ಗೂಬೆಗಳ ಮುಗ್ಧ ಲೋಕದ ಅನಾವರಣ….!
ಇತ್ತೀಚಿಗೆ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ೮೧ ನೇ ಜನ್ಮದಿನದ ಪ್ರಯುಕ್ತ ಛಾಯಾಚಿತ್ರ, ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಸಂವಾದ ಏರ್ಪಡಿಸಲಾಗಿತ್ತು. (ತೇಜಸ್ವಿಯವರ ನೆನೆಪಿಗಾಗಿ ಪರಿಸರ -ನಿಸರ್ಗ ಸಂರಕ್ಷಣಾ ಸಂಸ್ಥೆಯು ೨೦೧೩ ರಿಂದ ತೇಜಸ್ವಿ ಜೀವಲೋಕ ಹೆಸರಿನಲ್ಲಿ ನಮ್ಮ ಸುತ್ತಲಿನ ವಿಸ್ಮಯ ಜೀವಲೋಕವನ್ನು ಸಾಮಾನ್ಯ ಜನರಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದೆ). ಕಾರ್ಯಕ್ರಮದ ಅಂಗವಾಗಿ ನಾಡಿನ ಹಾಗೂ ವಿಶ್ವದ ಪ್ರತಿಭಾನ್ವಿತ ಸಂಶೋಧಕರು, ಛಾಯಾಚಿತ್ರಕಾರರು ಸೆರೆಹಿಡಿದ ‘ಗೂಬೆಗಳ ಮುಗ್ಧ ಲೋಕ !’ ಪರಿಚಯಿಸುವ ಅಪೂರ್ವ ಛಾಯಾಚಿತ್ರಪ್ರದರ್ಶನ ನಡೆಯಿತು. ಆ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ತಿನ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಮೆರುಗು ನೀಡಲು ನೈಸರ್ಗಿಕ ವಸ್ತುಗಳನ್ನೇ ಉಪಯೋಗಿಸಿ ಗೂಬೆಯ ಪ್ರತಿಕೃತಿಗಳನ್ನು ನಿರ್ಮಿಸಿದ್ದು ನೋಡುಗರ ಕಣ್ಮನ ಸೆಳೆದವು.
ಹೊಸ್ಮನೆ ಮುತ್ತು