ಫೇಸ್ ಬುಕ್ ,,, ಒಂದು ಜಿಜ್ಞಾಸೆ….
ನಾನು ಫೇಸ್ ಬುಕ್ಕಿಗೆ ಬಂದು ಐದು ವರ್ಷಗಳು ಮುಗಿದವು. ಅದನ್ನು ಸೇರಿಕೊಂಡಾಗ ನನಗೆ ನನ್ನದೇ ಆದ ನಿರೀಕ್ಷೆಗಳೇನೂ ಇರಲಿಲ್ಲ. ನನ್ನೊಂದು ಅದರ ಬಗ್ಗೆ ಪುಟ್ಟ ಕುತೂಹಲ, ಮಕ್ಕಳ ಸಹಾಯ ಒತ್ತಾಯದಿಂದ ಅದರ ಸುಳಿಯೊಳಗೆ ಬಂದೆ. Technological knowledge ನಲ್ಲಿ ನಾನು ಒಂದು ದೊಡ್ಡ ಶೂನ್ಯ. ಬೇಕಾದುದನ್ನು ಅವರಿವರಿಂದ, ಆಗಾಗ ಅಷ್ಟಿಷ್ಟು ಕಲಿತು ಒಂದೊಂದೇ ಮೆಟ್ಟಿಲು ಹತ್ತುತ್ತ ಇಲ್ಲಿಗೆ ಬಂದಿದ್ದೇನೆ. ಇದರಲ್ಲಿಯೇ ಹೆಚ್ಚು ತೊಡಗಿಕೊಳ್ಳು ವಿಚಾರವೇನೂ ನನಗಿಲ್ಲ. ಬೆಂಗಳೂರಿನಂಥ ಮಹಾನಗರದಲ್ಲಿ ಹೆಚ್ಚಿನದೇನನ್ನೂ ನಿರೀಕ್ಷಿಸದೇ ನಮ್ಮ ಪಾಡಿಗೆ ನಾವಿರುವದನ್ನು ರೂಢಿಸಿಕೊಳ್ಳಬೇಕಾಗಲು ಬೇಕಾಗುವ ಸಿದ್ಧತೆ ಮೊದಲ, ಕೆಲವೊಮ್ಮೆ ಕೊನೆಯ ಸೂತ್ರ ಎಂದು ನನಗೀಗ ಮನದಟ್ಟಾಗಿ ಇದರ ಮೊರೆ ಹೋದೆ.
ನನಗೀಗ ಐದುನೂರು ಮಿಕ್ಕಿ fb ಸ್ನೇಹಿತರಿದ್ದಾರೆ. ಅದರ ಇಮ್ಮಡಿ requests ಗಳಿವೆ. ಎಲ್ಲರೂ ಸ್ನೇಹಿತರಾದರೆ. ಅದೂ ಒಳ್ಳೆಯದೇ. ಚಂದವೇ… ಸಮಸ್ಯೆ ಇರುವದು ನಂತರ share ಆಗುವ posts ಗಳದ್ದು. ಸಮಾನ ವಯಸ್ಕ, ಸಮಾನ ಮನಸ್ಕ, ಸಮಾನ ಅಭಿರುಚಿ, ಆಸಕ್ತಿ ಇರದಿರುವ ಗುಂಪಿನಲ್ಲಿ ಎಲ್ಲ ರೀತಿಯ
ವಿಷಯಗಳನ್ನು ಕುರಿತು posts ಗಳು ವಿಷಯ ಸಾಮಾನ್ಯ.. ಹಾಗೆಂದು ಬಂದು ಬೀಳುವ ಗಳನ್ನು
ಚಾಳಿಸಿ, ಕೇರಿ ಬೇಕಾದುದನ್ನು ಹೆಕ್ಕಿ ತೆಗೆಯುವುದು ಸುಲಭವೂ ಅಲ್ಲ. ಸದ್ಯ ನಾನು ಅವಶ್ಯವೆನಿಸಿದ ಕೆಲ posts ಗಳನ್ನು ಪ್ರತ್ಯೇಕ file ನಲ್ಲಿ ಮಾಡಿ ಉಳಿದವುಗಳನ್ನು ವಿಷಯಾಧಾರದ ಮೇಲೆ ಒಂದು ವಾರದವಧಿಯಲ್ಲಿ delete ಮಾಡುತ್ತೇನೆ, ನನ್ನವನ್ನೂ ಸೃಎಇಸಿ, ಅಪರೂಪವೆನ್ನುವ ಕೆಲವು ಬೇಕೆಂದುದನ್ನಷ್ಟೇ wall ಮೇಲೆ ಬಿಟ್ಟು….
ಆಗ ನನಗೆ ಆಯ್ದ ಲೇಖನಗಳನ್ನೋದುವ, ಉಳಿಸಿಕೊಳ್ಳುವ ಕೆಲಸ ಸುಲವು ಆಗುತ್ತದೆ. ಈಗೀಗ ವಯಸ್ಸಿಗನುಣವಾಗಿ ಕಣ್ಣಿನತೊಂದರೆಯೂ ಬಾಧಿಸುವುದರಿಂದ ಅಷ್ಟು ಚಿಕ್ಕ screen ನಲ್ಲಿ ಹೆಚ್ಚುಕಾಲ ಬರೆಯುವದು, ಓದುವದು ಪ್ರಯಾಸಕರವೆನಿಸುತ್ತಿದ್ದು ಸಮಯದ ಹಿಡಿತದಲ್ಲಿ ಅನಿವಾರ್ಯವಾಗಿ ಸಿಗುವಂತಾಗಿದೆ.
ಇವೆಲ್ಲ ಕಾರಣಗಳಿಂದ ಫೇಸ್ ಬುಕ್ ಮುಂದುವರಿಕೆ Hamlet ನ To Do or not to Do is the question ಎಂಬತಾಗಿದೆ. ಈ ದ್ವಂದ್ವದಲ್ಲಿ
ಹೊಸ request ಗಳು ಹಾಗೇ ಉಳಿದಿವೆ. ನನ್ನ ಲೇಖನಗಳ ವೇಗವೂ ತಗ್ಗುತ್ತಿದೆ. ಇನ್ನೊಂದು ಸಮಸ್ಯೆ ಎಂದರೆ fb ಯಲ್ಲಿಯ post ಗಳ ವಿಶ್ವಾಸಾರ್ಹತೆ. ಒಂದು ಗುಂಪನ್ನು ಮೆಚ್ಚುತ್ತೇವೆ. ಓದುತ್ತೇವೆ, share ಮಾಡುತ್ತೇವೆ. Discussions ಗಳಾಗುತ್ತವೆ. ನಂತರ ಒಂದು ದಿನ ಅದು ಸತ್ಯವಲ್ಲ ಎಂದು ತಿಳಿಯುತ್ತದೆ. ಒಂದು ಗುಂಪಿನ ಚಟುವಟಿಕೆಗಳನ್ನು ಪ್ರಶಂಸಿಸುತ್ತೇವೆ. ಕೆಲವರು ಅದನ್ನು ಹೀನಾಮಾನವಾಗಿ ಬಯ್ದು post ಹಾಕುತ್ತಾರೆ.
ಕೆಲವು ಪರಿಚಿತರ ಲೇಖನಗಳಿಗೂ, ಅವರ ವಿಚಾರ, ನಡುವಳಿಕೆಗಳಿಗೂ ಅಜಗಜಾಂತರವಿದ್ದುದು ತಿಳಿದಾಗ ಭ್ರಮ ನಿರಸನವಾಗಿ, ಯಾರನ್ನು, ಯಾವುದನ್ನು, ಎಷ್ಟು ನಂಬಬೇಕೆಂದೇ ಅರ್ಥವಾಗುವದಿಲ್ಲ. ಹಾಗಾದಾಗ ಓದಿದ, ನೋಡಿದ ಎಲ್ಲವನ್ನೂ ಒರೆಗೆ ಹಚ್ಚುವ ಕೆಟ್ಟ ಚಾಳಿ ಬೆಳೆದು ಬಿಡುವ ಅಪಾಯವನ್ನೂ ಅಲ್ಲಗಳೆಯುವಂತಿಲ್ಲ. ಹೀಗೆಂದಾಗ ಬೇಡವೆನಿಸಿದರೆ ಬಿಟ್ಟರಾಯಿತು….. ಇಷ್ಟೆಲ್ಲ ಜಿಜ್ಞಾಸೆಯೇಕೆ ಎಂಬ ಪ್ರಶ್ನೆ ನಿಮ್ಮಂತೆ ನನ್ನದೂ ಹೌದು. ಈ ಎಲ್ಲ ಪ್ರಸ್ತಾಪಿತ ವಿಷಯಗಳು ನನಗೇ ಮೊದಲು ಅನ್ವಯಿಸುತ್ತವೆ ಎಂಬುದೂ ತಿಳಿಯಲಾರದ ವಿಷಯವೇನೂ ಅಲ್ಲವೇ ಅಲ್ಲ… ಬೇಕೆಂದುದನ್ನು ಮಾಡಿ, ಬೇಡವೆನಿಸಿದ್ದನ್ನು ಬಿಟ್ಟರಾಯಿತು ಎಂಬುದು ಅಂದಷ್ಟು ಸುಲಭವಾಗಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಮನುಷ್ಯ ಸ್ವಭಾವವೇ ಹಾಗೆ…. “ಆಪ್ತರು ಉಣ್ಣಲೂ ಬೇಕು…. ಅಕ್ಕಿ ಡಬ್ಬಿಯೂ ಖಾಲಿಯಾಗಬಾರದು…” ಅದಕ್ಕೇ ಹೇಳುವದು, HABITS ONCE CULTIVATED DIE HARD…