ಹೋಳಿ
ಸಂತಸದ ಹಬ್ಬ ಹೋಳಿ ಹಬ್ಬ
ಜಾತಿ ಮತ ಭೇದವರಿಯದ ಹಬ್ಬ
ಸಮಾನತೆಯ ಸಾರುವ ಹಬ್ಬ
ಪ್ರೀತಿ ಪ್ರೇಮದಲಿ ಬೆರೆಯುವ ಹಬ್ಬ
ಲೋಭ ಮೋಹವನು ಸುಡುವ ಹಬ್ಬ
ಜ್ಞಾನದ ಹಣತೆ ಹಚ್ಚುವ ಹಬ್ಬ
ಸಮರಸವೇ ಜೀವನ ಎನ್ನುವ ಹಬ್ಬ
ಸಿರಿತನ ಬಡತನ ಮರೆಸುವ ಹಬ್ಬ
ಕೂಡಿ ಆಡಿ ಬಣ್ಣಗಳ ಎರಚುವ ಹಬ್ಬ
ಶಾಂತಿ ಮಂತ್ರವ ಹೇಳುವ ಹಬ್ಬ
ಆಡಂಬರ ವಿಲ್ಲದ ಸುಂದರ ಹಬ್ಬ
ಹಿರಿಯರು ಕಿರಿಯರು ಕೂಡಿ ನಲಿಯುವ ಹಬ್ಬ
ದಡ ಬಡ ಹಲಗಿ ಬಾರಿಸೋ ಹಬ್ಬ
ಬೀದಿ ಬೀದಿ ಬಣ ಬಣ ಸುತ್ತುವ ಹಬ್ಬ
ಕಾಮನ ಕಥೆಯನ್ನು ಹೇಳುವ ಹಬ್ಬ
ಹೊಳಿಗಿ ತುಪ್ಪ ಸವಿಯುವ ಹಬ್ಬ