ಹೀಗೊಂದು ಶಿಕ್ಷೆ..!! ಯಮ ಲೋಕದಲ್ಲಿ …!!!
ಮಧುಸೂದನ ತುಂಬಾ ಹಠವಾದಿ ತನ್ನ ಕಾರ್ಯ ಕ್ಷೇತ್ರದಲ್ಲಿರುವವರು, ಮನೆಯವರು, ಮಕ್ಕಳು ತನ್ನ ಮಾತನ್ನು ಮರು ಮಾತನಾಡದೆ ಅನುಸರಿಸಬೇಕೆನ್ನುವುದು ಅವನ ಹಠ ಮಕ್ಕಳ ಶಾಲೆಯ ಆಯ್ಕೆ, ಅವರ ಆಟದ ಸಮಯ, ಮನೆಗೆ ಬೇಕಾದ ಸಾಮಾನಿನ ಪಟ್ಟಿ, ದಿನ ನಿತ್ಯ ಯಾವ ಅಡುಗೆ ಮಾಡಬೇಕು, ಕಚೇರಿಯಲ್ಲಿ ಯಾವ ಕೆಲಸ ಯಾವಾಗ ಮತ್ತು ಹೇಗೆ ಮುಗಿಸಬೇಕು ಎಲ್ಲವನ್ನು ಮಧುವೇ ನಿರ್ಧರಿಸಬೇಕು ಹಾಗು ನಿರ್ಧರಿಸುತ್ತಾನೆ ಕೂಡ.
ಇಂತಹ ಗಂಡನ ಜೊತೆ ಬದುಕುತ್ತಿರುವ ಅವನ ಹೆಂಡತಿಗೆ, ತಂದೆಯ ಜೊತೆ ಬದುಕುತ್ತಿರುವ ಅವನ ಮಕ್ಕಳಿಗೆ, ಯಜಮಾನನ ಕೈ ಕೆಳಗೆ ದುಡಿಯುತ್ತಿರುವ ಕೆಲಸಗಾರರಿಗೆ ಅಸಮಾಧಾನವಿದ್ದರೂ ಕೂಡ ಗತ್ಯಂತರ ವಿಲ್ಲದೆ ಮುಂದೆ ನೆಡೆಯುತಿದ್ದಾರೆ, ಮಧು ಈ ಕಟ್ಟು ನಿಟ್ಟಿನ ಮುಳುಗಿದ್ದರಿಂದ ಇವರ ಅಸಹನೆ ,ಅಸಮಾಧಾನಗಳು ಇವನ ಕಣ್ಣಿಗೆ ಬೀಳುತರಿರಲ್ಲ.
ಕೆಲಸದ ನಿಮಿತ್ತ ಮಧು ಬೊಂಬಾಯಿಗೆ ಹೋಗುವ ಪ್ರಸಂಗ ಬಂತು ,ಮಧುವಿಗೆ ರೈಲಿನ ಪ್ರಯಾಣದ ಬಗ್ಗೆ ತುಂಬಾ ಹೆದರಿಕೆ ಅವನ ತಂದೆ, ತಾಯಿ, ಅಣ್ಣ, ಅಜ್ಜ, ಅಜ್ಜಿಯರು ವಯೋ ಸಹಜ ಕಾಯಿಲೆಯಿದ್ದಾಗ ಕಾಕತಾಳೀಯವಾಗಿಯೋ, ರೈಲಿನ ಅಪಘಾತದಲ್ಲೂ ಹೀಗೆ ಒಂದ್ದೊಂದು ರೀತಿಯಲ್ಲಿ ರೈಲಿನಲ್ಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು, ಇವೆಲ್ಲದರನಂತರ ಮಧುವಿಗೆ ರೈಲಿನ ಪ್ರಯಾಣದ ಬಗ್ಗೆ ಏನೋ ಒಂದು ದುಗುಡ ಮತ್ತು ಭಯ ಹೆಚ್ಚು ಕಡಿಮೆ ಅವನು ರೈಲಿನಲ್ಲಿ ಪ್ರಯಾಣಿಸಿದ್ದೆ ಇಲ್ಲ. ಇವೆಲ್ಲದರ ನಡುವೆ ವಿಮಾನದ ಟಿಕೆಟ್ಗಾಗಿ ಅವನು ಎಷ್ಟೇ ಪ್ರಯತ್ನಿಸಿದರೂ ಸಿಗದ ಕಾರಣ ರೈಲಿನ ಟಿಕೆಟನ್ನೇ ಕಾದಿರಿಸಿದ.
ಇದೆ ದುಗುಡದಲ್ಲಿ ಮನೆಯಿಂದ ಹೊರಟ ಮಧು ತನ್ನ ರೈಲು ಬರುವ ಪ್ಲಾಟ್ ಫಾರ್ಮ್ ನ ಒಂದು ಮರದ ಬೆಂಚಿನ ಮೇಲೆ ಕುಳಿತು ಸುಧಾರಿಸಿಕೊಳ್ಳುವ ಪ್ರಯತ್ನ ಪಟ್ಟ ಆದರೂ ಅವನ ಕೈ ಕಾಲುಗಳು ನಡುಗುತ್ತಿರುವ ಅನುಭವ ಅವನಿಗೆ ಆಗಲೇ ಆಗುತಿತ್ತು, ಅಷ್ಟರಲ್ಲಿ ಬೊಂಬಾಯಿಗೆ ಹೋಗುವ ರೈಲು ಪ್ಲಾಟ್ ಫಾರ್ಮ್ ನಲ್ಲಿ ಬಂದು ನಿಂತಿತು ಆದಷ್ಟು ಸಮಾಧಾನ ಮತ್ತು ದೃಢಚಿತ್ತದಿಂದ ತಾನು ಕಾಯ್ದಿರಿಸಿದ ಸೀಟ್ ಇರುವ ಬೋಗಿಯನ್ನು ಹತ್ತಿ ಕುಳಿತ ಅವನು ಎಷ್ಟೇ ಪ್ರಯತ್ನ ಪಟ್ಟರು ಅವನಲ್ಲಿದ್ದ ರೈಲಿನ ಹೆದರಿಕೆ ಬೃಹದಾಕಾರವಾಗಿ ಬೆಳೆಯುತ್ತಲ್ಲೇ ಇತ್ತು.
ಒಂದಷ್ಟು ಸಮಯದಲ್ಲಿ ಒಂದು ಕುಟುಂಬ (ಗಂಡ, ಹೆಂಡತಿ ಮತ್ತು ಮಗು) ಇವನಿದ್ದ ಜಾಗದಲ್ಲೇ ಬಂದು ಕುಳಿತರು ಆ ದಂಪತಿಗಳು ಅನ್ನ್ಯೋನ್ಯವಾಗಿ ಮಾತನಾಡುತ್ತ ತಮ್ಮ ಪುಟ್ಟ ಮಗುವಿನ ಜೊತೆ ಆಟವಾಡುತ್ತ ತಾವು ತಂದಿದ್ದ ತಿಂಡಿಗಳನ್ನು ತಿನ್ನುತ್ತಾ ರೈಲಿನ ಪ್ರಯಾಣದ ಸುಖವನ್ನು ಸವಿಯುತ್ತಿದ್ದರು, ಬೇರೆಯದೇ ಮನ ಸ್ಥಿತಿಯವನದ ಮಧುವಿಗೆ ಇದೆಲ್ಲವೂ ಒಂದು ರೀತಿಯ ಅಸಹನೆ ಅವರನ್ನು ಪ್ರತಿ ಸಲ ನೋಡಿದಾಗಲೂ ಮಧುವಿನ ಅಸಹನೆಯ ಕಾವು ಹೆಚ್ಚುತ್ತಲೇ ಇತ್ತು ಎಷ್ಟರ ಮಟ್ಟಿಗೆ ಅಂದರೆ ರೈಲಿನ ಬಗ್ಗೆ ಅವನಿಗಿದ್ದ ಹೆದರಿಕೆ ಮಾಯವಾಗುವಷ್ಟು. ಇವನಿಗೆ ಅಸಹನೆಯಾದರು ಅವ್ರೇನು ತಪ್ಪು ಮಾಡುತ್ತಿಲ್ಲವಲ್ಲ ಇವನೇನು ಮಾಡಲು ಸಾಧ್ಯ ಇದರಿಂದ ತಪ್ಪಿಸಿಕೊಳ್ಳಲು ನಿದ್ದೆಗೆ ಶರಣು ಹೋದ ಕ್ರಮೇಣ ಅವನ ಮನಸಿನಲ್ಲಿದ್ದ ಅಸಹನೆ ಕಡಿಮೆ ಆಗಿ ಮಾಯವಾಗಿದ್ದ ಹೆದರಿಕೆ ಮನಸ್ಸನ್ನು ಆಕ್ರಮಿಸಿಕೊಳ್ಳಲು ಶುರು ಮಾಡಿತು ರೈಲಿನ ವೇಗ ಹೆಚ್ಚಿದಷ್ಟು ಇವನ ಹೃದಯ ಬಡಿತವು ಹೆಚ್ಚುತಲ್ಲೆ ಇತ್ತು ಒಂದಷ್ಟು ಸಮಯದ ನಂತರ ಹೃದಯ ಬಡಿತ ನಿಂತಂತಾಗಿ ದೇಹ ಗಾಳಿಯಲ್ಲಿ ತೇಲಿದಂಥ ಅನುಭವ ಹೆದರಿಕೆಯಿಂದ್ದ ಕಣ್ಣು ಬಿಟ್ಟು ನೋಡಿದರೆ ತನ್ನ ಮುಂದೆ ದಡೂತಿ ದೇಹದ ಸಿನಿಮಾಗಳಲ್ಲಿ ಬರುವ ಯಮ ಧೂತನಂತೆ ಬಟ್ಟೆ ಧರಿಸಿದ ವ್ಯಕ್ತಿ ಕೂತಿದ್ದಾನೆ.
ಮಧು :ಯಾರು ನೀವು ..?
ಯಮಧೂತ : ನೋಡಿದರೆ ಗೊತಾಗಲಿಲ್ಲ ವಾ ಸಿನಿಮಾಗಳ್ಳನ್ನು ನೋಡಿಲ್ಲವಾ ನೀವು , ನಾನು ಯಮ ಧೂತ ಆದರೆ ಇದು ಸಿನಿಮಾ ಅಲ್ಲ ನಿಜ ..?
ಮಧು :ನೀವೇಕೆ ಇಲ್ಲಿ ಬಂದಿದ್ದೀರಿ ..? ಸ್ವಲ್ಪ ಅಳುಕಿನಿಂದಲೇ ಕೇಳಿದ
ಯಮಧೂತ : ನೀನು ಸತ್ತಿದಿಯ ಕಣ್ಣಯ್ಯ, ನಿನ್ನನ್ನ ಪಿಕ್ಮಾಡ್ಕೊಂಡು ಯಮಲೋಕಕ್ಕೆ ಕರೆದುಕೊಂಡು ಹೋಗೋಕೆ ಬಂದಿದೀನಿ
ಮಧುವಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಹಾಗೆ ಆಯಿತು, ಆದರೇನು ಮಾಡುವುದು ಸತ್ತ ಮೇಲೆ ಹೋಗಲೇಬೇಕಲ್ಲ
ಯಮಧೂತ :ಸರಿ ನಡಿ ಹೋಗುವ
ಮಧು : ಸಾವರಿಸಿಕೊಂಡ ವಾದ ಮಾಡಲು ನಿಂತ, ನಾನು ಯಮಲೋಕಕ್ಕೆ ಏಕೆ ಬರಬೇಕು ನಾನೇನು ತಪ್ಪು ಮಾಡಿಲ್ಲವಲ್ಲ ಎಂದು ತಾನು ನೆಡಸಿದ್ದ ಕಟ್ಟುನಿಟ್ಟಿನ ಜೀವನದ ಬಗ್ಗೆ ವಿವರಿಸಲು ಪ್ರಾರಂಭಿಸಿದ
ಯಮ ಧೂತ : ನೋಡಯ್ಯ ನಾನು ಒಂದ್ ಥರ ಡ್ರೈವರ್ ಇದ್ದ ಹಾಗೆ ನಮ್ಮ ದೊರೆಗಳು ಯಾರನ್ನು ಪಿಕ್ಮಾಡಿಕೊಂಡು ಬರಲು ಹೇಳುತ್ತಾರೋ ಅಷ್ಟು ಮಾಡುತ್ತೇನೆ ನೇಡಿ ನೇಡಿ ನನಗೆ ಸಮಯವಿಲ್ಲ ಇನ್ನು ಸುಮಾರ್ ಟ್ರೀಪ್ ಮಾಡಬೇಕು.
ಮಧುವಿಗೆ ಬೇರೆ ದಾರಿಯಿಲ್ಲದೆ ಯಮಧೂತನೊಂದಿಗೆ ಹೊರಟು ಹಳೇ ಕಾಲದಲ್ಲಿ ರಾಜ ಮಹಾರಾಜರ ಕೋಟೆಗಿರುವಂಥ ಒಂದು ದೊಡ್ಡ ಬಾಗಿಲಿನ ಮುಂದೆ ಬಂದು ನಿಂತ, ಮಧು ತಾನು ಎಲ್ಲಿಗೆ ಬಂದಿದ್ದೇನೆ ಮುಂದೆ ಏನು ಮಾಡಬೇಕು ಅನ್ನುವಷ್ಟರಲ್ಲಿ ಜೊತೆಗೆ ಬಂದಿದ್ದ ಯಮಧೂತ ಅವನನ್ನು ಅಲ್ಲೇ ಬಿಟ್ಟು ಹೊರೆಟು ಹೋದ, ಅಷ್ಟರಲ್ಲಿ ಅವನಂತೆ ಇದ್ದ ಮತೊಬ್ಬ ಯಮ ದೂತ ಮಧುವನ್ನುದುಕಿ ಕೊಂಡು ಹೋಗಿ ಮುಖ್ಯ ದ್ವಾರದ ಪಕ್ಕದಲ್ಲಿದ್ದ ಒಂದು ಸಣ್ಣ ಕೋಣೆಯೊಳಗೆ ನೂಕಿದ, ಮಧುವಿಗೆ ಅಲ್ಲೇನಾಗುತಿದೆ ಎಂದು ಯೋಚನೆ ಮಾಡುವಷ್ಟರಲ್ಲೇ ಅಶರೀರವಾಣಿಯೊಂದು “ಮಧು ಸೋಫಾ ಮೇಲೆ ಕುಳಿತುಕೋ” ಎಂಬ ಸಂದೇಶವನ್ನು ನೀಡಿತು (ಇದೆಲ್ಲದರ ನಡುವೆ ಮಧುವಿನ ಮನಸಿನ್ನಲ್ಲಿ ಹಾದು ಹೋದದ್ದು ಅವನು ಅತ್ತ್ಯಂತ ಕಷ್ಟ ಸದ್ಯದಿಂದ ಸಹಿಸಿಕೊಂಡು ನೋಡುತಿದ್ದ ಬಿಗ್ಬಾಸ್ )ಒಂದು ಸಣ್ಣ ಪರದೆ ತೆರೆದುಕೊಂಡು ಅವನ ಮನೆಯ, ಕೆಲ್ಸ ಮಾಡುತಿದ್ದ ಕಚೇರಿಯ ದೃಶ್ಯಾವಳಿಗಳನ್ನು ಅಕ್ಕಪಕ್ಕದಲ್ಲಿ ತೋರಿಸತೊಡಗಿತು ಅದಕ್ಕೂ ಮುಂಚೆ ಅವನು ಗಮನಿಸಿದ್ದು ಬೆಂಗಳೂರಿನಲ್ಲಿ ಅಂದಿನ ದಿನಾಂಕ ಓ ಆಗಲೇ ನಾನು ಸತ್ತು ಒಂದು ತಿಂಗಳಾಗಿದೆ ಅಂದು ಕೊಂಡು ತನ್ನ ಮಡದಿ ಮಕ್ಕಳು ತನ್ನ ಇಷ್ಟದಂತೆ ಬದುಕುತಿದ್ದಾರ ಅಥವಾ ಹೇಗೆ ಎಂಬ ಕುತೂಹಲದಿಂದ ನೋಡತೊಡಗಿದ ಮನೆಯ ವಾತಾವರಣವೇ ಬದಲಾಗಿದೆ ಮಕ್ಕಳು ಮನೆಯ ರೂಪುರೇಷಗಳನ್ನೇ ಬದಲಿಸಿದ್ದಾರೆ ಅವರಿಗೆ ಇಷ್ಟ ಬಂದ ತಿಂಡಿಗಲ್ಲನ್ನು ಹೋಟೆಲ್ನಿಂದತ್ನದು ತಿನ್ನುತಿದ್ದರೆ ಬೇಕಾದ ಕಡೆಗೆ ಟ್ರಿಪ್ ಹೋಗುತ್ತಿದ್ದಾರೆ ಇದೆಲ್ಲವನ್ನು ನೋಡಿದ ಮಧುವಿನ ಅಸಹನೆಯ ಕಟ್ಟೆ ಒಡೆಯ ತೊಡಗಿತು ಆದರೂ ಸಾವರಿಸಿಕೊಂಡು ತನ್ನ ಕಚೇರಿಯಲ್ಲಿ ಹೆಂಗೆಂದು ನೋಡಲು ತನ್ನ ಜಾಗದಲ್ಲಿ ಬೇರೆ ಯಾರೋ ಬಂದು ಕೂತಿದ್ದಾರೆ ಯಾವಾಗಲು ಕೆಲಸದ ಒತ್ತಡದಲ್ಲಿ ಇರುತಿದ್ದ ತನ್ನ ಕೈ ಕೆಳಗೆ ಕೆಲ್ಸಸ ಮಾಡುವವರು ಲವಲವಿಕೆಯಿಂದ ಓಡಾಡಿ ಕೊಂಡಿದ್ದಾರೆ ಯಾರ ಮಾತುಗಳನ್ನು ಕೇಳಿದರು ಮಧುವನ್ನು ಬಯ್ಯುವವರೇ ಹೆಚ್ಚು ಇದೆಲ್ಲವನ್ನು ನೋಡಿ ಮಧುವಿನ ಕೋಪ ಇನ್ನು ಹೆಚ್ಚಾಗ ತೊಡಗಿತು ಅಷ್ಟರಲ್ಲಿ ಅದೇ ಅಶರೀರವಾಣಿ “ಮಧು ನಿನಗೆ ನೀಡಿರುವ ಶಿಕ್ಷೆ ನೀನು ದಿನ ನಿತ್ಯ ೮ ಗಂಟೆ ಕಾಲ ನೀನು ನಿಯಂತ್ರಿಸುತ್ತಿದ್ದ ೫ ಜನರ ಜೀವನದ ದೃಶ್ಯಾವಳಿಗಳನ್ನು ನೋಡಬೇಕು” ಎಂದು ಹೇಳಿ ನಿಲ್ಲಿಸಿತು.
ಮಧು ಕೋಪದಿಂದ ಎದ್ದು ಹೊರ ಬಂದ ಅದೇ ಯಮಧೂತ ಮಧುವನ್ನು ಮುಖ್ಯ ದ್ವಾರದ ಮೂಲಕ ಮತ್ತೊಂದು ಕೊನೆಯ ಒಳಗೆದೂಡಿದ, ಒಂದು ಮೂಲೆಯಲ್ಲಿ ೪-೫ಜ ನ ಒಂದೊಂದು ಟಿವಿ ಪರದೆಯ ಮೇಲೆ ಕುಳಿತು ಏನನ್ನೋ ನೋಡುತಿದ್ದರೆ ಕೊನೆಗೂ ಯಾರಾದರೂ ಸಿಕ್ಕರಲ್ಲ ನನ್ನ ಮನಸಿನಲ್ಲಿ ಆಗುತ್ತಿರುವುದನ್ನು ಇವರ ಬಳಿ ಹೇಳಿ ಸಮಾಧಾನ ಪಟ್ಟುಕೊಳ್ಳಬೇಕೆಂದು ಅತ್ತ ಕಡೆ ನೆಡೆದ, ಅಲ್ಲಿ ನೋಡಿದರೆ ಇವನ ಅಪ್ಪ, ಅಜ್ಜ, ಅಣ್ಣಂದಿರು ಅವರ ಜೀವನದಲ್ಲಿ ಸಹ್ಯವಾಗದ ದೃಶ್ಯಾವಳಿಗಳನ್ನೇ ನೋಡುತಿದ್ದರೆ ಅದರಲ್ಲಿ ಇವನ ದೃಶ್ಯಗಳು ಕೂಡ ಬಂದು ಹೋಗುತ್ತಿವೆ ಇವನನ್ನು ನೋಡಿದರು ಕೂಡ ಯಾರು ಇವನ ಬಗ್ಗೆ ಕೋಪ ಮಾಡಿಕೊಳ್ಳಲಿಲ್ಲ ತಾನು ಒಂದು ಟಿವಿಯ ಮುಂದೆ ಕುಳಿತ .
ಯಾರೋ ಭುಜ ಹಿಡಿದು ಅಲ್ಲಾಡಿಸಿದಂತಯತು ನೋಡಿದರೆ ರೈಲ್ ನ ಟಿಟಿ ಟಿಕೆಟ್ ತೋರಿಸೆಂದು ಕೇಳುತಿದ್ದಾನೆ