ಕಾಷ್ಠದಿಂದ ಕಲೆ
ಅಪರೂಪದ ಕಲಾಕೃತಿಯಂತೆ ಕಾಣುವ ಈ ವಸ್ತು ನಿರ್ಮಾಣವಾದದ್ದು ಬರಡು ಬಿದ್ದ ಮರದ ಬೇರುಗಳಿಂದ ಒಣಗಿ ನಿಂತ ಮರದ ಬೇರುಗಳನ್ನೇ ಕೀಳಿಸಿ, ಕೊಂಚ ಆಕರ್ಷಕವೆನ್ನಿಸುವಂತೆ ಜೋಡಿಸಿದಾಗ ನಿರ್ಮಾಣಗೊಂಡ ರಚನೆ ಇದು. ಕಸದಿಂದ ರಸ ಎಂಬ ಮಾತಿನಂತೆ, ಉರುವಲಾಗಿಯೋ, ಅನುಪಯುಕ್ತಕಾಗಿಯೋ ಬಿಡುತ್ತಿದ್ದ ವಸ್ತುವೊಂದನ್ನು ತನ್ನ ಕ್ರಿಯಾತ್ಮಕ ಆಲೋಚನೆಯಿಂದ ಒಂದು ಆಕರ್ಷಕ ಕಲಾಕೃತಿಯಾಗಿಸಿದವರು ಶ್ರೀಯುತ ಇಕ್ಬಾಲ್ ಅಹ್ಮದ್ ರವರು. ನಟ, ನಾಟಕಕಾರರೂ ಆಗಿರುವ ಇವರು ಶಿಕಾರಿಪುರದಲ್ಲಿನ ತಮ್ಮ ಸ್ವಗೃಹವನ್ನೇ ಒಂದು ಕಲಾಕೇಂದ್ರವಾಗಿಸಿದ್ದಾರೆ. ಇಲ್ಲಿನ ಕೆಲವು ರಚನೆಗಳು ಗ್ರಾಮೀಣ ಸಂಸ್ಕೃತಿಯ ಚಿತ್ರಣವನ್ನು ಮುಂದಿನ ತಲೆಮಾರಿಗೆ ನೆನಪಿಸುವ ಕಾರ್ಯಗಳನ್ನು ಮಾಡುತ್ತವೆ. ಕಾಲ ಕೇಂದ್ರದ ಪ್ರವೇಶ ದ್ವಾರದಲ್ಲೇ ನಿರ್ಮಿಸಿದ ಈ ರಚನೆ ಅವರ ಅನನ್ಯವಾದ ಸೃಜನಾತ್ಮಕತೆಗೆ ಸಾಕ್ಷಿಯಾಗಿದೆ.
ಹೊಸ್ಮನೆ ಮುತ್ತು