ಹಿರಿಯ ಸಂಶೋಧಕ, ಬರಹಗಾರ ಡಾ. ಚಿದಾನಂದಮೂರ್ತಿ ಇನ್ನಿಲ್ಲ

ಬೆಂಗಳೂರು: ಹಿರಿಯ ಸಂಶೋಧಕ, ವಿದ್ವಾಂಸ, ಬರಹಗಾರ ಡಾ. ಎಂ.ಚಿದಾನಂದಮೂರ್ತಿ (88) ಶನಿವಾರ ನಸುಕಿನ 3.45ಕ್ಕೆ ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ನ್ಯುಮೋನಿಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ಸೋಂಕು ನಿಯಂತ್ರಣಕ್ಕೆ ಬಾರದೆ ಶನಿವಾರ ಬೆಳಿಗ್ಗೆ ವಿಧಿವಶರಾದರು. ಅವರು ಮಗ ವಿನಯ್ ಕುಮಾರ್, ಮಗಳು ಶೋಭಾ ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. rಇದನ್ನೂ ಓದಿ: ಡಾ.ಎಂ.ಚಿದಾನಂದಮೂರ್ತಿ: ಕನ್ನಡ ಅಸ್ಮಿತೆಯನ್ನು ಎಡೆಬಿಡದೆ ಹುಡುಕಿದ್ದ ವಿದ್ವಾಂಸ ಬೆಂಗಳೂರಿನ ವಿಜಯನಗರ ಸಮೀಪ ಹಂಪಿ ನಗರದ ಮೂರನೇ ಕ್ರಾಸ್‌ನಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 9ಗಂಟೆ ನಂತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿದಾನಂದಮೂರ್ತಿಯವರ ಆಸೆಯಂತೆ ಅವರ ದೇಹವನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು. ಭಾನುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ಪ್ರಜಾವಾಣಿಗೆ ತಿಳಿಸಿವೆ. ಕನ್ನಡ ಭಾಷಾಶಾಸ್ತ್ರ, ವಚನ ಸಾಹಿತ್ಯ ಸಂಶೋಧನೆ ಮತ್ತು ಶಾಸನ ಶಾಸ್ತ್ರದಲ್ಲಿ ಅಪಾರವಾದ ಕೊಡುಗೆ ನೀಡಿರುವ ಚಿದಾನಂದಮೂರ್ತಿ ಅವರು ವಿಜಯನಗರ ಸಾಮ್ರಾಜ್ಯ, ಹಂಪಿ ಪರಿಸರದ ಬಗ್ಗೆಯೂ ಸಂಶೋಧನೆಗಳನ್ನು ಮಾಡಿದ್ದರು. ಇದನ್ನೂ ಓದಿ: ಕನ್ನಡದ ಯೋಧ, ಪ್ರೇರಕ ಶಕ್ತಿಯಾಗಿದ್ದ ಚಿದಾನಂದಮೂರ್ತಿ: ವೆಂಕಟಾಚಲ ಶಾಸ್ತ್ರಿ

courtsey:prajavani.net

https://www.prajavani.net/stories/stateregional/veteren-writer-m-chidananda-murthy-is-no-more-697213.html

Leave a Reply