ದೀಪ
ಕತ್ತಲೆಯ ಬೆತ್ತಲಾಗಿಸಿ
ಕಿರುನಗೆಯ ಸೂಸಿ
ತನ್ನಿರುವಿಕೆಯಾ ಮೆರೆಯುತಿದೆ
ಹಣತೆಯ ದೀಪ
ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ
ಲಾಸ್ಯವಾಡುತಿದೆ ಅಲ್ಲಿ
ತಾನೇ ಕೊರಗೀ ಕರಗೀ
ಬೆಳಕ ನೀಡಿ ಸಂಭ್ರಮಿಸುತಿದೆ
ಮೇಣದಾ ದೀಪ
ನಕ್ಷತ್ರ ಪುಂಜಗಳೂ ತಮ್ಮ ಪರಿಧಿಯಲಿ
ಮಿಣುಮಿಣುಕ ಬೆಳಕ ಹರಡಿ
ಪಯಣಿಗನಿಗೆ ದಾರಿದೀಪವಾಗಿವೆ
ಚಂದ್ರ ಚಕೋರನೂ ಭಾವನೆಗಳ ಏರಿಳಿತಕ್ಕೊಳಗಾಗಿ
ನಾಡಿನ ಕಾಡಿನ ತುಂಬೆಲ್ಲ
ಬೆಳದಿಂಗಳ ಬೆಳಕೊಮ್ಮೆ
ಕತ್ತಲೆಯ ಮುಸುಕೊಮ್ಮೆ
ಹೊದ್ದು ಮೆರೆಯುತಿಹ
ಜಗದಕಲಕೂ ತನ್ನ ಪ್ರತಿಭೆ ಮೂಡಿಸಿ
ಜೀವ ಜೀವಕೂ ಆಧಾರವಾಗಿಹ ರವಿ
ತಾ ಆಕಾಶದಿ ಮೆರೆಯುತಿಹ
ತನ್ನ ಬಾಳ ಹಾದಿಯಲಿ
ಯಾರಿಗೂ ಯಾವುದೇ
ಬೆಳಕ ನೀಡದೇ
ತನ್ನ ಸ್ವಾರ್ಥತೆಯ
ಮುಸುಕಿನಲಿ
ಗುದ್ದಾಡುತಿಹ ಮಾನವ
ಎಚ್ಚೆತ್ತುಕೋ ಪರರಿಗೆ
ಬೆಳಕಾಗಿ ನಡೆವ ಮರ್ಮ
ಇದುವೇ ಧರ್ಮ ನೀನರಿತುಕೋ