-
-40%
ಷಾಪುರದ ಸೀನಿಂಗಿ-ಸತ್ಯ
0ಷಾಪುರದ ಸೀನಿಂಗಿ-ಸತ್ಯ
ಇದು ೧೯೯೨ರಲ್ಲಿ ಆರಂಭಿಸಿ ೧೯೯೫ರಲ್ಲಿ ಬರವಣಿಗೆ ಮುಗಿಸಿದ ನಾಟಕ. ಈ ನಾಟಕ ಬರೆಯಲು ಕಾರಣರಾದವರು ಬಿ. ಜಯಶ್ರೀ. ಅವರ ತಂಡಕ್ಕಾಗಿಯೇ ನಾಟಕ ಕಟ್ಟಲು ಹೊರಟವನಿಗೆ ಹಿರಿಯರು, ಮೇಷ್ಟರು ಆದ ಕ.ವೆಂ. ರಾಜಗೋಪಾಲ ಅವರು ಜನಪದ ಗೀತೆಯೊಂದನ್ನು ಕೇಳಿಸಿ ವಸ್ತುವನ್ನು ಒದಗಿಸಿದರು. ಅಲ್ಲಿಂದಾಚೆಗೆ ಅನೇಕ ಊರುಗಳನ್ನು ತಿರುಗಿ, ಅನೇಕ ಪವಾಡ ಸದೃಶ ಸತ್ಯಗಳನ್ನು ಸ್ವತಃ ಕಂಡೆ. ಜೀವಂತ ದೇವರುಗಳ ದರುಶನ ಪಡೆದೆ. ಈ ಪಯಣದಲ್ಲಿ ಜೊತೆಯಾದ ಗುಲ್ಬರ್ಗದ ವಿಜಯಹಾಗರಗುಂಡಿಗಿಯ ಸಹವಾಸವು ನಾನು ಕಂದ್ದನ್ನ ವಿಭಿನ್ನವಾಗಿ ಅರ್ಥೈಸಲು ಸಹಾಯಮಾಡಿತು. -
-40%
ಓಡಬೇಡ ಎದುರಿಸು…
0ಓಡಬೇಡ ಎದುರಿಸು…
ಉತ್ತುಂಗ ಬದುಕಿಗೆ ಧೀಮಂತ ಚಿಂತನೆಗಳು
ಈ ಕೃತಿಯು ಪರಮ ಪೂಜ್ಯ ಸ್ವಾಮಿ ವಿಜಯಾನಂದ ಸರಸ್ವತಿಯವರು ತಮ್ಮ ಆಶ್ರಮ ಕಳೆದ ಹಲವಾರು ವರ್ಷಗಳಿಂದ ಪ್ರಕಟಿಸುತ್ತಿರುವ ‘ನವ ಚಿಂತನ’ ತ್ರೈಮಾಸಿಕ ಪತ್ರಿಕೆಗೆ ಬರೆಯುತ್ತ ಬಂದಿರುವ ಸಂಪಾದಕೀಯ ಲೇಖನಗಳಿಂದ ಆಯ್ದ ಮೌಲಿಕ ಲೇಖನಗಳನ್ನು ಒಳಗೊಂಡಿದೆ. ವರ್ತಮಾನದಲ್ಲಿ ಕುಸಿಯುತ್ತಿರುವ ನೈತಿಕಪ್ರಜ್ಞೆಯನ್ನು, ರಾಷ್ಟ್ರಪ್ರೇಮವನ್ನು, ನಿರ್ಭಯತೆಯನ್ನು, ವಿವೇಕವನ್ನು, ವಿನಯವನ್ನು, ಧೀರೊದ್ಧಾತ್ತ ನಾಯಕತ್ವದ ಗುಣಗಳನ್ನು ವಿಶೇಷವಾಗಿ ಯುವಮನಸ್ಸುಗಳಲ್ಲಿ ಮರುಬಿತ್ತನೆ ಮಾಡುವ ತೀವ್ರತರವಾದ ತುಡಿತ ಪ್ರಸ್ತುತ ಲೇಖನಗಳಲ್ಲಿ ವ್ಯಾಪ್ತವಾಗಿರುವುದನ್ನು ಯಾರೂ ಪರಿಭಾವಿಸಬಾರದು. ಬದುಕಿನ ಹತಾಶೆಗೆ, ಅರಿವಿನ ಅಭಾವಕ್ಕೆ, ಮನುಷ್ಯತ್ವದ ಕೊರತೆಗೆ, ಬದುಕಿನ ಅನರ್ಥಕತೆಗೆ, ತಂದೆ-ತಾಯಿಗಳ ಬೇಜವಾಬ್ದಾರಿಕೆಗೆ, ಅಭಿಮಾನಶೂನ್ಯತೆಗೆ, ಮಾನಸಿಕ ಅನಾರೋಗ್ಯಕ್ಕೆ ಸರಿಯಾದ ಚಿಕಿತ್ಸೆ ನೀಡಬಲ್ಲ ಮತ್ತು ಬದುಕಿಗೆ ದಾರಿದೀಪವಾಗಬಲ್ಲ ಕೃತಿ ಇದಾಗಿದೆ. -
-40%
ರೆಕ್ಕೆ ಕಟ್ಟುವಿರಾ
0ರೆಕ್ಕೆ ಕಟ್ಟುವಿರಾ:
೧೯೪೫ ರಲ್ಲಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕಾ ಮೊದಲಬಾರಿಗೆ ಅಣುಬಾಂಬನ್ನು ಜಪಾನಿನ ಮೇಲೆ ಎಸೆಯಿತು. ಹಿರೋಷಿಮಾ, ನಾಗಾಸಾಕಿ ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚಿನ ಜನತೀರಿಕೊಂಡರು. ಲಕ್ಷಾಂತರ ಜನ ಅಂಕವಿಕಲರಾದರು. ಜೀವ ಉಳಿಸಿಕೊಂಡ ಒಬ್ಬೊಬ್ಬರ ಬದುಕೂ ದಾರುಣವಾಯಿತು. ಅದಾಗಿ ಮೂರು ತಲೆಮಾರುಗಳು ದಾಟಿದರೂ ಹುಟ್ಟುವ ಮಕ್ಕಳ ಕೈಕಾಲುಗಳು ಊನವಾಗಿವೆ. ಅಣುಬಾಂಬ್ ಎಂತಹ ವಿನಾಶಕಾರಿ ಎಂಬುದಕ್ಕೆ ಇಡೀ ಸಮುದಾಯ ಸಾಕ್ಷಿಯಾಗಿ ನಿಂತಿದೆ.
ಇಂತಹ ಸಮುದಾಯದ ನಡುವೆ ಪುಟ್ಟ ಸಂಸಾರ, ಸುಂದರ ಬದುಕು ಎಂದು ಕನಸು ಕಟ್ಟಿಕೊಂಡು ಬದುಕುತ್ತಿದ್ದ “ಕಿನ್ಲು” ಎಂಬ ಮಹಿಳೆ ಬಾಂಬಿನ ಅನುಭವವನ್ನು, ಅದು ತನ್ನ ಕನಸುಗಳನ್ನು ನುಚ್ಚುನೂರು ಮಾಡಿದ್ದನ್ನು ಕುರಿತು ೨೫ ವರ್ಷಗಳಾದ ನಂತರ ಹೇಳಿಕೊಂಡ ವಿವರಗಳು ಈ ನಾಟಕಕ್ಕೆ ಕಾರಣವಾಗಿದೆ. -
-40%
ತಲೆಬುರುಡೆ ಬಿಡಿಸಿದ ಕೊಲೆ ರಹಸ್ಯ
0ತಲೆ ಬುರುಡೆ
ಬಿಡಿಸಿದ ಕೊಲೆ ರಹಸ್ಯ
ಮೂಲ : ಶ್ರೀ ಕೆ. ರಾಮಯ್ಯ ರೈ
ಅನುವಾದ: ಕೆದಂಬಾಡಿ ಜತ್ತಪ್ಪ ರೈ
ಸಮಾಜದ ಈ ಸ್ವಾಸ್ಥ್ಯ ಕಾಪಾಡಲು ನಾವೇ ಪೊಲೀಸ್ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪೊಲೀಸರು ನಾಗರಿಕರ ಸ್ನೇಹಿತರಾಗಿದ್ದರೆ ಅದರಿಂದ ಎಲ್ಲರಿಗೂ ಹಿತ. ಒಳ್ಳೆಯ ಪೊಲೀಸ್ ಅಧಿಕಾರಿಗಳಿಗೆ ಯಾವತ್ತೂ ಜನರ ನೈತಿಕ ಬೆಂಬಲ ಸಿಕ್ಕಿಯೇ ಸಿಗುತ್ತದೆ. ಪೊಲೀಸರೇ ನಾಗರಿಕರ ಸಹಕಾರ ಪಡೆಯದೆ ದೂರ ಸರಿದರೆ ಈ ಮಾತು ವಿರೋಧಾಭಾಸದ್ದು ಅನಿಸುತ್ತದೆ.
ಆದರೆ ನಮ್ಮ ನಡುವೆ ಶ್ರೀ ಕೆ. ರಾಮಯ್ಯ ರೈ ಅವರಂಥ ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇದ್ದರು. ಅವರ ಅನುಭವ ನೆನಪುಗಳೇ ಇಂದಿನವರಿಗೆ ಆದರ್ಶವಾಗಲಿ. ಅವರ ಸ್ವಾನುಭವದ ಸತ್ಯಕಥೆ ‘ತಲೆಬುರುಡೆ’ ಕಾದಂಬರಿ ರೂಪದಲ್ಲಿ ಸ್ವಾರಸ್ಯಕರವಾಗಿ ಹರಿದು ಬಂತು. -
-40%
ವಿಚ್ಛೇದನಾ ಪರಿಣಯ
0ವಿಚ್ಛೇದನಾ ಪರಿಣಯ
ಕತೆಯನ್ನು ಹುಡುಕುವ ಒಂದು ಕಾದಂಬರಿ
ಸುಮಾರು ಏಳೆಂಟು ತಿಂಗಳ ಕಾಲಾವಧಿಯಲ್ಲಿ ಬರೆದ ಈ ಕಾದಂಬರಿಯ ಈ ರೂಪಕ್ಕೆ ಕಾರಣರಾದವರು ರಚನೆಯ ಬೇರೆ ಬೇರೆ ಹಂತಗಳಲ್ಲಿ ಓದಿ ತಮ್ಮ ಮೆಚ್ಚುಗೆ-ಟೀಕೆ-ನಿರೀಕ್ಷೆಗಳನ್ನು ತಿಳಿಸಿದ ಆತ್ಮೀಯರು. ಈ ಆತ್ಮೀಯರಿಗೆಲ್ಲ ಕೃತಜ್ಞನಾಗಿದ್ದೇನೆ.