ಮಹಿಳೆ ನಡೆದು ಬಂದ ದಾರಿ-೪
ಸ್ವಾತಂತ್ರ್ಯಾನಂತರದ ಸಮಯದಲ್ಲಿ ಮಹಿಳಾ ಶಿಕ್ಷಣ:
1950 ರಲ್ಲಿ ಸಂವಿಧಾನವು ಶಿಕ್ಷಣದ ಬಗೆಗಿನ ಪರೋಕ್ಷ ಹಾಗೂ ಅಪರೋಕ್ಷ ಪರಿಣಾಮಗಳನ್ನು ಹೊಂದಿರುವ ಸಾಕಷ್ಟು ಸಂಖ್ಯೆಯ ಪ್ರಮುಖ ಪ್ರಾಂತಗಳನ್ನು ಜೋಡಿಸಿಕೊಂಡಿತು. ಎರಡು ವರ್ಷಗಳ ನಂತರ ದೇಶವು ಪಂಚ ವಾರ್ಷಿಕ ಯೋಜನೆಗಳ ಮೂಲಕ ಯೋಜಿತ ಅಭಿವೃದ್ಧಿಯ ಹೊಸ ಯುಗವನ್ನು ಪ್ರವೇಶಿಸಿತು. ಮೊದಲನೆಯ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣವನ್ನು ಯೋಜಿತ ಅಭಿವೃದ್ಧಿಯ ಯಶಸ್ವಿ ಸಾಧನೆಗೆ ಒಂದು ವಾಹಕವನ್ನಾಗಿ ಕಲ್ಪಿಸಲಾಯಿತು. ವಿಶ್ವ ವಿದ್ಯಾಲಯದ ಶೈಕ್ಷಣಿಕ ಆಯೋಗದಿಂದ ಪಾಠಗಳನ್ನು ಪಡೆಯಲಾಯಿತು.
1. ರಾಧಾಕೃಷ್ಣನ್ ಆಯೋಗ (1948), ವಿಶ್ವ ವಿದ್ಯಾಲಯದ ಶೈಕ್ಷಣಿಕ ಆಯೋಗ:
ಮಹಿಳಾ ಶಿಕ್ಷಣದ ಬಗೆಗಿನ ಮಹತ್ವವನ್ನು ಆಯೋಗವು ನಿರೀಕ್ಷಿಸಿದಂತೆ ಮಹಿಳೆಗೆ ಶಿಕ್ಷಣವಿಲ್ಲದಿದ್ದರೆ ಜನರು ಸುಶಿಕ್ಷಿತರಾಗುವುದಿಲ್ಲವೆಂಬ ಸತ್ಯವನ್ನು ಮನಗಾಣಲಾಯಿತು. ಒಂದು ವೇಳೆ, ಸಾಮಾನ್ಯ ಶಿಕ್ಷಣವು ಕೇವಲ ಪುರುಷರಿಗಾಗಿಯೇ ಅಥವಾ ಸ್ತ್ರೀಯರಿಗಾಗಿಯೇ ಎಂದು ಮೀಸಲಾದಲ್ಲಿ, ಆ ಅವಕಾಶವನ್ನು ಸ್ತ್ರೀಯರಿಗಾಗಿಯೇ ಕೊಡಬೇಕು, ಅವರಿಂದಲೇ ಮಾತ್ರ ಮುಂದಿನ ಪೀಳಿಗೆಗೆ ಅದು ವರ್ಗಾವಣೆ ಹೊಂದುತ್ತದೆ ಎಂದು ಆಯೋಗವು ಅರಿತಿತು. ಅಷ್ಟೇ ಅಲ್ಲ, ಆಯೋಗವು ಇನ್ನೂ ಹೆಚ್ಚಿನ ಅವಲೋಕನವನ್ನು ಮಾಡಿ, ಪುರುಷ ಹಾಗೂ ಮಹಿಳೆಯರು ಕೇವಲ ಇತರರನ್ನು ಅನುಕರಿಸುವುದರಿಂದ ತಮ್ಮ ಸ್ವಂತ ಸ್ವಭಾವವನ್ನು ಬದಲಿಸಿಕೊಳ್ಳಲಾರರು; ತಮ್ಮ ಶಿಕ್ಷಣದಿಂದ ಮಾತ್ರವೇ ಸಾಮಾನ್ಯವಾಗಿ ಅವರು ಒಬ್ಬರಿನ್ನೊಬ್ಬರ ಜೊತೆಗಿನ ಸಂಬಂಧವನ್ನು ಬಲಪಡಿಸಿಕೊಳ್ಳುತ್ತಾರೆ ಎಂದು ಅರಿತಿತು. ಮಹಿಳೆಯು ಮನೆಯನ್ನು ಸರಿತೂಗಿಸಿಕೊಂಡು ಹೋಗುವ ಬಗೆಗಿನ ಎಲ್ಲ ಸಮಸ್ಯೆಗಳ ಹಾಗೂ ಅವುಗಳನ್ನು ಎದುರಿಸುವಂಥ ಕೌಶಲ್ಯಗಳ ಬಗ್ಗೆ ಅರಿತಿರಬೇಕು. ಅವರಿಗೆ ಮಕ್ಕಳನ್ನು ಮನೆ ಹಾಗೂ ನರ್ಸರಿ ಶಾಲೆಗಳಲ್ಲಿ ಬೆಳೆಸುವ ಬಗೆಗಿನ ಪ್ರಾಯೋಗಿಕ ಅನುಭವಗಳನ್ನು ಒದಗಿಸಬೇಕು. ಇವುಗಳ ಬಗ್ಗೆ ಮಹಿಳಾ ಅಧ್ಯಯನದ ವಿಶೇಷ ಕೋರ್ಸುಗಳನ್ನು ಒದಗಿಸಬೇಕು. ಇವುಗಳು ಮನೆಯ ಅರ್ಥಶಾಸ್ತ್ರ, ಮಕ್ಕಳ ಆರೈಕೆ, ಲಲಿತ ಕಲೆಗಳು ಇತ್ಯಾದಿಗಳ ಬಗ್ಗೆ ಇರುತ್ತವೆ. ಮಹಿಳಾ ವಿದ್ಯಾರ್ಥಿಗಳು ನಾಗರಿಕರಾಗಿ ಹಾಗೂ ಮಹಿಳೆಯಾಗಿ ಸಾಮಾನ್ಯವಾಗಿ ಇದಕ್ಕಾಗಿ ಸಿದ್ಧವಾಗಲು ತಮ್ಮ ಸಹಜ ಸ್ಥಳ ಹಾಗೂ ಸಹಜ ಸಮಾಜದಲ್ಲಿ ಸಹಾಯವನ್ನು ಪಡೆಯುವಂತಾಗಬೇಕು. ಕಾಲೇಜಿನ ಕಾರ್ಯಕ್ರಮಗಳು ಅವರಿಗೆ ಹಾಗೆ ಮಾಡಲು ಸಾಧ್ಯವಾಗುವಂತೆ ರೂಪಿಸಲ್ಪಡಬೇಕು. ಸೌಜನ್ಯ ಹಾಗೂ ಸಾರ್ವಜನಿಕ ಜವಾಬ್ದಾರಿಯ ಮಾನದಂಡಗಳ ಪಾಠಗಳು ಕಾಲೇಜಿನಲ್ಲಿ ಪುರುಷರಿಂದ ಒತ್ತಿಹೇಳಲ್ಪಡಬೇಕು.
ಮಹಿಳಾ ಶಿಕ್ಷಣದ ಬಗೆಗಿನ ವಿಶ್ವ ವಿದ್ಯಾಲಯದ ಆಯೋಗದ ಶಿಫಾರಸುಗಳು:
1. ಮೂಲತಃ ಪುರುಷರಿಗೆ ಯೋಜಿಸಲಾದ ಸಾಮಾನ್ಯ ಸೌಕರ್ಯಗಳು ಹಾಗೂ ಸೌಲಭ್ಯಗಳು, ಜೀವನದ ಸಭ್ಯತೆಗಳು ಕಾಲೇಜಿನ ಮಹಿಳೆಯರಿಗೂ ಒದಗಿಸುವಂತಾಗಬೇಕು. ಆದರೆ ಮಹಿಳೆಯರು ಇದಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯಬೇಕು.
2. ಶೈಕ್ಷಣಿಕ ಅವಕಾಶಗಳಲ್ಲಿ ಮಹಿಳೆಯರಿಗೆಂದು ಯಾವುದೇ ಪ್ರಕಾರದ ಕಡಿತವೂ ಇರಬಾರದು. ಅವಕಾಶಗಳಲ್ಲಿ ಇನ್ನೂ ಹೆಚ್ಚಳವೇ ಇರಬೇಕು.
3. ಮಹಿಳೆಯರಿಗೆ ಅವರ ನಿಜವಾದ ಶೈಕ್ಷಣಿಕ ಆಸಕ್ತಿಗಳ ಸ್ಪಷ್ಟ ದೃಷ್ಟಿಯನ್ನು ಪಡೆಯಲು ಸಹಾಯವಾಗಲೆಂದು ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಸ್ತ್ರೀಯರ ಅತ್ಯಂತ ಬುದ್ಧಿವಂತಿಕೆಯಿಂದೊಡಗೂಡಿರುವ ಶೈಕ್ಷಣಿಕ ಮರ್ಗದರ್ಶನವಿರಬೇಕು. ಅವರು ಕೇವಲ ಪುರುಷರನ್ನು ಅನುಕರಿಸಲು ಪ್ರಯತ್ನಿಸದೇ ಕೊನೆಯವರೆಗೂ ಪುರುಷರು ಹಾಗೂ ಸ್ತ್ರೀಯರು ತಮತಮಗೆ ಅನುರೂಪವಾದಂಥ ಒಳ್ಳೆಯ ಶಿಕ್ಷಣವನ್ನು ಪಡೆಯುವ ಬಯಕೆಯನ್ನು ಹೊಂದಿರಬೇಕು. ಮಹಿಳೆ ಹಾಗೂ ಪುರುಷರ ಶಿಕ್ಷಣವು ಸಾಮಾನ್ಯವಾಗಿ ಎಲ್ಲ ರೀತಿಯಿಂದಲೂ ಒಂದೇ ಆಗಿರಬೇಕು. ಆದರೆ ಸಾಮಾನ್ಯವಾಗಿ ಈಗಿನ ನಿದರ್ಶನದಂತೆ ಎಲ್ಲ ರೀತಿಗಳಿಂದಲೂ ಒಂದೇ ಆಗಿರಬಾರದು.
4. ಮಹಿಳಾ ವಿದ್ಯಾರ್ಥಿಗಳು ಸಾಮಾನ್ಯವಾಗಿ ನಾಗರಿಕರಾಗಿಯೂ ಹಾಗೂ ಮಹಿಳೆಯಾಗಿಯೂ ಸಹಜವಾದ ಸಮಾಜದಲ್ಲಿ ತಮ್ಮ ಸಹಜವಾದ ಸ್ಥಾನವನ್ನು ಹೊಂದಲು ಸಿದ್ಧವಾಗಲು ಸಹಾಯವಾಗುವಂತೆ ಹಾಗೂ ಕಾಲೇಜಿನ ಕಾರ್ಯಕ್ರಮಗಳು ಕೂಡ ಅದಕ್ಕೆ ತಕ್ಕಂತೆಯೇ, ಅವರಿಗೆ ಅನುಕರಿಸಲು ಸಾಧ್ಯವಾಗುವಂತೆ ರೂಪಿಸಲ್ಪಡಬೇಕು.
5. ಶೈಕ್ಷಣಿಕ ಸಲಹೆಗಾರರ ಮೂಲಕ ಹಾಗೂ ಗೃಹ ಅರ್ಥಶಾಸ್ತ್ರ ಹಾಗೂ ಗೃಹ ಮೇಲ್ವಿಚಾರಣೆಗಳ ಶಿಕ್ಷಣದ ವಿರುದ್ಧವಾಗಿ ಚಾಲ್ತಿಯಲ್ಲಿರುವ ಪೂರ್ವಾಗ್ರಹಗಳ ಉದಾಹರಣೆಗಳ ಮೂಲಕ ಆ ಅಡೆತಡೆಗಳನ್ನು ನಿವಾರಿಸಬೇಕು.
6. ಮಿಶ್ರ ಕಾಲೇಜುಗಳಲ್ಲಿ ಜೀವನದ ಸಭ್ಯತೆಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳು ಪುರುಷರ ಕಡೆಯಿಂದ ಒತ್ತು ನೀಡುವಂತಿರಬೇಕು.
7. ಪುರುಷರು ಹಾಗೂ ಮಹಿಳಾ ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾಗುವಂಥ ಹೊಸ ಕಾಲೇಜುಗಳು ನಿಜವಾಗಿಯೂ ಸಹಶಿಕ್ಷಣದ ಸಂಸ್ಥೆಗಳಾಗಿರಬೇಕು, ಪುರುಷರಂತೆಯೇ ಮಹಿಳೆಯ ಜೀವನದ ಬೇಡಿಕೆಗಳನ್ನೂ ಕುರಿತು ಚಿಂತಿಸಿ, ಗಮನದಲ್ಲಿರಿಸಿಕೊಂಡು ಸ್ಥಾಪನೆಯಾಗಿರಬೇಕು. ಇಂಥ ಕಾಲೇಜುಗಳನ್ನು ಒಂದು ವೇಳೆ ಸ್ಥಾಪಿಸಿದಲ್ಲಿ ಇಂಥವುಗಳನ್ನು ಹೊರತುಪಡಿಸಿದರೆ, ಪ್ರತ್ಯೇಕ ಶಿಕ್ಷಣವನ್ನು ಸಹಶಿಕ್ಷಣದೊಂದಿಗೆ ಹೋಲಿಸಲು ಯಾವುದೇ ಮೌಲಿಕ ಮಾನದಂಡವಿಲ್ಲ.
8. ಸಮಾನ ಕೆಲಸಕ್ಕಾಗಿ ಸಮಾನ ವೇತನವು ಜಾರಿಯಲ್ಲಿ ಬಂದಿದ್ದು, ಪುರುಷರಂತೆಯೇ ಮಹಿಳೆಯರಿಗೂ ಅದು ಜಾರಿಯಲ್ಲಿ ಬರಬೇಕು.
ಡಾ. ರಾಧಾಕೃಷ್ಣನ್ನರು ಸಹಶಿಕ್ಷಣದ ಕಾಲೇಜುಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು, ಬಾಲಿಕೆಯರಿಗೆ ಶೈಕ್ಷಣಿಕ ಅವಕಾಶಗಳ ವಿಸ್ತರಣೆ, ಅವರಿಗೆ ಸರಿಯಾದ ಸ್ಥಾನಮಾನಗಳನ್ನು ಸ್ಥಾಪಿಸುವುದು, ಕೆಲವು ರೀತಿಯ ವಿಶೇಷ ಶಿಕ್ಷಣವನ್ನು ಒದಗಿಸುವುದು ಎಂದು ಶಿಫಾರಸು ಮಾಡಿದರು. ಅಲ್ಲದೆ ಪುರುಷ ಶಿಕ್ಷಕರಂತೆಯೇ ಮಹಿಳಾ ಶಿಕ್ಷಕಿಯರಿಗೂ ಕೂಡ ಸಮಾನ ವೇತನವನ್ನು ಕೊಡುವ ಸೌಲಭ್ಯವನ್ನೂ ಶಿಫಾರಸು ಮಾಡಿದರು.
ಭಾರತೀಯ ಸಂವಿಧಾನದ 45 ನೆಯ ಪರಿಚ್ಛೇದದ ಪ್ರಕಾರ : ರಾಜ್ಯವು 6-14 ವರ್ಷ ವಯಸ್ಸಿನವರಿಗೆ ಉಚಿತ ಹಾಗೂ ಕಡ್ಡಾಯ, ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವನ್ನು ನಿಡಲು ಪ್ರಯತ್ನಿಸುತ್ತಿದೆ. ಪರಿಚ್ಛೇದ 16 ಇದು ಸಾರ್ವಜನಿಕ ಉದ್ಯೋಗದಲ್ಲಿ ಲೈಂಗಿಕತೆಯ ಆಧಾರದ ಮೇಲೆ ತಾರತಮ್ಯವನ್ನು ಮಾಡಬಾರದೆಂಬ ನಿಬಂಧನೆಯನ್ನು ಹೇರಿದೆ. ವಿಧಿ 15 (3) ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗೆ ವಿಶೇಷ ನಿಬಂಧನೆಗಳನ್ನು ಮಾಡಲು ರಾಜ್ಯಕ್ಕೆ ಅಧಿಕಾರ ನೀಡಿತು. 42 ನೇ ವಿಧಿಯು ಕೆಲಸದ ಮತ್ತು ಮಾತೃತ್ವದ ರಜೆಯ ಪರಿಹಾರಕ್ಕಾಗಿ ನ್ಯಾಯಯುತ ಹಾಗೂ ಮಾನವೀಯ ಪರಿಸ್ಥಿತಿಗಳ ಸೌಲಭ್ಯವನ್ನು ಒದಗಿಸುವಲ್ಲಿ ರಾಜ್ಯವು ಮಾಡಬೇಕಾದ ನಿಬಂಧನೆಗಳೊಂದಿಗೆ ವ್ಯವಹರಿಸುತ್ತದೆ,
2. ಮುದಲಿಯಾರ್ ಕಮಿಶನ್:
ಮೊದಲನೆಯ ಯೋಜನೆಯ ಪ್ರಾರಂಭವು ಎ. ಮುದಲಿಯಾರರವರ ನೇತೃತ್ವದಲ್ಲಿ ಮಾಧ್ಯಮಿಕ ಶಿಕ್ಷಣದ ಆಯೋಗದ ನೇಮಕದೊಂದಿಗೆ ಕಾಕತಾಳೀಯವಾಗಿ ಹೊಂದಿಕೆಯಾಯಿತು. ಸಮಸ್ಯೆಗಳು ಮತ್ತು ಅಡೆತಡೆಗಳ ವಿವರಗಳನ್ನು ಅರಿಯಲು ಮತ್ತು ಅವುಗಳನ್ನು ಎದುರಿಸಲು ಮಾರ್ಗಗಳನ್ನು ಸೂಚಿಸಲು ಸರಕಾರವು ವಿಶ್ವವಿದ್ಯಾಲಯಗಳ ಶಿಕ್ಷಣ ಮತ್ತು ಪ್ರೌಢಶಿಕ್ಷಣಕ್ಕಾಗಿ ವಿಶೇಷ ಆಯೋಗಗಳನ್ನು ರಚಿಸಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು. ಆದರೆ ಪ್ರಾಥಮಿಕ ಶಿಕ್ಷಣದ ಸಮಸ್ಯೆಗಳನ್ನು ವಿಚಾರಿಸಲು ಇಲ್ಲಿಯವರೆಗೆ ಯಾವುದೇ ವಿಶೇಷ ಆಯೋಗಗಳನ್ನು ರಚಿಸಲಾಗಿಲ್ಲ. ಪ್ರಾಥಮಿಕ ಶಿಕ್ಷಣವು ಶಿಕ್ಷಣದ ಗುಣಮಟ್ಟ ಹಾಗೂ ಪ್ರಮಾಣ ಎರಡರಲ್ಲೂ ಶೈಕ್ಷಣಿಕ ಅಭಿವೃದ್ಧಿಯ ಪ್ರಮುಖ ಹಂತವಾಗಿದೆ. ಬಾಲಕಿಯರ ಶಿಕ್ಷಣದ ಕುರಿತಾದ ಮಾಧ್ಯಮಿಕ ಶಿಕ್ಷಣದ ಆಯೋಗವು ಇತರ ವಿಷಯಗಳೊಂದಿಗೆ ‘ಎಲ್ಲ ನಾಗರಿಕರು ತಮ್ಮ ನಾಗರಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ನಿರ್ವಹಿಸಬೇಕಾದ ಪ್ರಜಾಪ್ರಭುತ್ವ ಸಮಾಜದಲ್ಲಿ ಹುಡುಗರು ಹಾಗೂ ಹುಡುಗಿಯರು ಸಾಧಿಸಿದ ಬೌದ್ಧಿಕ ಬೆಳವಣಿಗೆಯ ಗುಣಮಟ್ಟದಲ್ಲಿನ ವ್ಯತ್ಯಾಸಗಳಿಗೆ ಕಾರಣವಾಗುವ ಅಂಶಗಳನ್ನು ಊಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಬಾಲಕಿಯರ ಶಿಕ್ಷಣದ ಪ್ರಗತಿಗೆ ಅಡ್ಡಿಯಾಗುವ ತೊಂದರೆಗಳನ್ನು ಎದುರಿಸಲು ಮತ್ತು ಬಾಲಕಿಯರ ಶಿಕ್ಷಣವನ್ನು ಬಾಲಕರ ಶಿಕ್ಷಣದೊಂದಿಗೆ ಸಮಾನವಾಗಿ ತರಲು ಶಿಫಾರಸುಗಳನ್ನು ಮಾಡಲು 1958 ರಲ್ಲಿ ಸರಕಾರವು ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯನ್ನು ನೇಮಿಸಿತು. ಸಮಿತಿಯು ಸಾಮಾನ್ಯವಾಗಿ ಸರಕಾರದಿಂದ ಅಂಗೀಕರಿಸಲ್ಪಟ್ಟ ಹಲವಾರು ಕ್ರಮಗಳನ್ನು ಶಿಫಾರಸು ಮಾಡಿತು. ಮೂಲಭೂತವಾಗಿ ಈ ಕ್ರಮಗಳು ಹೀಗಿವೆ:
ಪ್ರಾಥಮಿಕ ಹಂತದಲ್ಲಿ ಬಾಲಕಿಯರ ಶಿಕ್ಷಣದ ವಿಸ್ತರಣೆಗೆ ಮೊದಲ ಆದ್ಯತೆ. ಹುಡುಗಿಯರ ಶಿಕ್ಷಣದ ವಿರುದ್ಧ ಸಾಂಪ್ರದಾಯಿಕ ಪೂರ್ವಾಗ್ರಹಗಳ ವಿರುದ್ಧ ಪ್ರಚಾರ; ಮಹಿಳಾ ಶಿಕ್ಷಕರ ನೇಮಕ; ಹೈಯರ್ ಸೆಕೆಂಡರಿ ಹಂತದಲ್ಲಿ ಬಾಲಕಿಯರ ಬೇಡಿಕೆಯಂತೆ ಪ್ರತ್ಯೇಕ ಶಾಲೆಗಳು; ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ಕೊಡುವುದಕ್ಕಾಗಿ 6-11 ವಯಸ್ಸಿನ ಬಾಲಕಿಯರ 80% ರ ವರೆಗೆ ದಾಖಲಿಸಲಾದ ಎಲ್ಲಾ ರಾಜ್ಯಗಳಿಗೆ ವಿಶೇಷ ಸಹಾಯವನ್ನು ಕೇಂದ್ರದಿಂದ ಕೊಡಲಾಗುವುದು. ಹುಡುಗರು ಮತ್ತು ಹುಡುಗಿಯರ ನಡುವಿನ ಸಮಾನತೆಯನ್ನು ಆದಷ್ಟು ಬೇಗ ತಲುಪುವುದು; ಮಹಿಳೆಯರ ಉನ್ನತ ಶಿಕ್ಷಣಕ್ಕಾಗಿ ಯುಜಿಸಿಯಿಂದ ವಿಶೇಷ ನಿಧಿಯನ್ನು ನಿಗದಿ ಪಡಿಸುವುದು. ಮತ್ತು ಮಹಿಳಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಮಂಡಳಿಯ ಸ್ಥಾಪನೆ; 1963 ರಲ್ಲಿ ಬಾಲಕ ಮತ್ತು ಬಾಲಿಕೆಯರ ಪಠ್ಯಕ್ರಮವನ್ನು ಪ್ರತ್ಯೇಕಿಸಲು ಸರಕಾರ ಮತ್ತೊಂದು ಸಮಿತಿಯನ್ನು ನೇಮಿಸಿತು. ಪ್ರಾಥಮಿಕ ಹಂತದ ವರೆಗೆ ಬಾಲಕ ಮತ್ತು ಬಾಲಿಕೆಯರಿಗಾಗಿ ಸಾಮಾನ್ಯ ಪಠ್ಯಕ್ರಮವನ್ನು ಸಮಿತಿ ಪ್ರಸ್ತಾಪಿಸಿತು. ಮಧ್ಯಮ ಹಂತದಲ್ಲಿ ಎರಡೂ ಲಿಂಗಗಳಿಗೆ ಗೃಹ-ವಿಜ್ಞಾನದ ಪ್ರಮುಖ ಪಠ್ಯಕ್ರಮವನ್ನು ಮತ್ತು ದ್ವಿತೀಯ ಹಂತದ ಸಾಮಾನ್ಯ ಕೋರ್ಸುಗಳಲ್ಲಿ ಕರಕುಶಲ ಅಥವಾ ಉತ್ಪಾದಕ ಕಾರ್ಮಿಕರನ್ನು ಸೇರಿಸಿಲು ಸಮಿತಿ ಶಿಫಾರಸು ಮಾಡಿದೆ.
3. ಮಹಿಳಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಆಯೋಗ (ದುರ್ಗಾಬಾಯಿ ದೇಶಮುಖ ಆಯೋಗ, 1958-59)
ಸ್ವಾತಂತ್ರ್ಯದ ನಂತರ ಬಾಲಿಕೆಯರು ಹಾಗೂ ಮಹಿಳೆಯರ ಶಿಕ್ಷಣದಲ್ಲಿಯ ಸಮಸ್ಯೆಗಳು ಒಂದು ಹೊಸ ಮಹತ್ವವನ್ನು ಪಡೆದವು. ಯೋಜನಾ ಆಯೋಗದ ಶೈಕ್ಷಣಿಕ ತಂಡವು ಜುಲೈ 1957 ರಲ್ಲಿ, “ಬಾಲಿಕೆಯರ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತದ ಶಿಕ್ಷಣದ ರೀತಿಗೆ ಸಂಬಂಧಿಸಿದಂತೆ ಅನೇಕ ಅಂಶಗಳನ್ನು ಅರಿಯಲೆಂದು ಹಾಗೂ ಅಭ್ಯಸಿಸಲೆಂದು ಸೂಕ್ತವಾದ ಆಯೋಗವನ್ನು ನಿಯಮಿಸಬೇಕು. ಹಾಗೂ ಈಗಿನ ಶಿಕ್ಷಣ ಪದ್ಧತಿಯು ಅವರಿಗೆ ಒಂದು ಸಂತೋಷ ಹಾಗೂ ಹೆಚ್ಚು ಉಪಯೋಗಕರವಾದ ಜೀವನವನ್ನು ಸಾಗಿಸಲು ಸಹಾಯಕವಾಗಿದೆಯೇ ಎಂದು ಪರೀಕ್ಷಿಸಬೇಕು” ಎಂದು ಶಿಫಾರಸು ಮಾಡಿತು. 1957 ರಲ್ಲಿ ರಾಜ್ಯ ಶೈಕ್ಷಣಿಕ ಸಚಿವರುಗಳ ಸಭೆಯು ಕೂಡ ಒಂದು ವಿಶೇಷ ಸಮಿತಿಯನ್ನು ಮಹಿಳಾ ಶಿಕ್ಷಣದ ಎಲ್ಲ ಪ್ರಶ್ನೆಗಳನ್ನು ಪರೀಕ್ಷಿಸಲೆಂದು ನಿಯಮಿಸಲು ಒಪ್ಪಿಕೊಂಡಿತು.
ಅದಕ್ಕನುಗುಣವಾಗಿ ಮಹಿಳಾ ಶಿಕ್ಷಣದ ರಾಷ್ಟ್ರಿಯ ಸಮಿತಿಯು ಸರಕಾರದಿಂದ ಮೇ, 1958ರಲ್ಲಿ ಸ್ಥಾಪಿತಗೊಂಡಿತು. ಅದಕ್ಕೆ ಶ್ರೀಮತಿ ದುರ್ಗಾಬಾಯಿ ದೇಶಮುಖರವರು ಚೇರಮನ್ ಆಗಿದ್ದರು. ಸಮಿತಿಯು ತನ್ನ 1959ರ ವರದಿಯಲ್ಲಿ, ಬಾಲಕ ಹಾಗೂ ಬಾಲಿಕೆಯರ ಶಿಕ್ಷಣದಲ್ಲಿ ಸಮಾನತೆಯನ್ನು ಸ್ಥಾಪಿಸುವುದಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕೆಂದು ಶಿಫಾರಸು ಮಾಡಿತು. ಹಾಗೂ ಕೇಂದ್ರ ಹಾಗೂ ರಾಜ್ಯಗಳು ಈ ಸಮಸ್ಯೆಯ ತೀವ್ರತೆಯನ್ನು ಹಾಗೂ ತೊಂದರೆಗಳನ್ನು ಎದುರಿಸಲು ಪ್ರಯತ್ನಗಳನ್ನು ಮಾಡಬೇಕೆಂದೂ ಹೇಳಿತು. ಅದು ಮಿಡಲ್ ಸ್ಕೂಲಿನ ಹಂತದ ವರೆಗೂ ಸಹಶಿಕ್ಷಣವನ್ನು ಶಿಫಾರಸು ಮಾಡಿತು. ಆದರೆ ಉನ್ನತ ಮಟ್ಟದಲ್ಲಿ ಬಾಲಿಕೆಯರಿಗಾಗಿ ಎಂದು ಬೇರ್ಪಟ್ಟಂಥ ಸಂಸ್ಥೆಗಳು ಬಾಲಿಕೆಯರಿಗಾಗಿಯೇ ಎಂದು ಹೆಚ್ಚು ವೈವಿಧ್ಯಮಯವಾದ ಪಠ್ಯಕ್ರಮವನ್ನು ಹೊಂದಿರಬೇಕು. ಸಮಿತಿಯು ಶಾಲೆಯ ತಾಯಿಯರಿಗಾಗಿ ಶಿಶುಸದನಗಳು, ಮಹಿಳಾ ಶಿಕ್ಷಕಿಯರಿಗೆ ತರಬೇತಿ, ಹಾಗೂ ಪ್ರೌಢ ಮಹಿಳೆಯರಿಗೆ ಉದ್ಯೋಗಾವಕಾಶಗಳ ಪುಷ್ಕಳ ಸೌಕರ್ಯಗಳನ್ನು ಅಪೇಕ್ಷಿಸಿತು. ಅಲ್ಲದೆ, ಬಾಲಿಕೆಯರ ಹೆಚ್ಚಿನ ಶಾಲಾ ದಾಖಲಾತಿಗೆ ಅವಕಾಶ ಕಲ್ಪಿಸಲೆಂದು ಕೂಡ ಹೆಚ್ಚಿನ ಪ್ರಯತ್ನಗಳನ್ನು ಸ್ವಯಂಪ್ರೇರಿತ ಸಂಸ್ಥೆಗಳೂ ಮಾಡಿದವು. ಬಾಲಿಕೆಯರಿಗಾಗಿ ಎಲ್ಲ ಹಂತಗಳಲ್ಲಿಯೂ ವಿದ್ಯಾರ್ಥಿವೇತನದ ಹೆಚ್ಚಿನ ಸೌಲಭ್ಯವನ್ನು, ಅದೂ ವಿಶೇಷವಾಗಿ ವಿಶ್ವವಿದ್ಯಾಲಯ ಹಂತದಲ್ಲಿ ಕೊಡಲಾಯಿತು. ಒಂದು ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯು 1958ರಲ್ಲಿ ಸರಕಾರದಿಂದ ನೇಮಿಸಲ್ಪಟ್ಟಿತು. ಅದರ ಉದ್ದೇಶವು ಬಾಲಿಕೆಯರ ಶಿಕ್ಷಣದ ಪ್ರಗತಿಯಲ್ಲಿಯ ಅಡ್ಡಿಗಳನ್ನು ನಿವಾರಿಸುವದಾಗಿತ್ತು. ಹಾಗೂ ಬಾಲಿಕೆಯರ ಹಾಗೂ ಬಾಲಕರ ಶೈಕ್ಷಣಿಕ ಸಮಾನತೆಯನ್ನು ತರುವುದಕ್ಕಾಗಿ ಅನೇಕ ಶಿಫಾರಸುಗಳನ್ನು ಮಾಡಲೂ ಅದು ಉದ್ದೇಶವನ್ನು ಹೊಂದಿತ್ತು. ಸಮಿತಿಯು ಸರಕಾರದಿಂದ ಸಾಮಾನ್ಯವಾಗಿ ಒಪ್ಪಿಕೊಳ್ಳಬಹುದಾದ ಅನೇಕ ಕ್ರಮಗಳನ್ನು ಶಿಫಾರಸು ಮಾಡಿತು. ಮೂಲಭೂತವಾಗಿ, ಈ ಕ್ರಮಗಳು: ಬಾಲಿಕೆಯರಿಗೆ ಪ್ರಾಥಮಿಕ ಹಂತದಲ್ಲಿಯ ಶಿಕ್ಷಣದ ವಿಸ್ತರಣೆಗೆ ಹೆಚ್ಚಿನ ಆದ್ಯತೆ. ಮಹಿಳಾ ಶಿಕ್ಷಣದ ವಿರುದ್ಧದ ಸಾಂಪ್ರದಾಯಿಕ ಮೂಢನಂಬಿಕೆಗಳು. ಹೊಸ ಮಹಿಳಾ ಶಿಕ್ಷಕಿಯರ ನೇಮಕಾತಿ. ಉನ್ನತ ಪ್ರೌಢ ಹಂತದಲ್ಲಿ ಬಾಲಿಕೆಯರಿಗಾಗಿ ಪ್ರತ್ಯೇಕ ಶಾಲೆಗಳ ಬೇಡಿಕೆಯನ್ನು ಪೂರೈಸುವುದು. 6-11 ವಯೋಮಾನದ ವರೆಗಿನ ಬಾಲಿಕೆಯರ ದಾಖಲಾತಿಯ 80% ವರೆಗೆ ರಾಜ್ಯ ಹಾಗೂ ಕೇಂದ್ರಗಳಿಂದ ವಿಶೇಷ ನೆರವು ಹಾಗೂ ಪ್ರೋತ್ಸಾಹ. ಬಾಲಿಕೆಯರು ಹಾಗೂ ಬಾಲಕರ ಮಧ್ಯದ ಅಂತರವನ್ನು ಸಾಧ್ಯವಿದ್ದಷ್ಟು ಹೋಗಲಾಡಿಸುವುದು. ಯುಜಿಸಿಯಿಂದ ಉನ್ನತ ಶಿಕ್ಷಣಕ್ಕಾಗಿ ವಿಶೇಷ ಧನಸಹಾಯದ ಸ್ವಾಮ್ಯ. ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯನ್ನು ಸ್ಥಾಪಿಸುವುದು.
ಸಮಿತಿಯ ಕೆಲವು ಮಹತ್ವದ ಶಿಫಾರಸುಗಳು:
1. ಮಹಿಳಾ ಶಿಕ್ಷಣವು ಒಂದು ಪ್ರಮುಖ ಹಾಗೂ ವಿಶೇಷ ಸಮಸ್ಯೆಯೆಂದು ಮುಂಬರುವ ಸಾಕಷ್ಟು ವರ್ಷಗಳ ವರೆಗೂ ತಿಳಿದು ಆ ಬಗೆಗಿನ ತೊಂದರೆಗಳನ್ನು ಎದುರಿಸುವುದಕ್ಕಾಗಿ ಅನೇಕ ಧೈರ್ಯದ ಹಾಗೂ ನಿರ್ದಿಷ್ಟ ಪ್ರಯತ್ನಗಳನ್ನು ಮಾಡುವುದು.
2. ಹುಡುಗಿಯರ ಹಾಗೂ ಮಹಿಳೆಯರ ಶಿಕ್ಷಣಕ್ಕಾಗಿ ಒಂದು ರಾಷ್ಟ್ರೀಯ ಸಮಿತಿಯನ್ನು ಸಾಧ್ಯವಾದಷ್ಟು ಬೇಗನೆ ಸಂಯೋಜಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು.
3. ಕೇಂದ್ರದಲ್ಲಿ ಒಂದು ಪ್ರತ್ಯೇಕ ಘಟಕವು ಮಹಿಳಾ ಶಿಕ್ಷಣಕ್ಕಾಗಿ ಒಬ್ಬ ಶೈಕ್ಷಣಿಕ ಸಲಹಾಕಾರನ ಅಡಿಯಲ್ಲಿ ರಚಿತವಾಗಬೇಕು.
4. ಪ್ರತಿಯೊಂದು ರಾಜ್ಯದಲ್ಲಿಯೂ ಮಹಿಳೆಯರು ಜಂಟಿ ನಿರ್ದೇಶಕರಾಗಿ ನಿಯುಕ್ತಿಗೊಳ್ಳಬೇಕು ಹಾಗೂ ಹೆಣ್ಣು ಮಗುವಿನ ಶಿಕ್ಷಣದ ಉಸ್ತುವಾರಿಯನ್ನು ನೋಡಿಕೊಳ್ಳಬೇಕು.
5. ಮಹಿಳಾ ಶಿಕ್ಷಕಿಯರಿಲ್ಲದ ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯರನ್ನು ನಿಯುಕ್ತಗೊಳಿಸಬೇಕು.
6. ಪ್ರಾಥಮಿಕ ಘಟ್ಟದಲ್ಲಿ ಬಾಲಕರು ಹಾಗೂ ಬಾಲಿಕೆಯರಿಗೆ ಒಂದೇ ವಿಧವಾದ ಪಠ್ಯಕ್ರಮವನ್ನು ಇಡಬೇಕು. ಮಾಧ್ಯಮಿಕ ಘಟ್ಟದಲ್ಲಿ ವಿಭಿನ್ನ ಕೋರ್ಸುಗಳನ್ನು ಕಲಿಸುವಾಗ ವಿಭಿನ್ನ ಪಠ್ಯಕ್ರಮಗಳ ಅಗತ್ಯವಿರುತ್ತದೆ.
7. ಸಾಮಾನ್ಯ ಶಿಕ್ಷಣದೊಂದಿಗೆ ‘ಪ್ರಾಥಮಿಕ’ ವಾಗಿ ಎಂದು ಮೂಲ ಶಿಕ್ಷಣವನ್ನು ವೃತ್ತಿಶಿಕ್ಷಣದ ತರಬೇತಿ ಕೋರ್ಸುಗಳಲ್ಲಿ ಅಳವಡಿಸಿಕೊಳ್ಳಬಹುದು. ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳು, ಪ್ರತ್ಯೇಕ ವೃತ್ತಿತರಬೇತಿ ಶಾಲೆಗಳು, ವಿವಿಧೋದ್ದೇಶ ಶಾಲೆಗಳು, ಶಿಶಿಕ್ಷತಾ ಶಾಲೆಗಳು ಅಥವಾ ಅಪ್ರೆಂಟಿಸ್ಶಿಪ್ ತರಗತಿಗಳು, ತರಬೇತಿ ಕೇಂದ್ರಗಳು, ಶಾಲಾ ಶಿಕ್ಷಣದ ಮುಂದುವರಿಕೆಯ ಶಾಲೆಗಳಲ್ಲಿಯ ಕಾರ್ಯಾಗಾರಗಳ ಶಾಲೆಗಳ ವೃತ್ತಿಶಿಕ್ಷಣ ವಿಭಾಗಗಳಲ್ಲಿ ಮೂಲಭೂತ ಅರ್ಹತೆಯಾಗಿ ಮಾಧ್ಯಮಿಕ ಹಾಗೂ ಪ್ರೌಢ ಶಾಲೆಗಳಲ್ಲಿಯ ಕೋರ್ಸುಗಳನ್ನು ಸಂಘಟಿಸಬಹುದು.
8. ಎಲ್ಲ ರಾಜ್ಯಗಳಲ್ಲಿಯೂ ಹೆಚ್ಚು ವಿಸ್ತರಿತವಾಗಿ ಶೈಕ್ಷಣಿಕ ಸೌಲಭ್ಯಗಳು ಸಾಂದ್ರೀಕೃತ ರೂಪದಲ್ಲಿ ವಯಸ್ಕ ಮಹಿಳೆಯರಿಗೆ ಸಿಗುವಂತಾಗಬೇಕು. ಅವುಗಳಿಂದಾಗಿ ಅ. ಮಹಿಳೆಯರನ್ನು ಮಾಧ್ಯಮಿಕ ಶಾಲಾ ಪರೀಕ್ಷೆಗೆ ಸಿದ್ಧಗೊಳಿಸಲು ಹಾಗೂ ಆ. ಪ್ರೌಢ ಶಾಲೆ ಅಥವಾ ಉಚ್ಚ ಮಾಧ್ಯಮಿಕ ಶಾಲಾ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಸಹಾಯವಾಗುವುದು.
9. ಮಹಿಳೆಯರಿಗೆ ಮನೆಯ ಉಸ್ತುವಾರಿಯೊಂದಿಗೆ ಅಥವಾ ಗೃಹಕೃತ್ಯಗಳೊಂದಿಗೆ ಒಂದಿಷ್ಟು ಬೋಧನಾ ಕಾರ್ಯದಲ್ಲಿಯೂ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಸಾಧ್ಯವಾಗುವಂತೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಅರೆಕಾಲಿಕ ಉದ್ಯೋಗಗಳನ್ನು ಮಹಿಳಾ ಶಿಕ್ಷಕಿಯರಿಗೆ ಕೊಟ್ಟು ಪ್ರೋತ್ಸಾಹಿಸಬೇಕು.
10. ಮಹಿಳಾ ಹಾಗೂ ಬಾಲಿಕೆಯರ ಶೈಕ್ಷಣಿಕ ಸಮಸ್ಯೆಗಳ ಪ್ರಮಾಣವು ಅತ್ಯಂತ ದೊಡ್ಡದಾಗಿದ್ದು ಇದನ್ನು ಪರಿಹರಿಸುವಲ್ಲಿ ಸರಕಾರದ ಹಾಗೂ ಅಧಿಕೃತವಲ್ಲದ ಸಂಘಟನೆಗಳ ಎಲ್ಲ ಸಂಪನ್ಮೂಲಗಳನ್ನೂ ಒಗ್ಗೂಡಿಸಿ ಈ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.
11. ಮಹಿಳಾ ಮತ್ತು ಬಾಲಿಕೆಯರ ಶಿಕ್ಷಣದ ಅಭಿವೃದ್ಧಿಯಲ್ಲಿ ಸಹಾಯ ಮಾಡುವ ಕಾರ್ಯದಲ್ಲಿ ಎಲ್ಲ ಅರೆ ಅಧಿಕೃತ ಸಂಘಟನೆಗಳು, ಸ್ಥಳೀಯ ಸಂಸ್ಥೆಗಳು, ಸ್ವಯಂಪ್ರೇರಿತ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು ಹಾಗೂ ಸಾರ್ವಜನಿಕ ಸದಸ್ಯರು -ಇವರೆಲ್ಲರ ಸಹಕಾರವೂ ಅತ್ಯಗತ್ಯ.
12. ಒಂದು ವೇಳೆ ಖಾಸಗಿ ಪ್ರಯತ್ನವನ್ನು ಮಾಡಲು ಯಾರೂ ಮುಂದೆ ಬರದಿದ್ದರೆ ಅಂಥ ಸಮಯದಲ್ಲಿ ರಾಜ್ಯಗಳು ಮಹಿಳಾ ಮತ್ತು ಬಾಲಿಕೆಯರ ಶಿಕ್ಷಣದ ಅಭಿವೃದ್ಧಿಯ ಉದ್ದೇಶಕ್ಕಾಗಿ ತನ್ನ ನಿಯಂತ್ರಣದಲ್ಲಿ ವಿಶೇಷ ಸಂಸ್ಥೆಗಳನ್ನು ಸ್ಥಾಪಿಸಬೇಕು.
13. ಎರಡನೆಯ ಪಂಚವಾರ್ಷಿಕ ಯೋಜನೆಯ ಉಳಿದ ಸಮಯದಲ್ಲಿ ಮಹಿಳಾ ಮತ್ತು ಬಾಲಿಕೆಯರ ಶಿಕ್ಷಣಕ್ಕಾಗಿ ಕೊನೆಯ ಪಕ್ಷ ಹತ್ತು ಕೋಟಿ ರೂಪಾಯಿಗಳಷ್ಟು ಈಗಾಗಲೇ ಕೊಟ್ಟಿರುವ ಸೌಲಭ್ಯಗಳಿಗೆ ಸೇರಿಸಿ ಮೀಸಲಾಗಿರಿಸಬೇಕು ಹಾಗೂ ಮೂರನೆಯ ಯೋಜನೆಯಲ್ಲಿ ಅವರ ಶಿಕ್ಷಣಕ್ಕಾಗಿ ಸಮರ್ಪಕವಾದ ವಿಶೇಷ ಸೌಲಭ್ಯವನ್ನು ಒದಗಿಸಬೇಕು.
14. ಈ ರೀತಿಯಾಗಿ ಎರಡನೆಯ ಪಂಚವಾರ್ಷಿಕ ಯೋಜನೆಯ ಉಳಿದಂಥ ಸಮಯದಲ್ಲಿ ಈ ಮೊತ್ತವನ್ನು ಬಾಲಿಕೆಯರ ಹಾಗೂ ಮಹಿಳೆಯರ ಶೈಕ್ಷಣಿಕ ಅಭಿವೃದ್ಧಿಗಾಗಿ ಮೀಸಲಿರಿಸಬೇಕು. ಆ ಹಣವನ್ನು ಈ ಕೆಳಗಿನ ಉದ್ದೇಶಗಳಿಗಾಗಿ ಉಪಯೋಗಿಸಬೇಕು:
ಅ. ಬಾಲಿಕೆಯರ ಮಾಧ್ಯಮಿಕ ಶಾಲೆಗಳ ಅಭಿವೃದ್ಧಿ
ಆ. ಬಾಲಿಕೆಯರ ಪ್ರೌಢ ಶಾಲೆಗಳ ಅಭಿವೃದ್ಧಿ
ಇ. ಮಹಿಳಾ ತರಬೇತಿ ಸಂಸ್ಥೆಗಳ ಅಭಿವೃದ್ಧಿ
ಈ. ಎಲ್ಲ ಹಂತಗಳಲ್ಲಿಯೂ ಬಾಲಿಕೆಯರು ಹಾಗೂ ಸಂಸ್ಥೆಗಳ ಸಿಬ್ಬಂದಿ ವರ್ಗಗಳಿಗೆ ವಸತಿಗೃಹಗಳ ನಿರ್ಮಾಣ ಹಾಗೂ
ಉ. ಪ್ರೌಢ ಮಹಿಳೆಯರಿಗೆ ವಿಶೇಷ ಶೈಕ್ಷಣಿಕ ಸೌಲಭ್ಯಗಳ ಸಂಘಟನೆ.
ಕ್ಷೇತ್ರಗಳಲ್ಲಿಯ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡಬೇಕು ಹಾಗೂ ಸಾಮಾನ್ಯ ತತ್ವಗಳ ಆಧಾರದ ಮೇರೆಗೆ ಉದಾರವಾದ ಅನುದಾನವನ್ನು ಖಾಸಗಿ ಪ್ರಯತ್ನಗಳಿಗೆ ನೀಡಬೇಕು.
15. ತನ್ನ ಕ್ಷೇತ್ರದಲ್ಲಿ ಪ್ರತಿಯೊಂದು ರಾಜ್ಯವೂ ಬಾಲಿಕೆಯರ ಹಾಗೂ ಮಹಿಳೆಯರ ಶಿಕ್ಷಣಕಾಗಿ ಸಮಗ್ರ ಅಭಿವೃದ್ಧಿಯನ್ನು ಸಿದ್ಧಗೊಳಿಸಬೇಕು. ಈ ಉದ್ದೇಶಕ್ಕಾಗಿ, ಎರಡು ಯೋಜನೆಗಳು-ಮೊದಲನೆಯದು ಎರಡನೆಯ ಯೋಜನೆಯ ಪಂಚವಾರ್ಷಿಕ ಯೋಜನೆಯ ಉಳಿದಂಥ ಸಮಯ ಹಾಗೂ ಮೂರನೆಯ ಯೋಜನೆಯ ಇನ್ನೊಂದು ಅವಧಿ-ಇವು ಅಗತ್ಯವಾಗಿವೆ.
ಮಹಿಳಾ ಶಿಕ್ಷಣದ ಪ್ರಶ್ನೆಯಲ್ಲಿ ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯು (ದುರ್ಗಾಬಾಯಿ ದೇಶಮುಖ ಸಮಿತಿ, 1958-1959) ನಿರ್ದಿಷ್ಟವಾಗಿ ನೋಡಿಕೊಳ್ಳಬೇಕು. ಇದು ಬಾಲಿಕೆಯರು ಹಾಗೂ ಮಹಿಳಾ ಶಿಕ್ಷಣದ ರಾಷ್ಟ್ರೀಯ ಸಮಿತಿಯ ಸಂಸ್ಥಾಪನೆಗಾಗಿ, ಮಹಿಳಾ ಶಿಕ್ಷಣದ ಜಂಟಿ ಸಲಹಾಕಾರರನ್ನು ಕೇಂದ್ರೀಯ ಆಡಳಿತದಲ್ಲಿ ನಿಯಮಿಸಲು, ಪ್ರತಿಯೊಂದು ರಾಜ್ಯದಲ್ಲಿಯೂ ಮಹಿಳಾ ಶಿಕ್ಷಣದ ಹೊಣೆಗಾರಿಕೆಯ ಭಾರವನ್ನು ಹೊರುವುದಕ್ಕಾಗಿ ಜಂಟಿ ನಿರ್ದೇಶಕರನ್ನಾಗಿ ಮಹಿಳೆಯರನ್ನು ನಿಯುಕ್ತಿಗೊಳಿಸಲು, ಮಹಿಳಾ ಶಿಕ್ಷಣಕಾಗಿ ಹೆಚ್ಚಿನ ಧನಸಹಾಯವನ್ನು ಒದಗಿಸುವುದಕ್ಕಾಗಿ, ಮಹಿಳಾ ಶಿಕ್ಷಕಿಯರನ್ನು ಬಾಲಿಕೆಯರ ಶಾಲೆಗಳಲ್ಲಿ ನೇಮಕ ಮಾಡಿಕೊಳ್ಳಲು, ಪ್ರಾಥಮಿಕ ಶಾಲಾ ಹಂತದಲ್ಲಿ ಬಾಲಕ ಹಾಗೂ ಬಾಲಿಕೆಯರಿಗಾಗಿ ಸಮಾನ ಪಠ್ಯಕ್ರಮವನ್ನು ಹಾಗೂ ಪ್ರೌಢ ಶಾಲಾ ಹಂತದಲ್ಲಿ ವಿಭಿನ್ನವಾದಂಥ ಪಠ್ಯಕ್ರಮವನ್ನು, ಸಮಾಜದಲ್ಲಿಯ ಆರ್ಥಿಕವಾಗಿ ಅಶಕ್ತವಾದಂಥ ಬಾಲಿಕೆಯರಿಗೆ ವಸತಿಗೃಹಗಳ, ಪಠ್ಯಪುಸ್ತಕಗಳ, ಉಡುಪುಗಳ ಸೌಕರ್ಯಗಳನ್ನು ಶಿಫಾರಸು ಮಾಡಿತು.
4. ಹಂಸಾ ಮೆಹತಾ ಸಮಿತಿ (1962)
ಶ್ರೀಮತಿ ಹಂಸಾ ಮೆಹತಾರವರು ಅಧ್ಯಕ್ಷರಾಗಿ ಆಯ್ಕೆಗೊಂಡರು. ಇದು ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಸಹಶಿಕ್ಷಣ, ಶೈಕಣಿಕ ಸೌಕರ್ಯಗಳ ವಿಸ್ತರಣೆ, ಪ್ರೌಢ ಶಾಲಾ ಹಾಗೂ ಕಾಲೇಜುಗಳ ಹಂತದಲ್ಲಿ ಪುರುಷ ಶಿಕ್ಷಕರೊಂದಿಗೆ ಮಹಿಳಾ ಶಿಕ್ಷಕಿಯರ ನೇಮಕಾತಿಗಳಿಗೆ ಶಿಫಾರಸು ಮಾಡಿತು. ಅಲ್ಲದೆ ಸಮಿತಿಯು ಬಾಲಿಕೆಯರು ಹಾಗೂ ಬಾಲಕರಿಗೆ ಗೃಹವಿಜ್ಞಾನ ಹಾಗೂ ವೃತ್ತಿಪರ ತರಬೇತಿ ಕೋರ್ಸುಗಳನ್ನು ಕೂಡ ಶಿಫಾರಸು ಮಾಡಿತು.
5. ರಾಷ್ಟ್ರೀಯ ಮಹಿಳಾ ಶಿಕ್ಷಣದ ಸಲಹಾ ಸಮಿತಿಗೆ ಭಕ್ತವತ್ಸಲಮ್ ಸಮಿತಿಯನ್ನು ಆಗಿನ ಮದ್ರಾಸಿನ ಮುಖ್ಯ ಮಂತ್ರಿಗಳಾದ ಶ್ರೀ ಎಮ್. ಭಕ್ತವತ್ಸಲಮ್ ಅವರ ಅಧ್ಯಕ್ಷತೆಯಡಿಯಲ್ಲಿ ನೇಮಿಸಿತು (1963). ಇದರ ಮುಖ್ಯ ಶಿಫಾರಸುಗಳಾಗಿ, ಸಾರ್ವಜನಿಕರ ಸಹಕಾರದೊಂದಿಗೆ ಮಹಿಳಾ ಶಿಕ್ಷಣದ ಖಾಸಗಿ ಸಂಸ್ಥೆಗಳ ಸ್ಥಾಪನೆ, ಬಾಲಿಕೆಯರಿಗೆ ಹಾಸ್ಟೆಲ್ ಸೌಲಭ್ಯಗಳು, ಬಡ ಹೆಣ್ಣುಮಕ್ಕಳಿಗೆ ಪುಕ್ಕಟೆಯಾಗಿ ಪುಸ್ತಕಗಳು ಹಾಗೂ ಉಡುಪುಗಳು, ಹೆಚ್ಚಿನ ಅತಿರಿಕ್ತ ವೇತನದೊಂದಿಗೆ ಗುಡ್ಡಗಾಡು ಹಾಗೂ ದೂರದ ಪ್ರದೇಶಗಳಲ್ಲಿ ಶಿಕ್ಷಕರ ನೇಮಕಾತಿ, ಒಂದು ನಿರ್ದಿಷ್ಟ ಹಂತದ ವರೆಗೂ ಮಹಿಳೆಯರಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಇತ್ಯಾದಿ ಹಾಗೂ ವಯಸ್ಕರ ಶಿಕ್ಷಣ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದಕ್ಕಾಗಿ ಒಂದು ಕ್ರಿಯಾತ್ಮಕ ಪಠ್ಯಕ್ರಮವನ್ನು ಅಭಿವೃದ್ಧಿಗೊಳಿಸುವುದು ಇವೆಲ್ಲವೂ ಆಯ್ಕೆಗೊಂಡವು.
6. ಕೊಠಾರಿ ಕಮಿಶನ್ ವರದಿ (1964-66)
ಶಿಕ್ಷಣದ ಸಾಧ್ಯವಾದಷ್ಟು ಮಟ್ಟಿನ ಎಲ್ಲ ಅಂಶಗಳ ಬಗ್ಗೆ ದೀರ್ಘವಾಗಿ ಈ ಶೈಕ್ಷಣಿಕ ಆಯೋಗದಡಿಯಲ್ಲಿ ಚರ್ಚಿಸಲಾಯಿತು. ಹಾಗೂ ಬಾಲಿಕೆಯರ ಶಿಕ್ಷಣದ ಬಗ್ಗೆ ಹಿಂದಿನ ಸಮಿತಿಗಳು ಮಹಿಳಾ ಶಿಕ್ಷಣದ ಸಮಸ್ಯೆಯ ಬಗ್ಗೆ ಅನುಮೋದಿಸಲಾದ ಎಲ್ಲ ಶಿಫಾರಸುಗಳ ಬಗ್ಗೆಯೂ ಚರ್ಚಿಸಲಾಯಿತು. ಅಲ್ಲದೆ, ಆಯೋಗವು, “ಮಹಿಳಾ ಶಿಕ್ಷಣವನ್ನು ಮುಂದಿನ ಕೆಲ ವರ್ಷಗಳ ವರೆಗೆ ಪ್ರಮುಖ ಕರ್ಯಕ್ರಮಗಳಲ್ಲಿ ಒಂದೆಂದು ಪರಿಗಣಿಸಬೇಕು. ಹಾಗೂ ತೊಂದರೆಗಳನ್ನು ಎದುರಿಸಲು ಮತ್ತು ಪುರುಷರು ಹಾಗೂ ಮಹಿಳೆಯರ ಶಿಕ್ಷಣದ ನಡುವಿನ ಅಂತರವನ್ನು ಸಂಕ್ಷಿಪ್ತಗೊಳಿಸಲು ಸಾಧ್ಯವಾದಷ್ಟು ಬೇಗನೆ ಧೈರ್ಯದ ಹಾಗೂ ದೃಢ ನಿಶ್ಚಯದ ಪ್ರಯತ್ನವನ್ನು ಮಾಡಬೇಕು.
7. ಶಿಕ್ಷಣದ ಬಗೆಗಿನ ರಾಷ್ಟ್ರೀಯ ನೀತಿ (1986)
ಇದು ದೇಶದ ಶೈಕ್ಷಣಿಕ ಅಭಿವೃದ್ಧಿಯ ಇತಿಹಾಸದಲ್ಲಿ ಬಹುಶಃ ಜಗತ್ತಿನಲ್ಲಿಯೇ ಮೊದಲ ಬಾರಿಗೆ ‘ಸಮಾನತೆಗಾಗಿ ಶಿಕ್ಷಣ’ ದ ಬಗ್ಗೆ ಒಂದು ಪ್ರತ್ಯೇಕ ವಿಭಾಗವನ್ನು ಸಂಯೋಜಿಸಲಾಗಿದೆ ಎಂಬ ಅರ್ಥದಲ್ಲಿ ಗಮನಾರ್ಹವಾಗಿದೆ. ಅವರ ಪ್ರಸ್ತಾವನೆಯು “ಹೊಸ ನೀತಿಯು ಇಲ್ಲಿಯ ವರೆಗೂ ಸಮಾನತೆಯನ್ನು ನಿರಾಕರಿಸಿದವರ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸುವ ಮೂಲಕ ಅಸಮಾನತೆಗಳನ್ನು ತೆಗೆದುಹಾಕುವುದು ಮತ್ತು ಶೈಕ್ಷಣಿಕ ಅವಕಾಶಗಳನ್ನು ಸಮಾನಗೊಳಿಸುವುದರ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತಿದೆ. ‘ಮಹಿಳಾ ಸಮಾನತೆಗಾಗಿ ಶಿಕ್ಷಣ’ ಎಂಬ ಉಪವಿಭಾಗವು ಶಿಕ್ಷಣ ವ್ಯವಸ್ಥೆಯ ಮೂರು ವಿಭಿನ್ನ ಕಾರ್ಯಗಳನ್ನು ರೂಪಿಸುತ್ತದೆ.
ಅ. ಮಹಿಳಾ ಸಬಲೀಕರಣದಲ್ಲಿ ಸಕಾರಾತ್ಮಕ ಹಸ್ತಕ್ಷೇಪಕಾರ ಅಥವಾ ಮಧ್ಯಸ್ಥಿಕೆದಾರನ ಪಾತ್ರವನ್ನು ವಹಿಸುವುದು.
ಆ. ಹೊಸ ಮೌಲ್ಯಗಳನ್ನು ನವೀಕೃತ ಪಠ್ಯಕ್ರಮಗಳು ಹಾಗೂ ಪಠ್ಯಪುಸ್ತಕಗಳ ಮೂಲಕ ಅಭಿವೃದ್ಧಿಪಡಿಸುವುದು. ಹಾಗೂ
ಇ. ಹೆಚ್ಚಿನ ಮಹಿಳಾ ಅಧ್ಯಯನವನ್ನು ಸಾಧಿಸುವುದಕ್ಕಾಗಿ ಅನೇಕ ಕೋರ್ಸುಗಳ ಒಂದು ಭಾಗವಾಗಿ ಹಾಗೂ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕಾಗಿ ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು. ಭಾರತದ ಮಹಿಳೆಯರ ಸ್ಥಿತಿಗತಿಯ ಬಗ್ಗೆ ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಸಮಿತಿಯ ಅನುಸರಣೆಯಾಗಿ ಮಹಿಳೆಯರ ಮಹತ್ವದ ಮತ್ತು ಅಭಿವೃದ್ಧಿಯ ವಾಹಕವಾಗಿ ಶಿಕ್ಷಣದ ಪಾತ್ರವನ್ನು ಗ್ರಹಿಸುವ ಅಭಿಯಾನವು ಪ್ರಾರಂಭವಾಗಿದ್ದುದು ಇಂತಹ ಮಹತ್ವದ ನೀತಿ ನಿರ್ಧಾರದ ಮೂಲವಾಗಿದೆ ಎಂದು ಉಲ್ಲೇಖಿಸಬಹುದು. ಪ್ರಾರಂಭದಲ್ಲಿ ಈ ಅಭಿಯಾನವನ್ನು ಮಹಿಳಾ ಸಮಸ್ಯೆಗಳ ಬಗ್ಗೆ ಸಾಕಷ್ಟು ಸೂಕ್ಷ್ಮತೆಯನ್ನು ಹೊಂದಿರುವ ಅಧಿಕಾರಿ ವರ್ಗದ ಕೆಲವೇ ಜನರು ಹಾಗೂ ಮಹಿಳಾ ಕಾರ್ಯಕರ್ತರ ಗುಂಪುಗಳ ಜನರು ಪ್ರಾರಂಭಿಸಿದರು. ಮಹಿಳಾ ಶಿಕ್ಷಣದ ಅತಿಕ್ರಮಿಸುವ ಅಂಶಗಳ ಕುರಿತು ಈ ನೀತಿಯು ಶೈಕ್ಷಣಿಕ ಸಮಯದಲ್ಲಿ ಮತ್ತೆ ಮತ್ತೆ ಹೆಚ್ಚಿನ ಸಮಿತಿಗಳ ಹೇಳಿಕೆಗಳನ್ನೇ ಪುನರಾವರ್ತಿಸುತ್ತದೆ. ಈ ಹೇಳಿಕೆಯ ಪ್ರಕಾರ, “ಮಹಿಳೆಯರ ಅನಕ್ಷರತೆ ಹಾಗೂ ಅವರ ಶಿಕ್ಷಣದ ಪ್ರವೇಶಕ್ಕೆ ಅಡ್ಡಿಪಡಿಸುವುದನ್ನು ತಡೆಗಟ್ಟುವುದು, ಪ್ರಾಥಮಿಕ ಶಿಕ್ಷಣದಲ್ಲಿ ಅವರನ್ನು ಉಳಿಸಿಕೊಳ್ಳುವುದು, ಅತಿಕ್ರಮಿಸುವ ವಿಶೇಷ ಬೆಂಬಲ ಸೇವೆಗಳ ಸೌಲಭ್ಯದ ಮೂಲಕ ಸಮಯದ ಗುರಿಗಳನ್ನು ನಿಗದಿಪಡಿಸುವುದರ ಮೂಲಕ ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆಯ ಮೂಲಕ ಹೆಚ್ಚಿನ ಆದ್ಯತೆಯನ್ನು ಪಡೆಯುತ್ತದೆ. ವಿವಿಧ ಹಂತಗಳಲ್ಲಿ ವೃತ್ತಿಪರ, ತಾಂತ್ರಿಕ ಹಾಗೂ ವೃತ್ತಿಶಿಕ್ಷಣದಲ್ಲಿ ಮಹಿಳಾ ಭಾಗವಹಿಸುವಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ವೃತ್ತಿಪರ ಹಾಗೂ ವೃತ್ತಿಶಿಕ್ಷಣ ಕೋರ್ಸುಗಳಲ್ಲಿ ಲೈಂಗಿಕ ರೂಢಮಾದರಿಯನ್ನು ತೊಡೆದು ಹಾಕುವ ಹಾಗೂ ಸಾಂಪ್ರದಾಯಿಕವಲ್ಲದ ಉದ್ಯೋಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಹಾಗೆಯೇ ಅಸ್ತಿತ್ವದಲ್ಲಿರುವ ಹಾಗೂ ಹೊರಹೊಮ್ಮುತ್ತಿರುವ ತಂತ್ರಜ್ಞಾನಗಳಲ್ಲಿ ತಾರತಮ್ಯರಹಿತ ನೀತಿಯನ್ನು ತೀವ್ರವಾಗಿ ಅನುಸರಿಸಲಾಗುವುದು.”
ಎನ್ಪಿಇ ಯ ಅನುಸರಣೆಯಲ್ಲಿ ಅನುಷ್ಠಾನ ತಂತ್ರದ ಮುಖ್ಯ ಲಕ್ಷಣಗಳು ಕೆಳಗಿನವುಗಳನ್ನು ಒಳಗೊಂಡಿರುತ್ತವೆ:
ಅ. ಮಹಿಳಾ ಸಬಲೀಕರಣದಲ್ಲಿ ಸಕಾರಾತ್ಮಕ ಹಸ್ತಕ್ಷೇಪದ ಪಾತ್ರವನ್ನು ವಹಿಸಲು ಇಡಿಯ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸಲು,
ಆ. ಮಹಿಳಾ ಸ್ಥಾನಮಾನವನ್ನು ಹೆಚ್ಚಿಸಲು ಸಕ್ರಿಯ ಕಾರ್ಯಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುವುದು,
ಇ. ಎಲ್ಲ ಹಂತಗಳಲ್ಲಿ ವೃತ್ತಿಪರ, ತಾಂತ್ರಿಕ ಹಾಗೂ ವೃತ್ತಿಶಿಕ್ಷಣದಲ್ಲಿ ಮಹಿಳೆಯರ ಪ್ರವೇಶವನ್ನು ವಿಸ್ತರಿಸಲು, ಲೈಂಗಿಕ ರೂಢ ಮಾದರಿಗಳನ್ನು ಮುರಿಯುವುದು,
ಈ. ಈ ಆದೇಶದಿಂದ ಎದುರಾಗುವ ಸವಾಲುಗಳಿಗೆ ಸ್ಪಂದಿಸಲು ಸಾಧ್ಯವಾಗುವಂತಹ ಕ್ರಿಯಾತ್ಮಕ ನಿರ್ವಹಣಾ ರಚನೆಯನ್ನು ರಚಿಸಲು.
8. ಕಾರ್ಯ ವಿಧಾನ -1992
ಮಹಿಳಾ ಸಮಾನತೆಗಾಗಿ ಶಿಕ್ಷಣವು ಶಿಕ್ಷಣದ ಒಟ್ಟಾರೆ ಕಾರ್ಯತಂತ್ರದಲ್ಲಿ ಶಿಕ್ಷಣದಲ್ಲಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಪಡೆಯುವ ಪ್ರಮುಖ ಅಂಶವಾಗಿದೆ. ಪಿಓಏ ಯು ಶಿಕ್ಷಣದಲ್ಲಿ ಮಹಿಳಾ ಸಮಾನತೆಯನ್ನು ಉತ್ತೇಜಿಸುವುದಕ್ಕಾಗಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟವಾಗಿ ಹೇಳುತ್ತದೆ. ಅದನ್ನು ಸುಧಾರಿಸುವುದಕ್ಕೆ ಕಷ್ಟವಾಗದು. ಸೂಕ್ತವಾದೆಡೆಗಳಲ್ಲಿ ಪಿಓಏ ಯಲ್ಲಿಯ ವಿಷಯಗಳನ್ನು ನವೀಕರಿಸುವುದನ್ನು ಮಾಡಬಹುದು. ಮುಂದೆ ಸ್ಪಷ್ಟವಾಗುವಂಥದು ಮಂಡಳಿಯ ಆದ್ಯಂತವಾಗಿ ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಲಿಂಗ ಸಂವೇದನೆಯು ಪ್ರತಿಫಲಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ಕಾರ್ಯವಿಧಾನಗಳನ್ನು ಹಾಗೂ ಕಾರ್ಯಗತಗೊಳಿಸುವ ಇಚ್ಛಾಶಕ್ತಿಯ ಅಗತ್ಯ. ಮಹಿಳಾ ಸಮಾನತೆಗಾಗಿ ಶಿಕ್ಷಣವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉಸ್ತುವಾರಿ ಹೊಂದಿರುವ ವ್ಯಕ್ತಿಗಳ ವೈಯಕ್ತಿಕ ಬದ್ಧತೆಗಳಿಗೆ ಅಥವಾ ಪ್ರವೃತ್ತಿಗಳಿಗೇ ಬಿಡುವುದು ಮುಖ್ಯವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿಯ ಎಲ್ಲಾ ಹಂತಗಳಲ್ಲಿಯ ಎಲ್ಲ ಕಾರ್ಯಕರ್ತರು, ಸಂಸ್ಥೆಗಳು ಹಾಗೂ ಏಜೆನ್ಸಿಗಳು ಲಿಂಗ ಸಂವೇದನಾಶೀಲರಾಗಿರಬೇಕು ಹಾಗೂ ಎಲ್ಲ ಶೈಕ್ಷಣಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಮಹಿಳೆಯರಿಗೆ ಉಚಿತವಾದ ಅಥವಾ ನ್ಯಾಯಯುತವಾದ ಪಾಲು ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.