ನೇರ ಪ್ರಸಾರ VIVIDLIPI ಯೂಟ್ಯೂಬ್ ಚಾನೆಲ್ ಮತ್ತು ಫೇಸ್ಬುಕ್ ಪುಟದಲ್ಲಿ
Facebook Live: https://www.facebook.com/vividlipi/live
Youtube Live: https://www.youtube.com/vividlipi/live
ಭಾರತ ರತ್ನ ಪಂಡಿತ ಭೀಮಸೇನ ಜೋಷಿ ಹಿಂದುಸ್ತಾನಿ ಸಂಗೀತ ಕ್ಷೇತ್ರದ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಸವಾಯಿ ಗಂಧರ್ವರ ಅಪ್ಪಟ ಶಿಷ್ಯ, ಸಂಗೀತದಲ್ಲಿ ’ಕಲಾಶ್ರೀ’ ರಾಗವನ್ನು ರಚಿಸಿದ ಅವರು ಮರಾಠಿ ಅಭಂಗ, ನಾಟ್ಯ ಸಂಗೀತ, ಹಿಂದಿ ಭಜನ್, ಕನ್ನಡದಲ್ಲಿ ದೇವರನಾಮ ಗಳನ್ನು ಹಾಡಿ, ಹಲವು ಚಲನಚಿತ್ರಗಳಿಗೂ ತಮ್ಮ ಕಂಠದಾನಮಾಡಿದ್ದಾರೆ. ಇವರ ‘ಸಂತವಾಣಿ ಕಾರ್ಯಕ್ರಮ’ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ.
ಪಂಡಿತ್ಜೀಯವರ ಪ್ರಥಮ ಪತ್ನಿ, ಸುನಂದಾರವರ ಜೊತೆ ವಿವಾಹದಿಂದ ನಾಲ್ಕು ಮಕ್ಕಳು ಜನಿಸಿದರು. ಸುನಂದಾರವರ ನಿಧನಬಳಿಕ, ೨ನೇ ವಿವಾಹ,ವತ್ಸಲಾ ರವರೊಡನೆ ನಡೆದು, ಅವರಿಗೆ ಮೂರು ಮಕ್ಕಳು ಜನಿಸಿದರು. ತಂದೆಯ ಪರಮ ಶಿಷ್ಯನಾದ ‘ಶ್ರೀನಿವಾಸ’, ಈಗ ಪ್ರಬುದ್ಧ ಗಾಯಕರಾಗಿದ್ದಾರೆ. ಪಂ.ಭೀಮ್ ಸೆನ್ ಜೋಶಿಯವರ ತಮ್ಮನ ಮಕ್ಕಳಲ್ಲೊಬ್ಬರು, ಭಾರತೀಯ ಕ್ರಿಕೆಟ್ ತಂಡದ ಸದಸ್ಯರಲ್ಲೊಬ್ಬರಾದ ಸುನಿಲ್ ಜೊಶಿ, ಮತ್ತು ಅನಿರುದ್ಧ ಜೋಶಿ, ಕಿರಿಯರ ಕ್ರಿಕೆಟ್ ತಂಡದ ಆಟಗಾರರು. ಅವರ ಚಿಕ್ಕಪ್ಪ, ’ಗೋವಿಂದಾಚಾರ್ಯ’ರು, ’ಜಡಭರತ’ ಎಂಬ ಕಾವ್ಯನಾಮದಿಂದ, ಹೆಸರಾಗಿದ್ದಾರೆ. ಇವರು ಸುಪ್ರಸಿದ್ಧ ಲೇಖಕರು ಮತ್ತು ನಾಟಕಕಾರರು, ’ಮನೋಹರ ಗ್ರಂಥಮಾಲೆ’ಯೆಂಬ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿದವರು.
[tribe_events_bhimsen_joshi]