ಗಿಳಿನಡಿಗೆ….!

ಗಿಳಿನಡಿಗೆ….!
ಇದೊಂದು ನಡಿಗೆ ಅಭ್ಯಾಸ ನೆರವಾಗುವ ಚಿಕ್ಕ ಮಕ್ಕಳ ಆಟಿಕೆ. ಆಗಷ್ಟೇ ನಡಿಗೆ ಕಲಿತ ಮಕ್ಕಳ ಸ್ಪಷ್ಟ ಹೆಜ್ಜೆಗಳಿಗಾಗಿ ರೂಪಗೊಂಡ ಸಾಂಪ್ರದಾಯಿಕ ಆಟಿಕೆ. ಇದು ವಿವಿಧ ಭಾಗಗಳಲ್ಲಿ ಬಳಕೆಯಾಗುತ್ತಿದ್ದ ಒಂದು ಪುರಾತನ ಸರಳ ಆಟಿಕೆ ವಸ್ತು. ಮರದ ದಂಡಕ್ಕೆ ಚಿಕ್ಕ ಗಾಲಿಯೊಂದನ್ನು ಜೋಡಿಸಿ ಅದಕ್ಕೂ ದಂಡಕ್ಕೂ ಸೇರಿಸಿ ತಗಡಿನ ಗಿಳಿಯ ಆಕೃತಿಯೊಂದನ್ನು ಜೋಡಿಸಲಾಗಿದೆ. ಮಗು ದಂಡವನ್ನು ಹಿಡಿದು ನಿಧಾನವಾಗಿ ಹೆಜ್ಜೆ ಹಾಕಿದಂತೆ ಗಾಲಿ ತಿರುಗಿ ಅದಕ್ಕೆ ಜೋಡಿಸಿದ ಗಿಳಿಯ ಆಕೃತಿಯೂ ಕೂಡಾ ಮೇಲೆ ಕೆಳಗೆ ಚಲಿಸುತ್ತದೆ. ಗಿಳಿಯು ಮೇಲೆ ಕೆಳಗೆ ಆಡುವುದು ಮಗುವಿನಲ್ಲಿ ನಡಿಗೆಯನ್ನು ಉತ್ತೇಜಿಸುತ್ತದೆ. ಮಗುವಿನ ಗಮನ ಆಟಿಕೆ ಮೇಲೆ ಕೇಂದ್ರೀಕೃತವಾಗುವುದಲ್ಲದೇ, ಗಿಳಿಯೊಂದಿಗೆ ಸಂವಾದಿಸುತ್ತಲೇ ಅದರೊಂದಿಗೆ ಕಾಲ ಕಳೆಯುತ್ತದೆ. ಮಗುವಿನ ಮನಸ್ಸನ್ನು ರಂಜಿಸುತ್ತಲೇ, ನಡೆಯುವಾಗ ದೇಹದ ಸಮತೋಲನಕ್ಕೊಂದು ಊರುಗೋಲಾಗುವ ಈ ಆಟಿಕೆಯಿಂದ ಸ್ವತಂತ್ರವಾದ ನಡಿಗೆಯೂ ಸಾಧ್ಯವಾಗುತ್ತದೆ.
ಹೊಸ್ಮನೆ ಮುತ್ತು

Leave a Reply