ಕಣ್ಣು ಬಿಟ್ಟ ಮೇಲೆ ಗೊತ್ತಾಯಿತು,
ಮನ ಹಗುರಾಗಿ ಹಾಯಾಗಿ ತೇಲುತ್ತಿತ್ತು
ಕಣ್ಣು ಹಾಯಿಸಿದಲೆಲ್ಲ ಹಸಿರ ಹಾಸು ಕಾಣುತ್ತಿತ್ತು
ನಡೆದಷ್ಟೂ ದೂರ ಕೆಂಪು ಗುಲ್ಮೋಹೊರ ಗಿಡದ ಸಾಲಿತ್ತು
ನೆಲದ ತುಂಬೆಲ್ಲ ಹೂವಿನ ಮೆತ್ತನೆಯ ಹಾಸಿಗೆಯಿತ್ತು
ಹೆಜ್ಜೆ ಮೇಲಿಂದ ಪುಷ್ಪಗಳ ಮಳೆಗರೆಯುತ್ತಿತ್ತು
ಕೋಗಿಲೆ ಗಿಳಿಗಳ ಕುಜನ ರಿಂಘಾಣಿಸುತ್ತಿತ್ತು
ರೆಂಬೆ ಕೊಂಬೆಗಳಿಗೆ ತೂಗು ಉಯ್ಯಾಲೆ ಕಾಣುತ್ತಿತ್ತು
ಕಣ್ಮುಚ್ಚಿ ಜೀಕುವಾಗ ಪ್ರೇಮದ ಗಾನ ಕೇಳಿ ಬರುತ್ತಿತ್ತು
ಮೆಲ್ಲನೆ ಕಣ್ಣು ಬಿಟ್ಟು ನೋಡಿದಾಗ ಅದು ಕನಸಾಗಿತ್ತು.