ಭಯ್ಯಾ… ಪ್ಲೇಟ್ ಪಾನಿಪುರಿ

ಭಯ್ಯಾ…

ಪ್ಲೇಟ್ ಪಾನಿಪುರಿ

       ಹೌದ್ರೀ, ಧಾರವಾಡದಾಗ ಮೂರು ಸಂಜೆ ಆತು ಅಂದ್ರ ಮಂದಿ ಭಯ್ಯಾ… ಪ್ಲೇಟ್ ಪಾನಿಪುರಿ. ಭಯ್ಯಾ… ಒಂದು ಭೇಲ್ ಪುರಿ ಅಂತ ಪಾನಿಪುರಿ ಗಾಡಿ ಮುಂದ ಮುಕರಿರತಾರ ನೋಡ್ರಿ. ಹೌದ್ರೀ, ಆ ರಾಜಸ್ತಾನ ಮಂದಿ ಏನ ಜಾದೂ ಮಾಡ್ಯಾರೊ ಏನ ತಾನೋ.
           ಎಲ್ಲಾ ಸಣ್ಣ ಹುಡುಗರು ಕಾಲೇಜಗೆ ಹೋಗೂ ಹುಡುಗ ಹುಡುಗೀರೂ ಭೇಲ್ ತಿನ್ನೋಣ ಏನ್, ಮೊದಲ ಒಂದ ಪ್ಲೇಟ್ ಪಾನಿಪುರಿ ಹೇಳ ಅಂತಾರ್ರಿ. ಮಾಳಮಡ್ಡಿ ಒಳಗ ಒಬ್ಬವ, ಕರ್ನಾಟಕ ಕಾಲೇಜು ಮುಂದ ಬ್ಯಾರೆ ಇನ್ನೊಬ್ಬವ. ಪ್ಯಾಟ್ಯಾಗ ಬ್ಯಾರೆ ಮತ್ತೊಬ್ಬವ ಹಿಂಗ ಎಲ್ಲಾದರೂ ಬ್ಯಾರೆ ಬ್ಯಾರೆ ರುಚಿ, ಬ್ಯಾರೇ ಬ್ಯಾರೇ ರೇಟ. ಮತ್ತ ಅವರ ರೇಟ ಹೊಟೇಲನವರಿಗಿಂತ ಸೋವಿನ ಬಿಡ್ರಿ. ಬಂದ ಸಣ್ಣ ಹುಡುಗರಿಗೆ ಪುಕ್ಕಟ ಖಾಲಿ ಪುರಿ ಬ್ಯಾರೆ ಕೊಡತಾರ್ರಿ. ಮುಂಜಾನೆ ಇದ ಮಂದಿ ಹೊಟೇಲ್ ನವರಿಗೆ, ಡ್ರಾಯ್ ಫ್ರುಟ್ಸ್ ಅಂಗಡಿಗೆ, ಬೇಕರಿಗೆ ಮತ್ತ ಸ್ಟಾರ್ ಹೋಟೆಲದ್ನವರಿಗೂ ಬರೇ ಖಾಲಿಪುರಿ ಪ್ಯಾಕೆಟ್ ಹೋಲ್ ಸೇಲ್ ನ್ಯಾಗ ಮಾರತಾರ. ಸಂಜಿಕ ತಮ್ಮ ದೂಗಸು ಅಂಗಡ್ಯಾಗ ವ್ಯಾಪಾರ. ಅಲ್ಲಲ್ಲಿ ಕೂಟ ಕೂಟಗೆ ಬರೇ ಪಾನೀಪುರಿನೂ (ಒಂದ ಗಡಗಿ ಇಟ್ಕೊಂಡು ಕುಳಿತಿರತಾರ) ಮಾರತಾರ. ಮಂದಿ ಜೊತೆ ಚೆಂದ ಚೆಂದ ಮಾತ ಆಡತಾರ. ಸಂಜೆಯಿಂದ ರಾತ್ರಿ 10 ರತನಕ ವ್ಯಾಪಾರ ಮಾಡಿ ಗಲ್ಲೆ ತುಂಬಸ್ತಾರ ಎಲ್ಲಾ ಕಡೆ ಡೇಟ್ ನೋಡೊ ಜನ ಅಲ್ಲಿ ಮಾತ್ರ ನಕ್ಕೊತ ನಕ್ಕೊತ ಏನೂ ನೋಡದ ಕೇಳದ ಪಾನಿಪುರಿ ಬೇಲ್ ಪುರಿ, ಮಸಾಲಾ ಪುರಿ, ಹೊಟ್ಟೆ ತುಂಬ ತಿಂದ ನಡ್ರೀ ಸಂಜೆಕ್ಕ ಮನ್ಯಾಗ ಮಾಡೂದ ತಪ್ಪಿತ ಅನ್ನಕೋತ ಮನಿಗೆ ಹೋಗತಾರ.

□ವಿಜಯ ಇನಾಮದಾರ
ಧಾರವಾಡ

1 Comment

  1. ಛಲೋ ಐತ್ರೀ,
    ಹಂಗೇ ಒಮ್ ಹೋಗೋಣೇನು?
    ಮೊದ್ಲಿಕೆ ಬರೇ ೫ರಿಂದ೮ ರೂ. ಇತ್ರೀ, ರೊಕ್ಕ ಹಗುರಾಗ್ಯದೋ ಏನೋ ೨೫
    ರಿಂದ ೩೦ರ ಮಟ ಹೋಗ್ಯದ್ರೀ.

    ೪ ಮಂದಿ ಹೋದ್ರ ಒಬ್ಬ ಗಾಂಧೀ ತಾತ (ನೀಲಿ ಬಣ್ಣದ್) ಬೇಕ್ರೀ
    ಆದ್ರೂ ಆಗಾಗ ಹೋಗ್ಬೇಕ್ರಿ ಬೇಕ್ರಿಗಿಂತ ಛಲೋರಿ

Leave a Reply