮಾಡಿ ಅಲ್ಲಿ ಹಿಂದೊಮ್ಮೆ ಈ ಜಗತ್ತಿನ ಅತಿ ದೊಡ್ಡ ನದಿಯಾದ ಮಿಸಿಸಿಪ್ಪಿ ಗಿಂತಲೂ 10,000 ಪಟ್ಟು ದೊಡ್ಡ ಪ್ರವಾಹ ಹರಿದಿತ್ತೆಂದು ಲೆಕ್ಕಹಾಕಿತ್ತು

3. ಮಾರ್ಸ್ ಗ್ಲೋಬಲ್ ಸರ್ವೆಯರ್ 1995 ರಲ್ಲಿ ಇಡೀ ಮಂಗಳ ಗ್ರಹದ ಸರ್ವೆ ಮಾಡಿ ನಕ್ಷೆ ತಯಾರಿಸಿ ಈಗಿನ ಹಲವಾರು ಸಂಶೋಧನೆಗಳ ಅಡಿಪಾಯ ಹಾಕಿ ಬೆಳೆಸಿತ್ತು.

4. ಮಾರ್ಸ್ ಪಾಥ್ ಫೈಂಡರ್ ಎಂಬ ರೋಬೋಟಿಕ್ ವಾಹನ 1997 ರಲ್ಲಿ ಇಳಿದು ಹಲವಾರು ಚಿತ್ರಗಳನ್ನೂ ಪರೀಕ್ಷೆಗಳನ್ನೂ ಮಾಡಿದೆ.

5. ಇನ್ನು ಮುಂದುವರೆದು ಮಾರ್ಸ್ ಒಡಿಸ್ಸಿ, ಫೀನಿಕ್ಸ್, ಎಕ್ಸ್ಪ್ಲೋರೇಶನ್ ರೋವರ್, ರಿಕನಾಯಸೆನ್ಸ್ ಆರ್ಬಿಟರ್ ಇವೆಲ್ಲ ಅಲ್ಲಿಳಿದು ಇನ್ನೂ ಹೆಚ್ಚೆಚ್ಚು ವಿಸ್ತೃತ ಮಾಹಿತಿಯನ್ನು ನೀಡಿ ಮಂಗಲನ ಬಗ್ಗೆ ಇಂಚಿಂಚೂ ತಿಳಿಯತೊಡಗಿತು.

6. 2012ರಲ್ಲಿ ಇಳಿದ ಮಾರ್ಸ್ ಕ್ಯುರಿಯೋಸಿಟಿ ರೋವರ್ ಅಲ್ಲಿ ಇನ್ನೂ ಜೀವಂತವಾಗಿದ್ದು ಅಲ್ಲಿಲ್ಲಿ ಪ್ರಯಾಣ ಮಾಡುತ್ತಾ, ಸರ್ವೆ ಮಾಡುತ್ತಾ ಸ್ಯಾಂಪಲ್ಸ್ ತೆಗೆದುಕೊಳ್ಳುತ್ತಾ ಎಲ್ಲಾ ವಿವರಗಳನ್ನೂ ನೀಡುತ್ತಲೇ ಇದೆ

ಯುರೋಪಿನ ಸಾಧನೆಗಳು

ಮಾರ್ಸ್ ಎಕ್ಸ್ಪ್ಪ್ರೆ  ಸ್ಸ್ ಎಂಬ ಸರ್ವೇಕ್ಷಣ ಉಪಗ್ರಹ ಸಹಾ ಅಲ್ಲಿ ಕಾರ್ಯನಿರತವಾಗಿದ್ದು ಒಂದು 20 ಕಿಮೀ ವ್ಯಾಪ್ತಿಯ ನೀರಿನ ಸರೋವರ ಅಲ್ಲಿಂದ 2 ಕಿ ಮೀ ಆಳದಲ್ಲಿದೆಯೆಂದು ಖಚಿತಪಡಿಸಿದೆ.

ಈ ಮೂಲಕ ತಯಾರಿಸಿದ ಈ ಕೆಳಗಿನ ಸವಿವರ ಮ್ಯಾಪ್ ಸಹಾ ನಮ್ಮ ಬಳಿಯಿದೆ . ಇದೀಗ ಅಮೆರಿಕಾದ ಅತ್ಯಾಧುನಿಕ ರೋವರ್ ಅಲ್ಲಿ ಇಳಿಯಲು ದಿನಗಣನೆ ಶುರುವಾಗಿದೆ,

ಅದುವೇ- ಪರ್ಸಿವೆರೆನ್ಸ್ ರೋವರ್ ಫೆ. 18 ರಂದು ಇಳಿಯಲಿದೆ ಇದರ ಪ್ರಮುಖ ಉದ್ದೇಶ ಅಲ್ಲಿ ಜೀವ, ಜೀವಿಗಳು ಯಾವ ರೂಪದಲ್ಲಾದರೂ ಇದ್ದಾವೆ? ಇದ್ದವೆ? ಎಂದು ಇನ್ನೂ ಹೆಚ್ಚು ಮಾಹಿತಿ ನೀಡಲು!

 

ಆಕ್ಸಿಜೆನ್ ಇಲ್ಲವಲ್ಲ?. ಹೌದು, ಇಲ್ಲ! ಬರೇ ಇಂಗಾಲದ ಡಯಾಕ್ಸೈಡ್ ಇದೆ

.. ಅದಕ್ಕೆ ಪರ್ಯಾಯವೂ ಇದೆ. ಮುಂದೆ ತಿಳಿಯೋಣ.

1.6 ಮಂಗಳನಲ್ಲಿ ನೀರಿದೆಯೆ?

ಈಗ ಲಭಿಸಿರುವ ಮಾಹಿತಿ ಪ್ರಕಾರ ನೀರೆಲ್ಲ ಹಿಮವಾಗಿ ಕಟ್ಟಿಕೊಂಡಿದೆಯಂತೆ ಹಿಂದೊಮ್ಮೆ ದೊಡ್ಡ ನದಿ ಕಣಿವೆ, ಕಾಲುವೆಯೆಲ್ಲಾ ದಂಡಿಯಾಗಿ ಮಾರ್ಸ್ ನ ಹಲವಾರು ಪ್ರದೇಶಗಳಲ್ಲಿ ಲಭ್ಯವಿತ್ತೆಂದು ಹೇಳುತ್ತಾರೆ ಆ ಒಂದು ಪ್ರತಿಕೂಲ ಅನಾಹುತದ ಹಾನಿಯು ಕಾರಣದಿಂದ ಈಗ ನೀರಿನ ದ್ರವರೂಪದಲ್ಲಿ ಕಾಣುತ್ತಿಲ್ಲ ಆದರೆ ಬಹಳ ಸುಳಿವು, ಸಾಕ್ಷಿ ಪುರಾವೆ ಎಲ್ಲಾ ಈಗ ಲಭಿಸಿ ಇದು ಖಚಿತವಾಗಿದೆ ಮೇಲಿನ ಚಿತ್ರ ಒಬ್ಬ ಕಲಾವಿದ ಈ ಮಾಹಿತಿಯನ್ನೆಲ್ಲ ಅರ್ಥಮಾಡಿಕೊಂಡು ಚಿತ್ರಿಸಿದ ಉದಾಹರಣೆ ನೀರಿದ್ದ ಮಂಗಳ ಗ್ರಹದ ಬಗ್ಗೆ .. ನೀಲಿ ಭಾಗದ ನದಿ ಮತ್ತು ಸಾಗರಗಳನ್ನು ನೋಡಿ!

Many lines of evidence indicate that water ice is abundant on Mars and it has played a significant role in the planet’s geologic history ಹೀಗೆಂದು ವಿಜ್ಞಾನಿ ಪ್ರೊಫೆಸರ್ ಒಬ್ಬರು ಬರೆದು ಎಲ್ಲರೂ ಒಪ್ಪಿದ್ದು ಆಗಿದೆ.

ನೀರಿದ್ದ ಕಡೆ ಜೀವ ಬೆಳೆಯುತ್ತದೆ, ಬೆಳೆದಿರುತ್ತದೆ ಎಂಬುದು ಸಹಾ ಸುಳ್ಳಲ್ಲ. ಅದಕ್ಕೇ ಜೀವಜಲ ಎನ್ನುವುದು!

ಇಲ್ಲಿ ಭೂಮಿ ಮತ್ತು ಮಂಗಳ ಗ್ರಹದ ಹೋಲಿಕೆ ಸಾಮ್ಯತೆ ವ್ಯತ್ಯಾಸದ ಸ್ಲೈಡುಗಳನ್ನು ನೋಡಿ
ಮುಂದೆ ನೋಡೋಣ ಕೌತುಕ ಮಯ ವಿಷಯಗಳು….

· ಅಲ್ಲಿನ ವಿಚಿತ್ರ ಹಾಗೂ ಸತ್ಯ ಉದಾಹರಣೆಗಳು-ಚಿತ್ರ ಸಮೇತ ವಿಚಿತ್ರ ನಾಗರೀಕತೆ ನಶಿಸಿಹೋದ ಲಕ್ಷಣಗಳು

· ಅಲ್ಲಿ ದೊರೆತ ಮಮ್ಮಿ ಗಳಲ್ಲಿ ಪ್ರಾಣಿ ಮಾನವರ ಚಿತ್ರಗಳು ವಿಗ್ರಹಗಳು

· ಅಲ್ಲಿತ್ತೆ ಬಿಲಿಯನ್ ವರ್ಷಗಳೆ ಕೆಳಗೆಯೇ ಒಂದು ಆಧುನಿಕ ನಾಗರೀಕ ಸಮಾಜ?

· ಅವರೆಲ್ಲಾ ಯಾವುದೋ ವೈಜ್ಞಾನಿಕ ಸಂಶೋಧನೆ ಬೆಳವಣಿಗೆ ಹಿಂದೆ ಜಿದ್ದಿನ ಮೇಲೆ ಬಿದ್ದು ಯುದ್ಧ ಮಾಡಿಕೊಂಡು ಹಾಳಾಗಿಹೋದರೆ?

· ಈಗ ನಮಗೇಕೆ ಅಲ್ಲಿನ ಉಸಾಬರಿ?

· ಎಲಾನ್ ಮಸ್ಕ್ ರವರ ಸ್ಪೇಸ್ ಎಕ್ಸ್, ನಾಸಾ ಯುರೋಪ್, ಚೀನಾ ಮತ್ತು ನಮ್ಮ ಇಸ್ರೋ ಸಹಾ ಎಲ್ಲರೂ ಮಂಗಳನಲ್ಲಿ ನೆಲೆಸಲು ಕಾಲೋನಿ ಮಾಡೋಣ ಎಂದು ಪ್ರಯೋಗ ಶುರು ಮಾಡಿರುವುದೇಕೆ?

· ಟೆರಾ ಫಾರ್ಮಿಂಗ್ ಎಂದರೇನು? ಅಲ್ಲಿನ ಭೂಮಿಯನ್ನು ಹದ ಮಾಡಿ ವ್ಯವಸಾಯ ಮಾಡಬಹುದೆ?

 

 

Leave a Reply