ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೭: ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ/ ಮಹಿಳಾ/ ದಲಿತ ಸಂವೇದನೆ ಎಂದು ಗುರುತಿಸುವುದು ಸರಿಯೇ?
ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ಹಲವು ಮುಸ್ಲಿಂ, ಮಹಿಳಾ ಮತ್ತು ದಲಿತ ಲೇಖಕರು ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ. ಇವರನ್ನು ಉಳಿದ ಲೇಖಕರಿಂದ ಬೇರ್ಪಡಿಸಿ, ಚರ್ಚಿಸುವ ಒಂದು ಹೊಸ ಒಲವು ಸಹ ಕಾಣಿಸಿಕೊಂಡಿದೆ. ತಮ್ಮ ಧರ್ಮ, ಲಿಂಗ, ವರ್ಗಗಳಿಗೆ ವಿಶಿಷ್ಟವಾದ ಅನುಭವಗಳನ್ನು ಇವರು ಅಭಿವ್ಯಕ್ತಿಸಬೇಕೆಂಬ ಅಪೇಕ್ಷೆ, ನಿರೀಕ್ಷೆ, ಒತ್ತಡ ಕೂಡ ಹುಟ್ಟಿಕೊಂಡಿದೆ.
ಲೇಖಕರನ್ನು ಹಣೆಪಟ್ಟಿ ಅಂಟಿಸಿ ಗುರುತಿಸುವದರಿಂದಾಗುವ ಸಾಧಕ – ಬಾಧಕಗಳೇನು? ಅದರಿಂದ ಸಾಹಿತಿಗೆ, ಸಾಹಿತ್ಯಕ್ಕೆ ಏನಾದರು ಉಪಯೋಗವಿದೆಯೇ? ಆಯಾ ವರ್ಗಕ್ಕೆ ಸೇರಿದವರು ತಮ್ಮ ವರ್ಗದ ಕುರಿತು ಬರೆದ ಅನುಭವ ಮಾತ್ರ ನೈಜವೇ? ಉಳಿದವರು ಬರೆದದ್ದು ನೈಜವಿರಲಾರದೇ?….ಇವೆ ಮುಂತಾದ ವಿಷಯಗಳು ಗೋಷ್ಠಿಯ ಚರ್ಚೆಯ ವಸ್ತು….