ಧಾರವಾಡ ಸಾಹಿತ್ಯ ಸಂಭ್ರಮ ೨೦೧೫: ಗೋಷ್ಠಿ ೬: ಸಾಹಿತ್ಯದ ಬೆಳವಣಿಗೆಯಲ್ಲಿ ಸಣ್ಣ ಪತ್ರಿಕೆಗಳ ಪಾತ್ರ
ಪತ್ರಿಕೆಗಳು ಸಾಹಿತ್ಯದ ಬೆಳೆವಣಿಗೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ. ರಾಜ್ಯದ ವಿವಿಧ ಭಾಗಗಳಿಂದ ಹಲವಾರು ಪತ್ರಿಕೆಗಳು ಆರಂಭವಾಗಿ ಕೆಲವೇ ವರ್ಷಗಳಲ್ಲಿ ನಿಂತುಹೋದವು. ಬಹಳಷ್ಟು ಜನರನ್ನು ತಲಪುವ ದಿನಪತ್ರಿಕೆ, ಪಾಕ್ಷಿಕ ಮತ್ತು ಮಾಸಪತ್ರಿಕೆಗಳಿಗಿಂತ ಈ ಸಣ್ಣ ಪತ್ರಿಕೆಗಳು ಹೇಗೆ ಭಿನ್ನ? ಹೊಸ ಲೇಖಕರಿಗೆ ಇವುಗಳ ಅಗತ್ಯವೇನು? ಹಿರಿಯ ಲೇಖಕರಿಗೂ ಇವು ಅಗತ್ಯವೇ? ಇವು ಇಲ್ಲದಿದ್ದರೆ ಏನಾಗುತ್ತಿತ್ತು? ಇವೆಲ್ಲ ಯಾಕೆ ಅಲ್ಪಾಯುಷಿಗಳು? ಇವುಗಳಿಂದ ಆರ್ಥಿಕ ಲಾಭ ಇಲ್ಲದಿದ್ದರೂ ಬೇಂದ್ರೆ, ಮಾಸ್ತಿ, ಆನಂದಕಂದ, ಅಡಿಗ, ಅನಂತಮೂರ್ತಿ, ಚಂಪಾ, ಪಟ್ಟಣಶೆಟ್ಟಿಯವರಂಥ ಹಿರಿಯ ಲೇಖಕರೂ ಯಾಕೆ ಸಣ್ಣ ಪತ್ರಿಕೆಗಳ ಪ್ರಕಟಣೆಯಲ್ಲಿ ಆಸಕ್ತಿ ತೋರಿದರು? ಚರ್ಚೆಗೆ ಈ ಪ್ರಶ್ನೆಗಳು ದಿಕ್ಸೂಚಿಯಾಗಬೇಕೆಂದು ಸಂಘಟಕರ ಆಶಯವಾಗಿತ್ತು….