ಕೆಲ ದಿನದ ಬದುಕಿದು
ಎಲ್ಲವೂ ನನ್ನದೆಂಬ ಭ್ರಮೆ ಇಹುದು
ಪಾತ್ರವೆಲ್ಲರದು ಬ್ರಹ್ಮ ಬರೆದಾಗಿರುವುದು
ಕರ್ತವ್ಯ ಪಾಲಿನದು ಸಮ ನಿರ್ವಹಿಸುವುದು
ಪಾಲಿಗೆ ಬಂದದ್ದು ಪಂಚಾಮೃತವಿಹುದು
ಯಾವುದೂ ಸ್ಥಿರವಿಲ್ಲ ಯ್
ಬಿಟ್ಟು ಹೋಗಲೇ ಬೇಕು ಕೂಡಿ ಇಟ್ಟಿಹುದು
ಅವರವರ ನಟನೆ ಇರುವಂತೆ ಸ್ವೀಕರಿಸುದು
ಜೀವನವು ಬಂದಂತೆ ಅನುಭವಿಸುವುದು
ಸುಖ ದುಃಖ ಕಷ್ಟಗಳ ಸಮನಾಗಿ ಎದುರಿಸುವುದು
ನಾನು ನನ್ನದೆಲ್ಲಾ ಬರಿ ಹುಸಿಯಾಗಿಹುದು
ಹುಟ್ಟು ಸಾವು ಚಕ್ರದಲ್ಲಿ ಮತ್ತೆಮತ್ತೆ ಸಾಗುವುದು
ಎಲ್ಲಾ ಅರಿವಿದ್ದರೂ ಮನುಜ ಸ್ವಾರ್ಥ ಬಿಡದಿಹುದು
ಇದುವೇ ಬದುಕಿನ ಬಂಡಿಯಾಗಿಹುದು
ಇದುವೇ ವಿಧಿಲಿಖಿತವಾಗಿಹುದು.