ಕೋಶ ಕೀಟ…!
ಕಸ- ಕಡ್ಡಿಗಳಿಂದ ಆವೃತವಾದ ಕೋಶವನ್ನು ರಚಿಸಿಕೊಂಡಿತುವ ಈ ಕೀಟ ಆಗಾಗ ಸಂಚರಿಸುತ್ತಾ, ಇಲ್ಲವೇ ಎಲೆ, ಕಾಂಡಗಳಿಗೆ ಅಂಟಿಕೊಂಡು ಆಗಾಗ ತನ್ನ ತಲೆಯನ್ನು ಹೊರಚಾಚಿ ಹರಿತವಾದ ಹಲ್ಲಿನಿಂದ ಎಲೆಯನ್ನು ಕತ್ತರಿಸುತ್ತದೆ. ಕೊಂಚ ಅಪಾಯದ ಸೂಚನೆ ಸಿಕ್ಕರೂ ಕೂಡಾ ತಲೆಯನ್ನು ಕೋಶದೊಳಗೆ ಎಳೆದುಕೊಂಡು ಮಿಸುಕಾಡದೇ ಸಂಭಾವ್ಯ ವೈರಿಗಳನ್ನು ಬೆಸ್ತು ಬೀಳಿಸಿ ಬಚಾವಾಗುವ ಅಪೂರ್ವ ಕೀಟ ಈ ಕೋಶ ಕೀಟ. ನಮ್ಮ ಪರಿಸರ ವ್ಯವಸ್ಥೆಯಲ್ಲಿ ಇಂಥ ಹಲವಾರು ಸೂಕ್ಷ್ಮ ಕೀಟಗಳಿವೆ. ನೋಡುವ ಮನಸ್ಸಿರಬೇಕಷ್ಟೇ !
ಹೊಸ್ಮನೆ ಮುತ್ತು