Being me
Yes, I appear as I do
I call myself Ajita
and for long
believed that name was me
Whoever I am now
I could be you or him or her or it
could be that starving child on the street I pretend
not to see
I could be that prostitute I pretend not to know
I could be that billionaire pretending to be charitable
I could be that poor soul giving away what little they have
I could be that person who dies in shame
I could be that person who takes another life
I could be that person who sacrifices their life
I could be that person who lives to collect fame
I could also be the Love that I feel
I could also be the compassion that I feel
There is no limit to what I can be and could be
Yet, I believe in the limits I impose upon me
and insist on being just me!
ನಾನು ನಾನೇ
ನನ್ನ ಹೆಸರು ಏನೂ ಇರಬಹುದು
ಅದೇ ಹೆಸರಿನಲಿ ನಿಮ್ಮೆದುರು ಬರಬಹುದು…
ಅದೇ ನಾನೆಂದು ಭ್ರಮಿಸಿರಲೂ ಬಹುದು…
ನಿಜ ಹೇಳಲೇ?
“ನಾನು”- ನೀವು, ಅವಳು, ಅವನು, ಅವರು
ಅದು. ಏನೂ ಆಗಿರಬಹುದು…
ದಾರಿಯಲ್ಲಿ ಅಳುವ ಮಗು,
ಮಹಾದಾನಿ ಧನಿಕ,
ಇದ್ದುದೆಲ್ಲವ ಪರರಿಗಿತ್ತ ಸಂತ,
ನಾಚಿಕೆ ಇಂದ ಮುದುಡಿರುವ ದೋಷಿ,
ಬದುಕನ್ನೇ ಇಡಿಯಾಗಿ. ದಾನಮಾಡಿದ ತ್ಯಾಗಿ,
ಹೆಸರಿಗೆ ಹಂಬಲಿಸುವ ಹಪಾಪಿ…
ನಾನಾಗಲು ಹಂಬಲಿಸುವ ಪ್ರೇಮಜೀವಿ,
ಹೀಗೆ ಏನೇನೊ ಆಗಿರಬಹುದು… ನಾನು,
ಅದಕೆ ಅಂಕೆ ಇಲ್ಲ… ಗಡಿಯಿಲ್ಲ…
ಕೊನೆಗೆ ನಾನಿರುವದು ನಾನಾಗಿಯೆ…
ಅದೇ ನನ್ನ ಮಿತಿ…
ಅದಂರಿತು ಅದರಲ್ಲಿಯೇ ಬದುಕು ಕಾಣುತ್ತಿರುವ
ನಾನು ಮಾತ್ರ ನಾನೇ !
(ಅಜಿತಾಳ ” Ajita” ಕವನದ ಅನುವಾದ )