Child is the father of man
ಹೀಗೋಂದು ಊರು ಅಲ್ಲಿಯ ಮಕ್ಕಳಿಗೆ ಇಡೀ ಊರೇ ಆಟದ ಬೈಲು.. ವೇಳೆ ಸಿಕ್ಕಾಗಲೆಲ್ಲ ಗುಂಪು ಗುಂಪಾಗಿ ಆಡಿ ಆನಂದಿಸುವದು ಅವರ ದಿನಚರಿ…
ಅಂಥದೇ ಒಂದು ಸಂಜೆ ಮಕ್ಕಳೆಲ್ಲ ಬಯಲಿನಲ್ಲಿ ಸೇರಿ ಆಡುವ ಸಮಯ ತಾವೇ ತಾವಾಗಿ ತಮ್ಮದೇ ಜಗತ್ತಿನ ಆಟದಲ್ಲಿ ಮಗ್ನರಾದ ವೇಳೆ… ಚಂದದ, ಬಣ್ಣಬಣ್ಣದ, ಹಕ್ಕಿಯೊಂದು ತನ್ನ ವಿಶಾಲ ರೆಕ್ಕೆಗಳನ್ನು ಆದಷ್ಟೂ ಅಗಲವಾಗಿ ಚಾಚಿ ಹಾರಾಡುತ್ತಾ ಬಾನಿನಲ್ಲಿ ಕಾಣಿಸಿಕೊಂಡಿತು. ಅದರ ರೂಪ, ಹಾರಾಟ, ಎಷ್ಟುಮೋಹಕವಾಗಿತ್ತೆಂದರೆ ಹುಡುಗರೆಲ್ಲ ಕ್ಷಣಾರ್ಧದಲ್ಲಿ ಆಟ ಬಿಟ್ಟು ಚಪ್ಪಾಳೆ ತಟ್ಟುತ್ತ ಕೂಗುತ್ತಾ ಅದರ ಹಿಂದೆ ಹಿಂದೆಯೇ ತಾವೂ ಓಡತೊಡಗಿದರು. ಒಬ್ಬ ಅದರ ಚಂದ ಹೊಗಳುತ್ತಿದ್ದರೆ ಇನ್ನೊಬ್ಬ ಅದರ ಹಾರಾಟವನ್ನು ಮತ್ತೊಬ್ಬ ಅದು ತನ್ನದಾಗಬೇಕೆಂಬ ಬಯಕೆಯನ್ನು ಮಕ್ಕಳ ಹಾರಾಟ, ಕೂಗಾಟ ದೊಡ್ಡವರ ಗಮನವನ್ನು ಸೆಳೆದು ಅವರೂ ಬಂದರು.
ಈಗ ಲೆಕ್ಕಾಚಾರದ ಸಮಯ. ಲಾಭ-ನಷ್ಟದ ಮೇಲೆ ಕಣ್ಣು… ಒಬ್ಬ ಮಹಾಶಯನಿಗೆ ಅದರ ಬಣ್ಣಬಣ್ಣದ ರೆಕ್ಕೆಗಳಿಂದ ಟೊಪ್ಪಿಗೆ ಅಲಂಕರಿಸಿ ಕೊಳ್ಳುವ ಬಯಕೆ. ಎರಡನೇಯವನಿಗೆ ಅದರ ತಾಜಾ ಮಾಂಸ ಮೆಲ್ಲುವ ಮನಸು.
ಇನ್ನೊಬ್ಬನಂತೂ ಇದಾವುದಕ್ಕೂ ಕಾಯಲಾರ. ಕ್ಷಣಹೊತ್ತಿನಲ್ಲಿ ಬಿಲ್ಲು ಬಾಣ ತಂದು ಹಕ್ಕಿಯ ಎದೆಗೇ ಗುರಿಯಿಟ್ಟು ಹೊಡೆದ್ದೂ ಆಯ್ತು… ಅರೆನಿಮಿಷದಲ್ಲಿ ಒದ್ದಾಡುತ್ತ ಆ ಹಕ್ಕಿ ಧರೆಗುರುಳಿತು. ಎಲ್ಲರೂ ಅತೀವ ನಿರೀಕ್ಷೆಯಿಂದ ಅದರ ಬಳಿ ಓಡಿದಾಗ ಕಂಡದ್ದು ಹಕ್ಕಿ ದಷ್ಟ ಪುಷ್ಟವಾಗಿರಲಿಲ್ಲ. ದೊಡ್ಡ ದೊಡ್ಡ ರೆಕ್ಕೆಗಳಿಂದಾಗಿ ಹಾಗೆ ಕಾಣುತ್ತಿತ್ತು. ಗರಿಗಳೂ ಬಳಸದಷ್ಟು ದೊಡ್ಡವಾಗಿದ್ದವು. ದೇಹದಲ್ಲಿ ಇವರಂದು ಕೊಂಡಂತೆ ಮಾಂಸವೂ ಇರಲಿಲ್ಲ. ಎಲ್ಲರಿಗೂ ತೀವೃ ನಿರಾಶೆ… ತಮ್ಮ ಮೂರ್ಖತನಕ್ಕೆ ತಾವೇ ನಕ್ಕು ಹಕ್ಕಿಯನ್ನು ಬದಿಯ ನದಿಗೆಸೆದು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಿದರು. ಇದಕ್ಕೆ ಪ್ರತ್ಯಕ್ಷದರ್ಶಿಗಳಾದ ಮಕ್ಕಳು ಮಾತ್ರ ಒಳಗೊಳಗೇ ರೋಧಿಸಿದ್ದು ಯಾರಿಗೂ ಗೊತ್ತಾಗಲೇ ಇಲ್ಲ. ಇದು THE BIRD OF PARADISE ಇಂಗ್ಲೀಷ ಕವಿತೆಯ ಸಾರ ರೂಪ.
ಇದೇ ಮಕ್ಕಳು ಹಾಗೂ ಬೆಳೆದವರ ದೃಷ್ಟಿಕೋನಗಳ ಎದ್ದು ಕಾಣುವ ವ್ಯತ್ಯಾಸ ಮುಗ್ಧ ಮನಸ್ಸುಗಳಿಗೆ ಆನಂದವೇ ಲೆಕ್ಕ. ಲಾಭ ನಷ್ಟಗಳ ಅರಿವು ಅವಕ್ಕಿಲ್ಲ ಶುದ್ಧ ಮನೋರಂಜನೆ ಅವರ ಗುರಿ. ಮನಸ್ಸು ಸ್ವಚ್ಛ ಕನ್ನಡಿ. ಸ್ವಂತಕ್ಕೂ ಇತರರಿಗೂ ಮುದಕೊಡುವದಕ್ಕೆ ಮಾದರಿ.
ದೊಡ್ಡವರದು ಯಾವಾಗಲೂ ದೊಡ್ಡದೇ plan… ಎಲ್ಲವೂ ಸ್ವಾರ್ಥಮಯ. ಅವರ ದುಃಖಕ್ಕೆ ಕಾರಣ ಅವರ ಕಷ್ಟಗಳಲ್ಲ. ಇತರರ ಸುಖಗಳು. ಇಂಥವರು ಸ್ವಂತಕ್ಕೂ ಆರಾಮವಾಗಿರಲಾರರು. ಇತರರನ್ನೂ ಹಾಗಿರಲು ಬಿಡಲಾರರು. ಧಾರವಾಡದಲ್ಲಿ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದಾಗ IN LONDON TOWN ಹೆಸರಿನ ಈ ಕವಿತೆಯನ್ನು ನಾನು ಅನುವಾದಿಸಿ, ಇಂದು ಹಾಸ ಜೇವೂರವರು ನಿರ್ದೆಶಿಸಿ ಆಕಾಶವಾಣಿ ವಾರ್ಷಿಕ ಕಾರ್ಯಕ್ರಮಗಳಲ್ಲಿ ರಂಗದಮೇಲೆ ತಂದಿದ್ದೆವು. ಎಲ್ಲರಿಗೂ ತುಂಬಾನೇ ಮೆಚ್ಚಿಗೆಯಾಗಿತ್ತು.
ಈಗ ಅವೆಲ್ಲ ಕೇವಲ ಸುಂದರ ಕನಸುಗಳು ಮೆಲಕು ಹಾಕಲು…..