ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೨: ಸತ್ಯದೊಂದಿಗೆ ಪ್ರಯೋಗ – ಕನ್ನಡ ಆತ್ಮಕಥೆಗಳು

ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೧೨: ಸತ್ಯದೊಂದಿಗೆ ಪ್ರಯೋಗ – ಕನ್ನಡ ಆತ್ಮಕಥೆಗಳು

ಗಾಂಧೀಜಿಯವರು ತಮ್ಮ ಕಥೆಯನ್ನು “ಸತ್ಯದೊಂದಿಗೆ ಒಂದು ಪ್ರಯೋಗ” ಎಂದು ಕರೆದರು. ಆತ್ಮಕಥೆಗಳನ್ನು ಬರೆಯುವುದು ಬಹಳ ನಾಜೂಕಿನ ಕೆಲಸ – ಕತ್ತಿಯ ಧಾರೆಯ ಮೇಲಿನ ನಡಿಗೆ. ಸಾಮಾನ್ಯವಾಗಿ ಆತ್ಮಕಥೆಗಳು ಬಾಲ್ಯದ ಬಗ್ಗೆ ವಸ್ತುನಿಷ್ಠವಾಗಿರುತ್ತವೆ. ತಾರುಣ್ಯದ ಬಗ್ಗೆ ಹಾಗೂ – ಹೀಗೂ ಹೊಯ್ದಾಡುತ್ತವೆ. ಮಧ್ಯ ವಯಸ್ಸಿನಿಂದ ಸ್ವಸಮರ್ಥನಿಗೆ, ಆಗದವರ ಬಗ್ಗೆ ಸೇಡು ತೀರಿಸಿಕೊಳ್ಳಲು, ಅನೇಕ ವಿಷಯಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸುತ್ತವೆ. ಯಾವ ಆತ್ಮಕಥೆಯಲ್ಲೂ ಭ್ರಷ್ಟಾಚಾರ ನಡೆಸಿ ಶ್ರೀಮಂತರಾದ ಬಗ್ಗೆ ಮಾಹಿತಿ ಇರುವದಿಲ್ಲ. ಪ್ರೇಮ, ಕಾಮ, ವೈವಾಹಿಕ ಜೀವನದ ವಿಷಯದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ದಿಟ್ಟವಾಗಿ ಬರೆಯುತ್ತಾರೆ.
ಇಂಥ ಹಿನ್ನೆಲೆಯಲ್ಲಿ, ನಮ್ಮಲ್ಲಿ ಬರುತ್ತಿರುವ ಆತ್ಮಕಥೆಗಳ ರೀತಿ ಎಂಥದು ? ಈ ವಿಷಯವನ್ನು ಕುರಿತು, ಸ್ವತಃ ಆತ್ಮಕಥೆಗಳನ್ನು ಬರೆದಿರುವ ಶಶಿಕಲಾ ವೀರಯ್ಯಸ್ವಾಮಿ ತಮ್ಮ ಕೃತಿಗಳ ಹಿನ್ನೆಲೆಯಲ್ಲಿ ಆತ್ಮಕಥೆ ಎಂಬ ಸಾಹಿತ್ಯಪ್ರಕಾರದ ಸ್ವರೂಪ, ಉದ್ದೇಶ, ಪರಿಣಾಮಗಳನ್ನು ತಮ್ಮ ಕೃತಿಗಳ ಹಿನ್ನೆಲೆಯಲ್ಲಿ ಚರ್ಚಿಸುತ್ತಾರೆ.

ಅಗ್ರಹಾರ ಕೃಷ್ಣಮೂರ್ತಿಯವರು ಈ ಗೋಷ್ಠಿಯನ್ನು ನಿರ್ದೇಶಿಸುತ್ತಾರೆ.
ಜಿ.ಎಸ್ ಆಮೂರ
ಶಶಿಕಲಾ ವಸ್ತ್ರದ
ಲಕ್ಷ್ಮಣ
ಅಗ್ರಹಾರ ಕೃಷ್ಣಮೂರ್ತಿ

Leave a Reply