ಧಾರವಾಡ:ಇಲ್ಲಿಯ ಕರ್ನಾಟಕ ವಿವಿಯ ಟೈವಾಕ ಬಳಿಯ ಬಾಲಬಳಗದ ಸಭಾಭವನದಲ್ಲಿ, ಜನವರಿ ೫ರಂದು
ಬೆಳಿಗ್ಗೆ ೯.೩೦ ಗಂಟೆಗೆ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ಶ್ರೀಕಾಂತ ಜೋಶಿ
ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲು ೭ ಜಿಲ್ಲೆಗಳಿಂದ
೧೨ ರಿಂದ ೧೮ ವಯಸ್ಸಿನ ೫೦ ಮಕ್ಕಳು ಈಗಾಗಲೇ ತಮಗೆ ಆಸಕ್ತ ಸಂಗೀತದ ಮೂರು ನಿಮಿಷದ ವಿಡಿಯೋ
ಕಳುಹಿಸಿದ್ದರು. ಈ ಪೈಕಿ ೧೬ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳಿಗೆ ೧೫ ರಿಂದ ೩೦
ನಿಮಿಷಗಳ ಕಾಲ ಗಾಯನ,ವಾದನ, ಶಾಸ್ತ್ರಿಯ ಸಂಗೀತವನ್ನು ಮಾತ್ರ ಪ್ರಸ್ತುತಪಡಿಸಲು ಅವಕಾಶ ನೀಡಲಾಗಿದೆ.
ಭಾಗಿಯಾದಮಕ್ಕಳಿಗೆ ಪ್ರಮಾಣಪತ್ರ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು. ಇದು ಸ್ಪರ್ಧೆಯಲ್ಲ
ಬದಲಾಗಿ ಪ್ರತಿಭೆ ಹೊರಹಾಕುವ ವೇದಿಕೆ.ಸಂಗೀತೋತ್ಸವಕ್ಕೆ ಅರಣ್ಯಕುಮಾರ ಹಾಗೂ ಗೋಪಿಕೃಷ್ಣ ಸಾಥ
ನೀಡಲಿದ್ದಾರೆ. ಖ್ಯಾತ ವಾಯಲಿನ್ ವಾದಕ ಅಕ್ಕಮಹಾದೇವಿ ಮಠ ಹಾಗೂ ಖ್ಯಾತ ಸಿತಾರ ವಾದಕ ಶ್ರೀನಿವಾಸ
ಜೋಶಿ ಆಗಮಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜ್ಯೋಶಿ, ಕುಲಕರ್ಣಿ, ಮೃಣಾಲಿನಿ ಕಲಕೇರಿ, ಶಾಂತಾ
ಪಾಂಡೆ ಇದ್ದರು.