ಕೃಷಿಯಷ್ಟೇ ಅಲ್ಲ, ಸಂಸ್ಕತಿಯೂ ಮರೆ!
ನಮ್ಮ ಹುಡುಕಾಟಗಳಾದರೂ ಹಾಗೆ ಅಲ್ಲವೇ? ಅದಲ್ಲ ಇದು, ಇದಲ್ಲ ಅದು ಹುಡುಕುತ್ತ, ಕೈಯಲ್ಲಿದ್ದುದನ್ನು ಬಿಡುತ್ತಾ, ಮತ್ತೇನನ್ನೋ ಹುಡುಕುತ್ತಾ ಅದು ಕೃಷಿಯಷ್ಟೇ ಅಲ್ಲ, ಸಂಸ್ಕತಿಯೂ ಮರೆ!
ನಮ್ಮ ಹುಡುಕಾಟಗಳಾದರೂ ಹಾಗೆ ಅಲ್ಲವೇ? ಅದಲ್ಲ ಇದು, ಇದಲ್ಲ ಅದು ಹುಡುಕುತ್ತ, ಕೈಯಲ್ಲಿದ್ದುದನ್ನು ಬಿಡುತ್ತಾ, ಮತ್ತೇನನ್ನೋ ಹುಡುಕುತ್ತಾ ಅದು ವರ್ಜ್ಯ , ಇದು ವರ್ಜ್ಯ ಎನ್ನುತ್ತಲೇ ಮತ್ತೇನನ್ನೋ ಹಂಬಲಿಸುತ್ತಾ ಹೋಗುವುದು! ಒಮ್ಮೊಮ್ಮೆ ಯಾವುದು ಸತ್ಯವೆಂದು ಹುಡುಕುತ್ತೇವೆಯೋ ಅದೇ ಸುಳ್ಳಾಗಿ ನಾವು ಸಂದಿಗ್ಧಕ್ಕೆ ಸಿಲುಕಿಬಿಡುತ್ತೇವೆ. ಇನ್ನೇನೋ ಬೇಕೆಂದು, ಇರುವುದು ಬಿಟ್ಟು ಇನ್ನೆಲ್ಲೋ ಹುಡುಕುತ್ತಿರುತ್ತೇವೆ, ಕೃಷಿಯ ಕತೆಯೂ ಹಾಗೇ ಆಗಿದೆ. ಇಂದು ಕೃಷಿಯನ್ನು ಉಳಿಸಲು ಸಂಘಟನಾತ್ಮಕ ಹೋರಾಟ ನಡೆಸುವ ಅನಿವಾರ್ಯ ಇದೆ. ಕೃಷಿಯಿಂದ ಮಾತ್ರ ನಮ್ಮ ಪರಂಪರೆ ಉಳಿಯುತ್ತದೆ. ಸ್ವಾವಲಂಬನೆ, ಸ್ವದೇಶಿ ಚಿಂತನೆ, ಸಹಕಾರ, ಸಾವಯವ ತತ್ವಗಳ ಅಡಿಯಲ್ಲಿ ಕೃಷಿಕರು ಒಟ್ಟಾಗಿ ಕೃಷಿಯನ್ನು ಉಳಿಸಿ, ಬೆಳೆಸುವ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಇವತ್ತಿನ ಕಾರ್ಪೋರೇಟ್ ವಲಯದ ಕಾರ್ಯವೈಖರಿಯಿಂದ ಕೂಡ ದೇಸಿ ಕೃಷಿ ಪದ್ಧತಿಗೆ ಹಿನ್ನಡೆಯಾಗುತ್ತಿದೆ. ನಮ್ಮ ಪ್ರಾದೇಶಿಕ ಹವಾಮಾನಕ್ಕೆ ಒಗ್ಗಿ ಹೋಗಿದ್ದ, ನಮ್ಮತನದ ಪ್ರತೀಕವಾಗಿದ್ದ ಅಮೂಲ್ಯ ಬೀಜಗಳನ್ನು ಉಳಿಸಿಕೊಳ್ಳದೇ ಬಿತ್ತನೆ ಬೀಜ, ಗೊಬ್ಬರ ಸಲಕರಣೆಗಳಿಗೆ ಸರ್ಕಾರದತ್ತ ಮುಖಮಾಡಿ ಕುಳಿತಿದ್ದೇವೆ.
ಸಾವಯವ ಅಥವಾ ಸಹಜ ಕೃಷಿಗೆ ನಮ್ಮ ಪಾರಂಪರಿಕ ಬೆಳೆಗಳು ಅವುಗಳ ಬೆಳೆ ಪದ್ಧತಿಗಳು ಹೇಳಿ ಮಾಡಿಸಿದಂತಿದ್ದವು. ಪಾರಂಪರಿಕ ಬೆಳೆಗಳಿಗೆ ಹವಾಮಾನದ ವೈಪರೀತ್ಯವನ್ನು ತಡೆದುಕೊಳ್ಲುವ ಶಕ್ತಿಯಿರುವುದೊಂದು ವಿಶೇಷ, ಅಲ್ಲದೇ ಬೌದ್ಧಿಕ ಮಾನಸಿಕ ದೈಹಿಕ ಆರೋಗ್ಯ ವೃದ್ಧಿಗೆ ದೇಸಿ ಆಚರಣೆಗಳು ಪೂರಕವಾಗಿರುವುದು ಗಮನಿಸುವಂತಹದು.
ಜಾಗತೀಕರಣದ ಹಿನ್ನೆಲೆಯಲ್ಲಿ ನಮ್ಮ ದೇಶವನ್ನು ಪ್ರವೇಶಿಸಿರುವ ಜೈವಿಕ ತಂತ್ರಜ್ಞಾನದ ಬಗ್ಗೆ ನಮ್ಮ ರೇತರು. ಪ್ರಾಜ್ಞರು ಪರಿಸರವಾದಿಗಳು ತಮ್ಮ ಅನುಮಾನ ಆತಂಕಗಳನ್ನು ಹೊರಹಾಕಿದ್ದಾರೆ. ಹೀಗಾಗಿ ಹೊಸ ಪ್ರಯೋಗಗಳು ಎಲ್ಲರ ಒಪ್ಪಿಗೆ ಪಡದೇ ಮುಂದುವರಿಯುದು ಸೂಕ್ತ. ಈಗಂತೂ ಬಂಜೆ ಬೀಜದ ತಂತ್ರಜ್ಞಾನವೇ ನಮ್ಮನ್ನು ಆವರಿಸಿಕೊಳ್ಳುತ್ತಿದೆ ಇದರ ಬಗ್ಗೆ ಸೂಕ್ತ ಅರಿವು, ಮಾಹಿತಿಗಳು ಜನಸಾಮಾನ್ಯರಿಗೆ ದೊರೆಯುವ ಮೊದಲೇ ನಮ್ಮ ನೆಲದಲ್ಲಿ ಅದರ ಬಳಕೆಯೂ ಆಗಿಬಿಡುವ ಸಂಭವವೇ ಹೆಚ್ಚು.
ಕೃಷಿ ಮನೆಯಲ್ಲಿ ಬಳಸುತ್ತಿದ್ದ ಹಳೆಯ ವಸ್ಸುಗಳನ್ನು ಬೇಸಾಯದ ಪದ್ಧತಿಯನ್ನು ಕರ್ನಾಟಕದ ಶ್ರೀಮಂತ ಗ್ರಾಮೀಣ ಸಂಸ್ಕøತಿಯ ಆಳ- ಹರಹುಗಳ ವಿಸ್ಮಯ ಜಗತ್ತನ್ನೂ ಸಮುದಾಯಕ್ಕೆ ಅದರಲ್ಲೂ ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವಾಗಬೇಕಿದೆ. ಪುರಾತನ ವಸ್ತು ಸಾಮಗ್ರಿಗಳ ಮೂಲಕ ನಮ್ಮ ಹಿಂದಿನ ತಲೆಮಾರಿನ ಜನಜೀವನದ ಚಿತ್ರಣವನ್ನೂ ಪರಿಚಯಿಸ ಬೇಕಿದೆ. ಇದರಿಂದ ಆಧುನಿಕ ಜೀವನ ಕ್ರಮದ ಈ ಕಾಲದ ನಮ್ಮ ಮಕ್ಕಳಿಗೆ ಹಿಂದಿನ ಕಾಳದ ಜೀವನ ಶೈಲಿಯನ್ನು ತಿಳಿಸಿದಂತೆಯೂ ಆಗುತ್ತದೆ.
ನಗರೀಕರಣದಿಂದಾಗಿ ನಾವು ಹಳ್ಳಿ ವೇಶಿಷ್ಯಗಳ ನೋಟದಿಂದ ವಂಚಿರತಾಗಿದ್ದೇವೆ. ನಾವೀಗ ಅವನ್ನು ಯಾವುದೋ ವಸ್ತು ಪ್ರದರ್ಶನದಲ್ಲೋ ಚಿತ್ತದಲ್ಲೋ ನೋಡಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲಿ, ಇಲ್ಲಿ ದೇಶಿಯ ಕಲೆಯನ್ನು ಉಳಿಸಿ, ಬೆಳೆಸಲು ಕೆಲವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಬೇಕಲ್ಲದೇ, ಸರ್ಕಾರ, ಸಾರ್ವಜನಿಕ ಉತ್ತೇಜನವೂ ಇರಬೇಕು. ಅಪರೂಪಕ್ಕೆ ಹಳೆಯ ನೋಟಗಳು ಕಣ್ಣಿಗೆ ಬಿದ್ದಾಗ, ಎದೆಯಾಳದಲ್ಲಿ ಬೆಚ್ಚಗೆ ಕದ್ದು ಕುಳಿತ ಬಾಲ್ಯದ ಆ ನನ್ನ ನೆನಪುಗಳು ಮನದ ಬಿತ್ತಿಯ ಮೇಲೆ ಹರಿದಾಡಿ, ಆ ಕಾಲಘಟ್ಟದ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ.
ಹೊಸ್ಮನೆ ಮುತ್ತು