ಧಾರವಾಡ ಸಾಹಿತ್ಯ ಸಂಭ್ರಮ ೨೦೧೬: ಗೋಷ್ಠಿ ೫ – ವಿಶೇಷ ಉಪನ್ಯಾಸ : ನಮಗೆ ಸಾಹಿತ್ಯ ಏಕೆ ಬೇಕು?
ಈ ಸಲದ ಒಂದು ವಿಶೇಷ ಕಾರ್ಯಕ್ರಮ ವಿಶೇಷ ಉಪನ್ಯಾಸ. ಸಾಹಿತ್ಯದ ಅಭ್ಯಾಸ. ಓದು ತರುಣರಲ್ಲಿ ಕಡಿಮೆಯಾಗುತ್ತಿದೆ ಎಂಬ ಆಪಾದನೆ ಒಂದು ಕಡೆ ಇದ್ದರೆ, ಸಾಹಿತ್ಯ ಸಂಭ್ರಮದ ನಾಲ್ಕು ಆವೃತ್ತಿಗಳಿಗೆ ನಾಡಿನ ಒಳಗಿನಿಂದ ಮತ್ತು ಹೊರಗಿನಿಂದ ಅತ್ಯಂತ ಉತ್ತೇಜನಕಾರಿಯಾದ ಸ್ಪಂದನ ಸಿಗುತ್ತಿರುವದು ಆಶಾದಾಯಕ ಸಂಗತಿಯಾಗಿದೆ. ಸಾಹಿತ್ಯಾಭ್ಯಾಸವನ್ನು ಕುದುರಿಸುವ ಅನೇಕ ಹೊಸ ದಾರಿಗಳನ್ನು ಹುಡುಕುವ ಕೆಲಸದಲ್ಲಿ ಸಂಭ್ರಮ ಗಣನೀಯ ಯಶಸ್ಸು ಪಡೆದಿದೆ. ಈ ಸಂದರ್ಭದಲ್ಲಿ ಹಿರಿಯ ಕವಿ, ವಿಮರ್ಶಕ, ಅನುವಾದಕ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ‘ನಮಗೆ ಸಾಹಿತ್ಯ ಯಾಕೆ ಬೇಕು?’ ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಲಿದ್ದಾರೆ. ಉಪನ್ಯಾಸದ ನಂತರ ಸಭಿಕರು ಕೇಳುವ ಪ್ರಶ್ನೆಗಳಿಗೆ ಭಟ್ಟರು ಉತ್ತರ ಕೊಡುತ್ತಾರೆ.