ಹರಿಯುವ ನದಿ ಸಾಗರವಾ ಸೇರಲೇ ಬೇಕು

ಹರಿಯುವ ನದಿ ಸಾಗರವಾ ಸೇರಲೇ ಬೇಕು…
ಬದುಕು ಮಾಗುವ ಮುನ್ನ
ಪಯಣ ಮುಗಿಸುವ ಮುನ್ನ
ನದಿಯು ಮನದಾಳದಲಿ
ಬೆದರಿರುವದು…
ಗಿರಿ, ಗುಡ್ಡ, ಕಣಿವೆಗಳ,
ಅಲ್ಲಲ್ಲಿ ತಿರುವುಗಳ
ದಾಟಿ ಬಂದದ್ದನ್ನು
ನೆನಪಿಡುವುದು…
ತನ್ನೆದುರು ಬಾಯ್ದೆರೆದ
ಸಾಗರವ ದಿಟ್ಟಿಸುತ
ಒಂದಾಗೊ ಭಯದಲ್ಲಿ
ನಡುಗಿರುವುದು…
“ಒಮ್ಮೆ ಹೊಕ್ಕರೆ ಅದನು
ಮತ್ತೆ ಹೊರಬರಲುಂಟೇ?”
-ಇದ್ದಷ್ಟು ಧೈರ್ಯವೂ
ಉಡುಗಿರುವುದು…
ಬೇರೆ ದಾರಿಯೇ ಇಲ್ಲ.
ತಿರುಗಿ ಹರಿವುದು ಸಲ್ಲ,
ಆ ದಾರಿ ಬದುಕಿನಲಿ
ಮುಚ್ಚಿದಂತೆ.
ಏನಿದ್ದರೂ ಮುಂದೆ
ಹರಿವುದೊಂದೇ ದಾರಿ
ಹರಿಯುತ್ತಲಿರಬೇಕು
ದಾರಿ ಬಿಚ್ಚಿದಂತೆ…
ಏನೇನು ಕಾದಿಹುದೋ?
ಏನು ಬಂದೊದಗುವದೋ?
ಸಾಗರದಿ ಧುಮುಕಿಯೇ
ಅರಿಯಬೇಕು…
ಸಾಗರದ ‌ಮಿಲನವದು
ಮೈಮರೆಯಲೆಂದಲ್ಲ,
ಅದರೊಡನೆ ಒಂದಾಗಿ
ಹರಿಯಬೇಕು…
( ಇಂಗ್ಲಿಷ್ ನಿಂದ ಅನುವಾದ:
ಶ್ರೀಮತಿ, ಕೃಷ್ಣಾ ಕೌಲಗಿ.)
Leave a Reply