ದೇವರಿಗೊಂದು ಪತ್ರ(17)

ದೇವರಿಗೊಂದು ಪತ್ರ(17)
ಹೇ… ನಾರಾಯಣ..ಹೇ… ವೆಂಕಟರಮಣ…
ಹೇ… ಗಿರಿಧರ….ಹೇ…. ಅನಂತಾದ್ರೀಶ….
ಇದೊಂದು ವಿಶೇಷ ಪತ್ರ ನಿನಗೆ ಕರುಣಾಮಯಿ..
ಬಿನ್ನಹವು ನಿನ್ನಲ್ಲಿ ನನ್ನದೊಂದು ನನಗಾಗಿ ಅಲ್ಲವಿದು
ಎನ್ನ ಪತ್ರಕೆ ಸವಾಲು ಒಡ್ಡಿಹರು ಕೆಲ ಮನುಜರಿಂದು
ಹೇಳುತಿಹರು ನಾನೇನೋ ನಿನ್ನಲ್ಲಿ ಶಿಫಾರಸ್ಸು ಮಾಡಬೇಕೆಂದು
ಕೇಳುತಿಹರು ಭೀಭತ್ಸ ರೋಗ ತಡೆದು ನೀ ರಕ್ಷಿಸ ಬೇಕೆಂದು
ಪಶು ಪಕ್ಷಿಗಳ ಬಂಧಿಸಿ ಪಂಜರದಲ್ಲಿಟ್ಟು ಮೋಜು ಮಾಡಿದ ಮನುಜನಿಂದು
ಜಡ್ದು ಬಂದು ಬಂಧು ಬಾಂಧವರ ಆತ್ಮೀಯರ ಕೈ ಕುಲುಕದೆ ಬಳಿಸಾಗಿ ಮಾತನ್ನು ಆಡದೆ
ತಾನೇ ಬಂಧಿಯಾಗಿ ಆಲಯದೊಲು ಒಂಟಿಯಾಗಿ ಕುತಿಹನಂತೆ
ನಿನಿಂದು ರೋಗ ನಿವಾರಣೆ ಮಾಡಿ ಸ್ವಾತಂತ್ರ್ಯ ಗೊಳಿಸ ಬೇಕಂತೆ!
ಗಿಡ ಮರ ಬಳ್ಳಿ ನಿರ್ದಯದಿ ಕಡಿದು ವರುಣನ ಕೋಪಕ್ಕೆ ತುತ್ತಾದೆವು
ಪ್ಲಾಸ್ಟಿಕ್ ತಿಪ್ಪೆ, ರಾಸಾಯನಿಕ ಬಳಸಿ ಭುವನೆ ನಡುಗಿ ಬಾಯಿಬಿಡುವಂತೆ ಮಾಡಿದೆವು
ತಾಪದ ಕೂಪಕ್ಕೆ ತಳ್ಳಿ ಪ್ರಕೃತಿಯ..ಸಮುದ್ರವೇ ಘರ್ಜಿಸಿ ಸುನಾಮಿ ಏಳುವಂತೆ ಮಾಡಿದೆವು
ಧರೆಗೇ ಜ್ವರ ಬಂದು ಅಗ್ನಿಯಾಗಿ ಕನನವೆ ತತ್ತರಿಸಿ ಕಾಡ್ಗಿಚ್ಚು ಭುಗಿಲೇಳುವಂತೆ ಮಾಡಿದೆವು
ಎಲ್ಲವೂ ಸಹಿಸಿದ ನೀನು ಮತ್ತೆ ಮತ್ತೆ ದಯೆ ತೋರಿ ರಕ್ಷಿಸಿದ ದಯಾನಿಧಿ
ಆದರೂ ನಿನ್ನ ಮರೆತ ಮನುಜ ಒಮ್ಮೆಯೂ ನಿನ್ನ ಶರಣು ಹೋಗಲಿಲ್ಲ
ಈಗ ತನ್ನಡಿಗೇ ಕೊಡಲಿ ಬಂದಾಗ ಬಾಗಿಲು ಜಡಿದು ಕೂತು ಕೃಷ್ಣ ಕೃಷ್ಣಾ.. ಎಂದು ಹಲುಬುತಿಹನು
ನೀನಿಲ್ಲದೆ ಸೃಷ್ಟಿಯೇ ಇಲ್ಲ, ಇದ ಮನುಜ ಬಲ್ಲ ಆದರೂ ಗರ್ವ ಮೆರೆದಿಹನು
ನಿನ್ನ ಕೆಲಸವೂ ಗರ್ವವಳಿಯುವುದೇ ಆಗಿದೆ ಕರುಣಾಕರ
ಕ್ಷಮಿಸಿ ಈ ಹೀನ ಮತಿಯ ಮನುಜನನು ಸಲಹು ತಂದೆ
ನನ್ನೇಲ್ಲಾ ಪತ್ರ ನೀ ಓದುತಿಹೆ ಎಂಬ ನಂಬಿಕೆ ಅವರಿಗೇ ಹೆಚ್ಚಿದೆ
ಕಾರಣ ಮನಿಸದೆ ಕೃಪೆ ತೋರಿ ರಕ್ಷಿಸು ಈ ಒಂದು ಬಾರಿ
ನೀ ನನ್ನ ಆರಿಸಿದಂತೆ ಈ ಜನರು ನನ್ನ ಕೇಳಿಹರು ನಿನ್ನ ದೇವರಿಗೆ ಪತ್ರ ಬರೆ ಎಂದು
ಇಂದೇ ಬಂದು ಬಿಡಲಿ ನಿನ್ನ ಔಷಧ ಒಂದು ಜಗವೇ ನಂಬಲಿ ನೀ ಇರುವೆ ಎಂದು

ನಿನ್ನ
ಉಮಾ ಭಾತಖಂಡೆ.

Leave a Reply