-
-40%
ಜೀವ ನದಿಗಳ ಸಾವಿನ ಕಥನ
0ನದಿ ಸಂರಕ್ಷಣೆಗೆ ಶ್ರಮಿಸುತ್ತಿರುವ ಜಲಮಿತ್ರರಿಗೆ ರಾಜ್ಯದ ನದಿ ಪರಿಸರ ಪರಿಸ್ಥಿತಿ ಕುರಿತ ಪುಸ್ತಕ. ನದಿ ನೋಡಲು ಇರುವ ಅವಕಾಶಗಳನ್ನು ಇಲ್ಲಿ ವಿವಿಧ ಮುಖಗಳಲ್ಲಿ ಗಮನಿಸಬಹುದು ಜೀವ ನದಿಗಳನ್ನು ಮರೆತು ಹೆದ್ದಾರಿ ವೇಗದ ಅವಸರದಲ್ಲಿ ಓಡುವವರನ್ನು ಸ್ವಲ್ಪ ನಿಲ್ಲಿಸಿ ನದಿಯ ಮಾತನ್ನು ಎದೆಗೆ ತಲುಪಿಸುವ ಪುಟ್ಟ ಪ್ರಯತ್ನ ಶಿವಾನಂದ ಕಳವೆ ಅವರು ಮಾಡಿದ್ದಾರೆ.
-
-20%
ವಿಜಯೀಭವ
0ವ್ಯಕ್ತಿತ್ವ ವಿಕಸನದ ಲೇಖನ ಹಾಗು ಮಕ್ಕಳ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ. ಮಗುವಿನ ಕಲಿಕಾಪ್ರಕ್ರಿಯೆಯ ಹಂತಗಳು ಹೇಗಿರುತ್ತವೆ? ಕಲಿಕೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು? ಎಂಬ ಅತ್ಯಂತ ಸಂಕೀರ್ಣ ವಿಷಯವನ್ನು ಸರಳವಾಗಿ ಹೇಳಿದ್ದು ಪುಸ್ತಕದ ಗರಿಮೆ.
-
-40%
ಮಧ್ಯಘಟ್ಟ
050-80 ವರ್ಷಗಳ ಹಿಂದಿನ ಘಟನೆಗಳು, ಸ್ವಾರಸ್ಯಕರ ಪ್ರಸಂಗಗಳಿಂದ ‘ಮಧ್ಯಘಟ್ಟ’ ಕಾಡಿನೂರಿನ ಕಾದಂಬರಿ ರೂಪುಗೊಂಡಿದೆ. ಮಧ್ಯಘಟ್ಟ ಕಾಲು ಶತಮಾನಗಳಿಂದ ಒಡನಾಡಿದ ಹಳ್ಳಿ ಬದುಕಿನ ಕುರಿತ ಕಾದಂಬರಿ. ಕಾಡು, ಸಸ್ಯ, ನದಿ ನೀರಿನಲ್ಲಿ ದಾರಿಯೇ ಇಲ್ಲದ ಕಾಲದ ಕಾಡು ಬದುಕನ್ನು ಕಣ್ಣೆದುರು ಹಿಡಿಯುವ ಮಹತ್ವದ ಕಾರ್ಯ ಮಾಡಿದ್ದಾರೆ. ಸಾಮಾಜಿಕ ಇತಿಹಾಸದ ಅದ್ಭುತ ಚಿತ್ರಣ ಇಲ್ಲಿದೆ.
-
-10%
ಗಂಧದ ಮಾಲೆ
0ದೆವ್ವದ ಸರ್ಕಾರಗಳ ಕೈಯಲ್ಲಿ ನರಕಯಾತನೆ ಅನುಭವಿಸಿದವರ ದಾರುಣ ಕಥೆಗಳನ್ನು, ಜಗತ್ತಿನ ಅತ್ಯಂತ ಬುದ್ಧಿವಂತರೆಂದು ಕರೆದುಕೊಳ್ಳುವವರ ಕರುಣಾಜನಕ ಕಥೆಗಳನ್ನು ಪುಸ್ತಕದಲ್ಲಿ ಅಡಕಮಾಡಲಾಗಿದೆ. ಜಗತ್ತಿನಲ್ಲಿ ಪ್ರತಿಯೊಬ್ಬರೂ ಮಹಾನ್ ಚೇತನರಾಗಲು ಬೇಕಾದ ಚೈತನ್ಯವಿದೆ. ಆದರೆ, ಕೇವಲ ಬೆರಳೆಣಿಕೆಯಷ್ಟು ಮಹಾತ್ಮರು ಮಾತ್ರ ಬರುತ್ತಿದ್ದಾರೆ! ಯಾಕಿಲ್ಲ? ಈ ಸಣ್ಣ ಕಥೆಗಳಲ್ಲಿ ಓದುಗರು ಉತ್ತರವನ್ನು ಕಂಡುಕೊಳ್ಳಬಹುದು.
-
-10%
ವೃಂದಾವನ
0ವಿಶ್ವವಾಣಿ ಪತ್ರಿಕೆಯ ‘ಚಕ್ರವ್ಯೂಹ’ ಅಂಕಣದಲ್ಲಿ ಬರೆದ ಅಸಂಖ್ಯಾತ ಲೇಖನಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅನೇಕ ಸಾಧಕರ ಸಾಧನೆಯ ಸಂಕಲನ ‘ಬೃಂದಾವನ’. ಇದು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆಯ ಕ್ರೋಢೀಕರಣ. “ವೃದವನ” ಸತ್ತವರ ಕಥೆಯಲ್ಲ, ಯಾರ ಹೆಸರುಗಳು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಕೆತ್ತಲ್ಪಟ್ಟಿವೆಯೋ ಅವರ ಕಥೆಗಳಲ್ಲ.
-
-10%
ವಿಹಿತವಿದ್ಯಾ
0ವಿಹಿತವಿದ್ಯಾ ಪುಸ್ತಕವನ್ನು ಹಿರಿಯ ಆರ್ ಎಸ್ ಎಸ್ ಪ್ರಾಚಾರಕರಾದ ಶ್ರೀ ನಾರಾಯಣ ಶೇವಿರೆ ಅವರು ಬರೆದ ಪುಸ್ತಕ. ಪುಸ್ತಕವು ಶಿಕ್ಷಣ ವ್ಯವಸ್ಥೆಯ ವಿವಿಧ ಆಯಾಮಗಳ ಬಗ್ಗೆ ಇದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆ ಎಲ್ಲಿದೆ, ನಮ್ಮ ಮಕ್ಕಳು ಈ ಸಮಾಜದಲ್ಲಿ ಎಲ್ಲಿ ನಿಂತಿದ್ದಾರೆ ಎಂಬ ಸ್ಪಷ್ಟ ಚಿತ್ರಣ ವನ್ನು ಇದು ನೀಡುತ್ತದೆ.