Game of life
When there is nothing to fight for
what does it mean to win lose?
When there is nothing to be saved
what doe it mean to destroy and preserve?
When there is nothing to aim for
what does it mean to succeed and fail?
Game of life
being played for the sake of the game
Winners and Losers
alike making it to the finish line!
ಆಟ
ಹೋರಾಟವೇ ಇಲ್ಲದಿರೆ
ಗೆಲುವು- ಸೋಲಿನ
ಹಂಗೇನು?
ಕಾಪಿಡುವ ಕೆಲಸವೇ ಇಲ್ಲದಿರೆ
ಉಳಿಸುವ- ನಾಶಪಡಿಸುವ
ಚಿಂತೆ ಏಕೆ…
ಗುರಿಯೇ ಇಲ್ಲದಿರೆ
ಯಶ- ಅಪಶಯಗಳ
ಗೊಡವೆ ಎಲ್ಲಿಯದು?
ಬದುಕಿನ ಈ ಆಟ
“ಆಟಮಾತ್ರಕ್ಕೆ”
ಎಂತಾದರೆ…
ಗೆದ್ದವರು- ಸೋತವರು
ಇಬ್ಬರೂ
ಆಟ ಮುಗಿಸಲೇ ಬೇಕು…
(ಅಜಿತಾಳ (Game of life) – ಕವಿತೆಯ ಅನುವಾದ)