- -10%
ಬೆಂದ ಕಾಳು ಆನ್ ಟೋಸ್ಟ್
0Original price was: ₹120.00.₹108.00Current price is: ₹108.00.ಬೆಂದ ಕಾಳು ಆನ್ ಟೋಸ್ಟ್
ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿ ತಪ್ಪಿ, ರಾತ್ರಿಯಿಡೀ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬ ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ‘ಬೆಂದಕಾಳೂರು’ ಎಂಬ ಊರನ್ನು ಸ್ಥಾಪಿಸಿದ. ಅದೇ ಮುಂದೆ ‘ಬೆಂಗಳೂರು’ ಆಯಿತು.
- -10%
ಸಾಹಿತ್ಯಲೋಕದ ಸುತ್ತ-ಮುತ್ತ
0Original price was: ₹150.00.₹135.00Current price is: ₹135.00.ತುಂಬಾ ಗಂಭೀರ ಧಾಟಿಯ ನಿಷ್ಠುರ ವಿಮರ್ಶಕರೆಂದೇ ಪ್ರಸಿದ್ಧರಾಗಿರುವ ಗಿರಡ್ಡಿ ಗೋವಿಂದರಾಜರ ವ್ಯಕ್ತಿತ್ವ ಮತ್ತು ಬರವಣಿಗೆಯ ಮತ್ತೊಂದು ಮುಖ್ಯ ಆಯಾಮವನ್ನು ತೋರುವ ಕೃತಿ ”ಸಾಹಿತ್ಯ ಲೋಕದ ಸುತ್ತ–ಮುತ್ತ ”. ಪಠ್ಯ ಕೇಂದ್ರಿತ ವಿಮರ್ಶಕ ಈಗ ಪಠ್ಯದ ಸುತ್ತಮುತ್ತಲೂ ನೋಡುತ್ತಿದ್ದಾನೆ.
- -10%
ಹೊಳೆಮಕ್ಕಳು
0Original price was: ₹200.00.₹180.00Current price is: ₹180.00.ಇದು ಬಿದರಹಳ್ಳಿ ನರಸಿಂಹ ಮೂರ್ತಿಯವರ ಕಾದಂಬರಿ.
- -10%
ತಂತ್ರಯೋನಿ
0Original price was: ₹375.00.₹338.00Current price is: ₹338.00.ತಂತ್ರಯೋನಿ :
‘ತಂತ್ರಯೋನಿ’ ಗ್ರಂಥ ತಂತ್ರದ ಶಾಸ್ತ್ರವನ್ನು ಕುರಿತು ವಿವರವಾಗಿ ಹೇಳುತ್ತದೆ. ತಂತ್ರ ಒಂದು ರಹಸ್ಯವಿದ್ಯೆ. ಈ ವಿದ್ಯೆಯನ್ನು ಗುರುವಿನಿಂದ ಪಡೆಯಲು ಶಿಷ್ಯ ಅಧಿಕಾರಿಯಾಗಿರಬೇಕು. ‘ಅಶಿಷ್ಯಾಯ ನ ದೇಯಂ’ ಎನ್ನುವದು ಇಂಥ ವಿದ್ಯೆಗಳಿಗೆ ಒಂದು ನಿಷೇಧವಾಕ್ಯ. ದೀಕ್ಷೆ, ಧ್ಯಾನ, ಜಪ, ಮಂತ್ರ ಮೊದಲಾದವುಗಳು ಕೂಡ ತಂತ್ರವಿದ್ಯೆಯ ಅಂಗಗಳಾಗಿರುವುದರಿಂದ ಅವುಗಳನ್ನು ಕುರಿತು ಸಾಕಷ್ಟು ವಿವರಗಳನ್ನು ಈ ಗ್ರಂಥದಲ್ಲಿ ನೀಡಲಾಗಿದೆ.
- -10%
ಮುಖಾಂತರ
0Original price was: ₹550.00.₹495.00Current price is: ₹495.00.ಮುಖಾಂತರ
‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಹಾಸು ಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗು ಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.
ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗ ಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿದೆ. - -10%
ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು
0Original price was: ₹70.00.₹63.00Current price is: ₹63.00.ಹೂವು, ಒಡಕಲು ಬಿಂಬ ಮತ್ತು ಇತರ ನಾಟಕಗಳು:
“ಹೂವು, ಒಡಕಲು ಬಿಂಬ” ಗಿರೀಶ ಕಾರ್ನಾಡ ಅವರು ಗ್ರಂಥಮಾಲೆಗಾಗಿ ರಚಿಸಿದ ನಾಟಕಗಳ ಸಂಕಲನ. ಇದರಲ್ಲಿ ಹೂವು (ಭಾಷಣ ರೂಪಕ), ಒಡಕಲು ಬಿಂಬ (ನಾಟಕ), ಮಾನಿಷಾದ (ನಾಟಕ) ಮತ್ತು ಮಹೇಶ ಎಲಕುಂಚವಾರ ಅವರ ಎರಡು ಅನುವಾದಿತ ನಾಟಕಗಳು “ವಾಸಾಂಸಿ ಜೀರ್ಣಾನಿ” ಮತ್ತು “ಧರ್ಮ ಪುತ್ರ” ಸೇರಿವೆ.
- -10%
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
0Original price was: ₹120.00.₹108.00Current price is: ₹108.00.ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ….
ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚುರೀ ಇವು ಎರಡು ನಾಟಕಗಳಾಗಿದ್ದು , ಇವೆರಡು ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯರನದ್ದು. ‘ಆಚಾರ್ಯ ಪ್ರಹಸನ’ವು ಮೋಲಿಯರನ ‘ಲೆ ತಾರ್ ತೂಫ್’ ನಾಟಕದಿಂದಲೂ. ‘ಏನ್ ಹುಚ್ಚೂರೀ….’ ನಾಟಕವು ‘ಬೂರ್ಜ್ವಾ ದಿ ಜಂಟಲ್ ಮನ್’ ನಾಟಕದಿನ್ದಲೂ ಪ್ರಭಾವಿತವಾಗಿವೆ. ಈ ಎರಡು ನಾಟಕಗಳನ್ನು ಅಭಿನಯಿಸುವುದು ಸುಲಭವಲ್ಲ. ನಾಟಕಕಾರ ಹಾಗೂ ನಿರ್ದೇಶಕರ ಮೇಲೆ ಕಲಾತ್ಮಕ ನಿರ್ಬಂಧ ಹೀರಾ ಬಲ್ಲ ಕೃತಿಗಳಿವು.
- -10%
ತೇರು….
0Original price was: ₹170.00.₹153.00Current price is: ₹153.00.ತೇರು ಕಾದಂಬರಿಯನ್ನು ಓದಲಾರಂಭಿಸಿದಾಗ ಒಂದನೇ ಭಾಗದಲ್ಲಿ ಪತ್ರಕರ್ತ ಪಾಟೀಲರಿಗೆ ಧರಮನಟ್ಟಿ ಸ್ವಾಂವಪ್ಪಜ್ಜ, ಧರಮನಟ್ಟಿಯ ದೇಸಗತೀ ಕಥೀ ಹೇಳಲಾರಂಭಿಸಿದ. ಅದರ ಜೊತಿಗೆ ನಾಳೆ ನಮ್ಮೂರಾಗ ವಿಠ್ಠಲ ದೇವರ ತೇರ ಇದೆ ನೀವು ಬರಲೇ ಬೇಕು ಎಂದು ಹಠ ಹಿಡಿದು ಕರದುಕೊಂಡು ಹೋದ. ಅಂದು ರಾತ್ರಿ ಅಲ್ಲಿ ಗೊಂದಲಿಗ್ಯಾರು ಕಥಿ ಹೇಳತಾರ ಕೇಳುಣ ನಡಿರಿ ಎಂದು ಪಾಟೀಲರನ್ನು ಕರೆದುಕೊಂಡು ಹೋದ. ವಿಠಲ ದೇವರ ತೇರಿನ ವರ್ಣನೆಯನ್ನ ಆರಂಭಿಸಿ ತೊಗಲು ಬೊಂಗೆ ಆಡಿಸೋ ದ್ಯಾಮಣ್ಣನ ಮಗನ ಮರಣದವರೆಗೂ ಗೊಂದಲಿಗ್ಯಾರ ಪದದ ಧಾಟಿಯಲ್ಲೇ ಸಂಪೂರ್ಣ ಕಥೆ ಹೇಳಿದ್ದು ಕಾದಂಬರಿಗೆ ಬಹು ವಿಶೇಷ ಮೆರಗನ್ನು ಕೊಟ್ಟಿದೆ.
ಕಾದಂಬರಿಯಲ್ಲಿ ತೇರು ತಯಾರಿಸಿದ ನಂತರ ಮೊದಲ ತೇರು ಏಳೆಯಲು ಜನರು ಸೇರಿದಾಗ ಒಂಚೂರ ನೆಲಬಿಟ್ಟು ಕದಲೋದಿಲ್ಲ. ಅದಕ್ಕೆ ಪುರೋಹಿತರನ್ನ ವಿಚಾರಿಸಲಾಗಿ ಅದಕ್ಕೆ ಕೆಳಜಾತಿಯ ಮನುಜನ ಬಲಿ ಬೇಕು ಎಂದು ಕೇಳುತ್ತಿದೆ ತೇರು ಎಂದ ಹೇಳುತ್ತಾನೆ ಪುರೋಹಿತ. ಊರಲ್ಲಿ ಸುದ್ಧಿ ಹರಡಿ ಬೆಳಗಾಗುದರೊಳಗ ಎಲ್ಲ ಕೀಳುಕುಲದ ಜನಾಂಗ ಊರು ಬಿಟ್ಟು ಹೊರಟೋಗಿದ್ದರು. ಒಬ್ಬನೇ ಒಬ್ಬನು ಗೊಂಬೀರಾಮರಾ ದ್ಯಾವಯ್ಯ ದೇವಾಲಯದ ಆವರಣದಲ್ಲಿ ಸಿಕ್ಕನು. ಡಂಣಾಯಕ ಹಾಗು ಅವನ ಹೆಂಡತಿ ಸೇರಿ ದ್ಯಾವಯ್ಯನಿಗೆ ೮ ಎಕರೆ ಜಮೀನು ನೀಡುವುದಾಗಿ ಆಸೆ ಚೆಲ್ಲಿ ಒಬ್ಬ ಮಗನನ್ನ ತೇರಿಗೆ ಬಲಿಕೊಡಲು ತಯಾರಿ ಮಾಡಿದರು. ದ್ಯಾವಯ್ಯನ ಹೆಂಡತಿ ಪಾರೋತೆವ್ವ ಗೋಳಾಡಿ ಅಳಲು ಪ್ರಾರಂಭಿಸುತ್ತಾಳೆ. ಗಂಡ ಅವಳನ್ನು ಬಡಿದು ಹೊಡೆದು ದೇವರಿಗೆ ಮಗನನ್ನ ಅರ್ಪಿಸೋಣ ಎಂದು ಹೇಳಿದನು. ಹಣದ ಆಸೆಗೋ ಏನೋ ಅಂದು ಮಡದಿಯ ಮಾತಿಗೆ ಬೆಲೆ ಕೊಡದೇ ಬಡಿದು ತೇರಿಗೆ ಮಗನನ್ನ ಅರ್ಪಿಸಿದರು. ಅಂದಿನಿಂದ ಇಂದಿನವರೆಗೂ ದ್ಯಾವಪ್ಪನ ಮನೆತನದವರೇ ಬಂದು ರಕ್ತತಿಲಕ ಅಂದ್ರೆ ಹಣೆಯನ್ನು ತೇರಿನ ಗಾಲಿಗೆ ಗುದ್ದಿ ರಕ್ತಾ ಬಂದ ನಂತರ ಆ ರಕ್ತವನ್ನು ದೇವರಿಗೆ ಹಚ್ಚಿದಾಗ ತೇರು ಮುಂದೆ ಬರ್ತಿತ್ತು ಎಂಬ ವಾಡಿಕೆ ಮುಂದುವರೆದಿತ್ತು.