ದೇವರಿಗೊಂದು ಪತ್ರ!(28)

ದೇವರಿಗೊಂದು ಪತ್ರ!(28)

ನಾ ಸೌಖ್ಯ ಇಂದು,ನಿನ್ನಿಂದ
ಓ… ದೇವಾ…ಇಂದೇಕೋ ನನಗೆ
ನಿನ್ನ ಹೊಗಳಿ ಪಾಡುವಾ ಮನಸ್ಸಾಗಿದೆ
ಪದಗಳಿಲ್ಲ ಕ್ಷಮಿಸು ನೀ ಎನಗೆ
ಆದರೂ ನಾನಿಂದು ಪರಾಂಬರಿಸದೇ ಬಿಡಲಾರೆ
ಕೇಳು ಓ…ಮುಕುಂದ ನೀನಿಂದು
ಅಗಣಿತ ಗುಣಧಾಮ ಅಚಲಾಧೀಶ
ಮನಮೋಹಕ ವದನ ಜೈ ಜಗದೀಶ್
ನೀಳ ನಾಸಿಕ ವಾಸುಕಿತನಯ ಶ್ರೀಕೃಷ್ಣ
ಚಕ್ಷು ಚಲುವ ಅಂಬುಜ ಯದುನಂದನ
ಹೊಳೆವ ಲಲಾಟ ಓ …ಗೋವರ್ಧನ
ಎನಿತು ಬಣ್ಣಿಸಲಿ ಕರ್ಣಕುಂಡಲವ ಜಗತ್ಪಾಲ
ಥಳ ಥಳಿಸುವ ಕುಂತಲ ಓ..ಗಿರಿಧರ ಗೋಪಾಲ
ಹುಬ್ಬು ನಯ ಹಿಮದ ಪರ್ವತ ಯಶೋಸುತ
ಕೋಮಲ ಕಂಠಿ ಸುಕೋಮಲ ನುಡಿ ಮಧುಸೂದನ
ವಜ್ರ, ಹವಳದಂತೆ ಹೊಳೆವ ದಂತ ಕೇಶವ
ಶಂಕ ಚಕ್ರ ಗಾಧಾಧರ ಓ..ಪದ್ಮನಾಭ
ಓ… ನೀಲ ವರ್ಣ ಗಂಧ ಪುಸಿತ ರಾಧರಮಣ
ಪಿತಾಂಬರದಲಿ ಮೃದು ನಡಿಗೆಯ ಬೆಡಗು ವಿಠ್ಠಲ
ಹಸ್ತದೊಳು ಪಿಲ್ಲಂಗೊವಿಯ ಮಾಧವ
ನಡೆವ ಹಾದಿ ಬೀದಿಯಲಿ ನಿನ್ನ ಕಾಣುವ ತವಕ
ದಾರಿತೋರೋ ಗಗನ ಕುಸುಮ ಮುರುಳಿದರ ದೃಷ್ಟಿ ಕಾಂತಿಹೀನವಾಗುವ ಮುನ್ನ ಓ..ಎನ್ನ ಜನಕ.

ಇಂತಿ
ನಿನ್ನ, ಉಮಾ ಭಾತಖಂಡೆ.

Leave a Reply