ದೇವರಿಗೊಂದು ಪತ್ರ 7
ಎಂಥದಿದೆಂಥ ಮಾಯೆಯೋ…ದೇವೇಶಾ!
ಮನಕಿದೆಂಥ ಭ್ರಾಂತಿ ಹಿಡಿಸಿಹೆ ಹೃಶಿಕೇಶ!
ತುತ್ತು ಉಣ್ಣಲಾಗುತ್ತಿಲ್ಲವೋ ಸತ್ಯವಚನ
ಚಿತ್ತವೆಲ್ಲ ನೀನೆ ಆವರಿಸಿರುವೆ ಯದುನಂದನ
ಅಕ್ಷೀಪಟದಲಿ ಮೂರ್ತಿ ನಿನ್ನದೇ..ಓ..ನಿರ್ಗುಣ
ದೃಷ್ಟಿ ಬೇರೆ ಏನೂ ಬಯಸದಾಗಿದೆ ಓ.. ಸುಗುಣ
ಒಮ್ಮೆ ಪೆಟ್ಟು ಕೊಟ್ಟು ಕಿಲಿಸುವೆ ನೀ.. ಅಚಲನೆ
ಮತ್ತೆ ಪ್ರೀತಿಲಿ ಮಂದಹಾಸ ಬೀರುತ ಸುಮೇಧನೆ
ಇಂದೇಕೆ ವ್ಯಂಗ್ಯ ನಗುವು ಮಂಗಳಾರತಿ ಎತ್ತುವಾಗ? ಕೃಷ್ಣನೇ
ಆಲಯವ ಶುದ್ಧಗೊಳಿಸಿ ಭಕ್ತಿಭಾವದಿ ಭಜಿಸುವಾಗ! ಗೋಪಾಲಪ್ರಿಯನೆ
ಮನದ ಪೂಜೆಯ ಬಯಸಿಹೆ ಏನು ಹೇಳು ನೀನು? ಮಧುಸೂಧನ
ಗಂಟೆ ಜಾಗಟೆ ಮಂತ್ರ ತಂತ್ರವೆಲ್ಲ ನಿನಗೆ ಡೊಂಬರಾಟವೇನು? ಪದ್ಮನಯನ
ಗುಡಿಸಿಕಸವನು ತೊಳೆದುವಸ್ತ್ರ ಪಾತ್ರೆ ಥಳ ಥಳಿಸ ಬೇಕೆಂಬ ಜಡ್ದು ಇತ್ತು ರಮಣ
ವ್ಯರ್ಥ ಕಳೆದೆ ಕಾಲವೆಲ್ಲ ಈಗ…ಮನವನು
ತೊಳೆವ ಹೊತ್ತು! ರಾಧಾರಮಣ
ಹುಚ್ಚು ಹಿಡಿದಿದೆ ನಿನ್ನ ನೋಡುವ ಹೇ.. ಗೋವಿಂದ
ಸಹಿಸದ ಜನ ಆಡಿಕೊಂಡು ನೋಡಿ ನಗುವರು! ಹಾ.. ಮುಕುಂದ
ಏನು ಮಾಡುವುದೀಗ ಅಶಾಂತ ಗ್ರಹಣಕೆ ಕಮಲವದನ
ದಾರಿ ತೋರೋ ಓ…ಜ್ಞಾನೇಶ್ವರ ಈ ಮನಕೆ ಓ…ಯಶೋದಾನಂದನ.
ಉಮಾ ಭಾತಖಂಡೆ.