ಗೋಷ್ಠಿ ೪ – ಸಂಶೋಧಕರೊಂದಿಗೆ ಮಾತುಕತೆ
ಇದು, ಇಬ್ಬರು ಪ್ರಸಿದ್ಧ ಸಂಶೋಧಕರಾದ ಹಂಪನಾ ಮತ್ತು ಆರ್.ಶೇಷಾಶಾಸ್ತ್ರಿ ಅವರ ನಡುವೆ ನಡೆಯುವ ಸಂವಾದ. ಹಂಪನಾ ಅವರು ಕನ್ನಡದ ಇತಿಹಾಸ, ಸಾಹಿತ್ಯ, ಜೈನಶಾಸ್ತ್ರಗಳಲ್ಲಿ ವಿಶೇಷ ಕೆಲಸ ಮಾಡಿರುವ ಪಂಡಿತರು. ಆರ್.ಶೇಷಶಾಸ್ತ್ರಿಯವರು ಹಂಪನಾ ಅವರು ಮಾಡಿರುವ ಕೆಲಸದ ಬಗ್ಗೆ ಪ್ರಸ್ತಾವಿಕವಾಗಿ ಮಾತಾಡಿ, ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೆಗಳು ಕೇವಲ ವರದಿಯ ರೂಪದ ಉತ್ತರಗಳನ್ನು ಅಪೇಕ್ಷಿಸದೆ, ಹಂಪನಾ ಅವರು ಮಾಡಿದ ಕೆಲಸದ ಹಿಂದಿನ ಉದ್ದೇಶ, ಸಿದ್ಧಾಂತ, ಅರ್ಥ ಪೂರ್ಣತೆ, ಮಹತ್ವಗಳ ಮೇಲೆ ಬೆಳಕು ಚೆಲ್ಲುತ್ತವೆ.