• -25%

    ಕೊರವಂಜಿ-ನವ್ಹೆಂಬರ್ ೧೯೪೨

    0

    ಕೊರವಂಜಿ : ನವ್ಹೆಂಬರ್ 1942

    ತಿಳಿ ನಗೆಯ ಮಾಸಪತ್ರಿಕೆ

    ಕೊರವಂಜಿ ನಗೆ ಮಾಸ ಪತ್ರಿಕೆ ೧೯೪೩ ಎಪ್ರಿಲ್ ನಿಂದ ೧೯೬೭ ರ ಮೇ ವರೆಗೆ ನಿರಂತರವಾಗಿ ತಿಳಿಹಾಸ್ಯದ ಲೇಖನಗಳು, ಹರಟೆಗಳು, ಅಣಕವಾಡುಗಳ ಮೂಲಕ ಕನ್ನಡ ಓದುಗರಿಗೆ ವಿಶೇಷ ಹಾಸ್ಯದ ರಸಾಯನವನ್ನು ನೀಡಿದ ಕನ್ನಡ ಸಾಹಿತ್ಯಿಕ ಕ್ಷೇತ್ರದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದ ಮಾಸಪತ್ರಿಕೆಯಾಗಿತ್ತು. ನಾಡಿನ ಬಹುತೇಕ ಹಿರಿಯ ಹಾಸ್ಯ ಲೇಖಕರ ಲೇಖನಗಳು ಕೊರವಂಜಿಯಲ್ಲಿವೆ. ೨೫ ವರ್ಷ ನಿರಂತರವಾಗಿ ಪ್ರಕಟವಾದ ಎಲ್ಲ ಸಂಚಿಕೆಗಳು ಇಲ್ಲಿ ಲಭ್ಯವಿವೆ.

    ಈ ಸಂಚಿಕೆಯಲ್ಲಿನ ಬರಹಗಳು ಈ ಕೆಳಗಿನಂತಿವೆ –

    “ಕುಹಕಿಡಿಗಳು”
    ಹುರಿಗಾಳು
    ಕೊಟ್ಟಿಗೆ ಸುಟ್ಟವರು ಯಾರು?   – ಮೂರ್ತಿ.
    ಕೊರವಂಜಿಯೇರು   – ಶ್ರೀ ಕೃಷ್ಣತನಯ.
    ಅಮ್ಮನೋರ ಅರ್ಚಕ
    ಒಮ್ಮೆ
    “ಷಹರಿನಲ್ಲಿ ಜಗ್ಗೋಜಿ”  – ರಾ.ಶಿ.
    ಸಂಪಾದಕರ ಆರಾಮ ನಿಮಿಷಗಳು
    “ವೈದ್ಯನ ಸರ್ಟಿಫಿಕೇಟ್”
    ಅಚ್ಚಪ್ಪನ ಚೈನಾ   – ನಾ.ಕ.
    ಚಿತ್ರಕಲ್ದುರ್ಗ
    ಪರೀಕ್ಷೆ   – ಎಸ್.ವೀ.ವೀ.ಕೃತಂ
    “ನಾಯಿಗಳಿವೆ  – ಎಚ್ಚರಿಕೆ”
    ನಾಟಕ ಕರ್ತ   – ನಾ.ಕ.
    ಸಕಲಸ್ತಾನ್
    ತೃಣಾನಂದ
    ಪೂರ್ವದಲ್ಲಿ ಪೇಪರ್ ಇದ್ದಿದ್ದರೆ
    ಬೆಲದ್ಕಾಫಿ   – ನಾ.ಪಂ.
    ಆದರದ ಆಹ್ವಾನ
    ರಸಬಿಂದು
    …….. ಬಂದೇ – ಎನ್.ಎಸ್.

    Original price was: ₹20.00.Current price is: ₹15.00.
    Add to cart
  • -40%

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು

    0

    ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:
    “ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.

    Original price was: ₹120.00.Current price is: ₹72.00.
    Add to cart
  • -40%

    ಸೋಮಾರಿ ಓಲ್ಯಾ

    0

    ಸೋಮಾರಿ ಓಲ್ಯಾ
    (ಮಕ್ಕಳ ನಾಟಕ)
    ಸುಮಾರು ಏಳೆಂಟು ವರ್ಷದೊಳಗಿನ ಮಕ್ಕಳಿಗಾಗಿ ಹತ್ತುವರ್ಷಗಳ ಹಿಂದೆ ಬರೆದ ನಾಟಕವಿದು. The Lost Ring ಎಂಬ ಪುಟ್ಟ ಪದ್ಯದಿಂದ ಪ್ರೇರಿತವಾದದ್ದು. ರಚನೆಯಲ್ಲಿ ಕೆಲ ಜನಪ್ರಿಯ ಮಕ್ಕಳ ಕಥೆಗಳ ಬಿಡಿ ನೇಸಲುಗಳೂ ಸೇರಿವೆ.

    Original price was: ₹25.00.Current price is: ₹15.00.
    Add to cart
  • -40%

    ಸುಂದರ ಭೂಮಿ

    0

    ಸುಂದರ ಭೂಮಿ
    (ಕವನ ಸಂಕಲನ)
    ಈ ಕವನಗಳಲ್ಲಿ ತಿಳಿಹಾಸ್ಯವಿದೆ, ಆಳವಾದ ಚಿಂತನ ಮಂಥನಗಳಿವೆ, ಎದೆ ತಲುಪಿ ಮನವರಳಿಸುವ ಸೂಕ್ಷ್ಮ ಸಂವೇದನಾ ಭಾವನೆಗಳಿವೆ, ಸಮಾಜ, ದೇಶದ ಭವಿಷ್ಯದ ಕುರಿತ ದುಗುಡ ಇದೆ, ಸ್ವಾರ್ಥಿಗಳ, ಆಷಾಢಭೂತಿಗಳ ವಿಡಂಬನೆಯಿದೆ. ಕೆಲವೇ ಸಾಲುಗಳಲ್ಲಿ ಓದುಗನನ್ನು ಸುದೀರ್ಘ ಚಿಂತನೆಗೆ ಹಚ್ಚಿ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಗುಣ ಈ ಕವನಗಳಲ್ಲಿವೆ.

    Original price was: ₹60.00.Current price is: ₹36.00.
    Add to cart
  • -40%

    ಮುಖಾಂತರ

    0

    ಮುಖಾಂತರ
    ‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು  ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
    ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ.

    Original price was: ₹550.00.Current price is: ₹330.00.
    Add to cart
  • -40%

    ಸಂಗೀತ ಸಮ್ಮೋಹಿನಿ

    0

    ಸಂಗೀತ ಸಮ್ಮೋಹಿನಿ :
    (ವೈಜ್ಞಾನಿಕ ಕಾದಂಬರಿ)

    ೨೦೨೦ರ ಸುಮಾರಿಗೆ ಕಂಪ್ಯೂಟರ್ ವಿಜ್ಞಾನ ಸ್ಥಿತ್ಯಂತರ ಪಡೆಯುತ್ತದೆ. ದ್ವಿಮಾನ (ಬೈನರಿ) ಬದಲು ತ್ರಿಮಾನ ಪದ್ಧತಿಯನ್ನು ಅಳವಡಿಸಿದಾಗ ಕಂಪ್ಯೂಟರುಗಳು ಸೃಜನಾತ್ಮಕತೆಯನ್ನು ಮೈಗೂಡಿಸಿಕೊಳ್ಳುತ್ತವೆ . ಮನುಷ್ಯರೊಂದಿಗೆ ಪೈಪೋಟಿಗಿಳಿಯುತ್ತವೆ. ಸಂಗೀತ ಕ್ಷೇತ್ರವು ಇದಕ್ಕೆ ಹೊರತಾಗುವುದಿಲ್ಲ. ಒಂದು ಡೂರೋ ‘ಸಮ್ಮೋಹಿನಿ‘ ರಾಗವನ್ನು ಸೃಷ್ಟಿಸಿ ಪ್ರಸ್ತುತಪಡಿಸುತ್ತದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಕಂಪನಗಳನ್ನೆಬ್ಬಿಸುವ ಕಾದಂಬರಿ.

    Original price was: ₹80.00.Current price is: ₹48.00.
    Add to cart
  • -40%

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ

    0

    ಗಿರೀಶ ಕಾರ್ನಾಡ ಹಾಗೂ ಭಾರತೀಯ ರಂಗಭೂಮಿ :
    (ನಾಟಕಗಳ ವಿಮಶಾತ್ಮಕ ಅಧ್ಯಯನ)
    ಕನ್ನಡದ ಹಿರಿಯ ಸ್ವೋಪಜ್ಞ ವಿಮರ್ಶಕರಲ್ಲಿ ಒಬ್ಬರಾದ ಡಾ.ಜಿ.ಎಸ್.ಅಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ ‘ಮಾ ನಿಷಾದ’ ವೂ ಸೇರಿದಂತೆ ಎಲ್ಲ ಹನ್ನೆರೆಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿಯನ್ನು ರಚಿಸಿದ್ದಾರೆ.
    ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪಾಶ್ಚಾತ್ಯ ಹಾಗು ಪೌರ್ವಾತ್ಯ ರಂಗಭೂಮಿಗಳ ನಾಟಕಕಾರ, ಸಮಕಾಲೀನ ಸಂದರ್ಭದ ಪ್ರೇರಣೆ ಪ್ರಭಾವಗಳನ್ನು ಈ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ.
    ಇದು ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಸೂಚಿಯಾಗಬಲ್ಲ ಅಪರೂಪದ ವಿಮರ್ಶಾತ್ಮಕ ಕೃತಿಯಾಗಿದೆ.

    Original price was: ₹150.00.Current price is: ₹90.00.
    Add to cart
  • -40%

    ಯು. ಆರ್. ಅನಂತಮೂರ್ತಿ

    0

    ಯು. ಆರ್. ಅನಂತಮೂರ್ತಿ 

    ವೈಚಾರಿಕತೆ ಹಾಗೂ ಸಾಹಿತ್ಯ  :
    ಅನಂತಮೂರ್ತಿಯವರು ನನ್ನ ಸಮಕಾಲೀನರಲ್ಲೇ ಅತ್ಯಂತ ಗಂಭೀರ ಮನೋಧರ್ಮದ ಲೇಖಕರು. ಬದುಕಿನ ಬಗ್ಗೆ, ಸಮಾಜದ ಬಗ್ಗೆ, ಮಾನವನ ದೈನಿಕ ಜೀವನದ ಬಗ್ಗೆ. ಅವನ ಭವಿತವ್ಯದ ಬಗ್ಗೆ ತಾವು ಅಭ್ಯಾಸ ಮಾಡಿದ್ದನ್ನು, ಗಾಢವಾಗಿ ಚಿಂತಿಸಿದ್ದನ್ನು ನಾಟ್ಯೀಕರಿಸುತ್ತ ವಿಚಾರವನ್ನೇ ಒಂದು ಜೀವಂತ ಅನುಭವದ ಪ್ರಭಾವಬೀರುವ ಸ್ಥಿತಿಗೆ ಒಯ್ದು ನಮಗೆ ಮುಟ್ಟಿಸುವ ಕಳಕಳಿಯ ಪ್ರಯತ್ನ ಇವರ ಸಾಹಿತ್ಯದ ಪ್ರಮುಖ ಲಕ್ಷ್ಯಗಳಲ್ಲೊಂದಾಗಿದೆ. ನಮ್ಮ ಪ್ರಜ್ಞೆಯನ್ನು ಹಿಗ್ಗಿಸುವಲ್ಲಿ ಸಾಹಿತ್ಯಕ್ಕಿರುವ ಮಹತ್ವದ ಪಾತ್ರವನ್ನು ಕುರಿತು ಇವರಿಗಿರುವ ಗಾಢವಾದ ಶ್ರದ್ಧೆಯೇ ಇವರು ಬರೆದ ಪ್ರತಿಯೊಂದು ನಮ್ಮ ಪ್ರೀತಿಗೆ, ಗೌರವಕ್ಕೆ ಪಾತ್ರವಾಗುವಂತೆ ಮಾಡುತ್ತದೆ.

    Original price was: ₹150.00.Current price is: ₹90.00.
    Add to cart
  • -40%

    ಭಾಷೆ ಮತ್ತು ಸಂಸ್ಕೃತಿ

    0

    ಭಾಷೆ ಮತ್ತು ಸಂಸ್ಕೃತಿ
    ಇದು ಕುರ್ತಕೋಟಿಯವರ ಅಂಕಣ ಲೇಖನ ಕೃತಿ . ಇದರಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಲೇಖನಗಳಿವೆ. ಬಿಡಿಬಿಡಿಯಾಗಿದ್ದ ಈ ಲೇಖನಗಳನ್ನು ಒಂದು ಸ್ವರೂಪದಲ್ಲಿ ಜೋಡಿಸಿ ಇಲ್ಲಿ ನೀಡಲಾಗಿದೆ. ವಿಜಯ ಕರ್ನಾಟಕ ಪತ್ರಿಕೆಯ ‘ಸಾಪ್ತಾಹಿಕ ವಿಜಯಕ್ಕೆ ಬರೆದ, ‘ಒಳನೋಟಗಳು’. ಎಂಬ ಹೆಸರಿನಲ್ಲಿ ಬರುತ್ತಿದ್ದ ಅಂಕಣಗಳೊಂದಿಗೆ ಇನ್ನೂ ಕೆಲವು ಲೇಖನಗಳನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ.

    Original price was: ₹150.00.Current price is: ₹90.00.
    Add to cart
  • -40%

    ತಂತ್ರಯೋನಿ

    0

    ತಂತ್ರಯೋನಿ
    ‘ತಂತ್ರಯೋನಿ’  ಗ್ರಂಥ  ತಂತ್ರದ  ಶಾಸ್ತ್ರವನ್ನು  ಕುರಿತು  ವಿವರವಾಗಿ  ಹೇಳುತ್ತದೆ.  ತಂತ್ರ  ಒಂದು  ರಹಸ್ಯವಿದ್ಯೆ.  ಈ  ವಿದ್ಯೆಯನ್ನು  ಗುರುವಿನಿಂದ  ಪಡೆಯಲು  ಶಿಷ್ಯ  ಅಧಿಕಾರಿಯಾಗಿರಬೇಕು.  ‘ಅಶಿಷ್ಯಾಯ  ನ  ದೇಯಂ’  ಎನ್ನುವದು  ಇಂಥ  ವಿದ್ಯೆಗಳಿಗೆ  ಒಂದು  ನಿಷೇಧವಾಕ್ಯ. ದೀಕ್ಷೆ,  ಧ್ಯಾನ,  ಜಪ,  ಮಂತ್ರ  ಮೊದಲಾದವುಗಳು  ಕೂಡ  ತಂತ್ರವಿದ್ಯೆಯ  ಅಂಗಗಳಾಗಿರುವುದರಿಂದ  ಅವುಗಳನ್ನು  ಕುರಿತು  ಸಾಕಷ್ಟು  ವಿವರಗಳನ್ನು  ಈ  ಗ್ರಂಥದಲ್ಲಿ  ನೀಡಲಾಗಿದೆ.

    Original price was: ₹375.00.Current price is: ₹225.00.
    Add to cart
  • -40%

    ಸೋಲು ಗೆದ್ದವನದ್ದು!

    0

    ಸೋಲು ಗೆದ್ದವನದ್ದು!
    ನಕ್ಸಲ್ ಹಾಗು ಪೊಲೀಸರ ನಡುವಿನ ಸಂಘರ್ಷದ ಕಥಾಹಂದರ ಒಳಗೊಂಡಿದೆ.‘ಸೋಲು ಗೆದ್ದವನದ್ದು!’ ಕಾದಂಬರಿ ನಕ್ಸಲರು ಮತ್ತು ಪೊಲೀಸರ ನಡುವಿನ ‘ಮಾಡು ಇಲ್ಲವೇ ಮಡಿ’ ಸಮರಕ್ಕೆ ಸಂಬಂಧಿಸಿದ ಕಥಾನಕವೆಂಬಂತೆ ಮೇಲ್ನೋಟಕ್ಕೆ ತೋರಿದರೂ ಅದರ ಆಂತರ್ಯದಲ್ಲಿ ಮನುಷ್ಯನೊಳಗಿನ ಜೀವನ ಪ್ರೀತಿ, ನೋವು, ನಲಿವು, ಆಸೆ, ಹತಾಶೆ, ಮುಗ್ಧತೆ, ಕ್ರೌರ್ಯ ಎಲ್ಲವೂ ಹುದುಗಿದೆ.
    ಇಲ್ಲಿನ ಕಥಾಹಂದರ ಕಾಲ್ಪನಿಕವೇ ಆಗಿದ್ದರೂ, ಅಲ್ಲಲ್ಲಿ ಎದುರಾಗುವ ಸನ್ನಿವೇಶಗಳು ಕಲ್ಪನೆಯ ಪರದೆ ಹೊದ್ದುಕೊಂಡಿರುವ ನೈಜ ಘಟನೆಗಳೆಂಬಂತೆ ಭಾಸವಾಗುತ್ತವೆ.

    Original price was: ₹150.00.Current price is: ₹90.00.
    Add to cart
  • -40%

    ಮೊದಲ ತೊದಲು

    0

    ಮೊದಲ ತೊದಲು
    ಈ ಕೃತಿಯನ್ನು ಶರತ್ ಎಚ್.ಕೆ. ಅವರು ಬರೆದಿದ್ದಾರೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

    Original price was: ₹80.00.Current price is: ₹48.00.
    Add to cart