ಶ್ರೀರಾಮ ಪರಿತ್ಯಕ್ತ ಸೀತಾಮಾತೆ

“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ ಭವತಿ ಭಾರತ! ಅಭ್ಯುದಾನಂ ಅಧರ್ಮಸ್ಯ ಸಂಭವಾಮಿ ಯುಗೆ ಯುಗೆ” ಎಂಬ ಗೀತೆಯ ಶ್ಲೋಕದಲ್ಲಿ ಹೇಳಿರುವಂತೆ ಧರ್ಮ ಅಧರ್ಮದ ಯುದ್ಧದ ಸಮಯದಲ್ಲಿ ಧರ್ಮ ಸಜ್ಜನರ ರಕ್ಷಣೆಗಾಗಿ ನಾನು ಅವತರಿಸುವೆ ಎಂದು ತನ್ನ ಪ್ರೀಯ ಶಿಷ್ಯ ಅರ್ಜುನನಿಗೆ ಹೇಳಿದಂತೆ ವಿಷ್ಣು ತನ್ನ 7 ನೇ ಅವತಾರ ಮರ್ಯಾದ ಪುರುಷೋತ್ತಮ ಶ್ರೀ ರಾಮಚಂದ್ರನಾಗಿ ದಶರಥರಾಜ ಕೌಶಲ್ಯ ಪುತ್ರನಾಗಿ ಚೈತ್ರ ಮಾಸದ ಶುದ್ಧ ನವಮಿಯಂದು ತ್ರೇತಾಯುಗದಲ್ಲಿ ಲೋಕಕಲ್ಯಾಣಾರ್ಥವಾಗಿ ಜನಿಸಿ ಸುಮಾರು 13 ಸಾವಿರ ವರ್ಷ “ರಾಮರಾಜ್ಯ” ಎಂಬ ಪರಿಕಲ್ಪನೆಯನ್ನು ಸಮಾಜಕ್ಕೆ ಸಂದೇಶ ರೂಪದಲ್ಲಿ ಸ್ವತಃ ತಾನೆ ರಾಜ್ಯಭಾರ ಹೇಗಿರಬೇಕು ಎಂಬುದನ್ನು ತೋರಿಸಿದ ಅವತಾರವೆ ರಘುರಾಮನ ಅವತಾರ. ಹಾಗೆ ಪ್ರತಿ ಅವತಾರದಲ್ಲಿ ತಾನು ಕೊಟ್ಟಂತಹ ವರಗಳನ್ನು ಸಾಕಾರ ಗೋಳಿಸಲು ಶ್ರೀಮಹಾಲಕ್ಷಿಯನ್ನು ತನ್ನ ಭಕ್ತರನ್ನು ಪೂಜಿಪರನ್ನು ತನ್ನ ಅಣ್ಣ ತಮ್ಮ ಸಖಾ ತಾಯಿ ತಂದೆ ಸೇವಕರ ಹಾಗೂ ಧರ್ಮ ಕಂಟಕರ ರೂಪದಲ್ಲಿ ಜನ್ಮ ತಳೆಸಿ ಮೋಕ್ಷವನ್ನು ಪಡೆದುಕೋಳ್ಳಲು ಅವರು ಮಾಡಿದ ಸತ್ಕಾರ್ಯ ಕುಕರ್ಮಗಳ ಅನುಸಾರ ಸಂತೋಷ ದುಃಖ ದುಷ್ಟರಿಗೆ ಶಿಕ್ಷೆ ಕೋಟ್ಟು ಅವರ ಯೋಗ್ಯತೆ ಅನುಸಾರ ಸಹಾಯ ಹಸ್ತದಿಂದ ಆಶೀರ್ವದಿಸಿ ಹರಿಸುತ್ತಾನೆ ಭಗವಂತನ ಅಪಾರ ಲೀಲೆಗಳ ಭಾಗವಾಗಿರುತ್ತವೆ ಇವೆಲ್ಲವೂ ಅದೆ ಕಾರಣಕ್ಕೆ ಆತನನ್ನು ಕಪಟ ನಾಟಕ ಸೂತ್ರಧಾರಿ ಎಂತಲು ಕರೆಯುವದುಂಟು.

ಶ್ರೀರಾಮನ ಅವತಾರದಲ್ಲಿ ಶ್ರೀರಾಮನ ರಾಜ್ಯ ಪರಿಪಾಲನೆ ತಾಯಿ ತಂದೆ ಆಜ್ಞೆಯ ವಚನ ಪಾಲನೆ ಗುರುಗಳ ಸೇವೆ ರಾಕ್ಷಸರ ಅಧರ್ಮದ ಸಂಹಾರ ತನ್ನ ಮಾತಿನಂತೆ ಸುಗ್ರೀವ ವಿಭೂಷಣರಿಗೆ ಪಟ್ಟಾಭಿಷೇಕ ಮಾಡಿ ಯಾರಿಗೂ ನೋವಾಗದಂತೆ ನಡೆದುಕೊಳ್ಳುವ ಹಿತನುಡಿಗಳು ವಾಲ್ಮೀಕಿ ಮಹರ್ಷಿಗಳ ರಾಮಾಯಣದಲ್ಲಿ ಕಣ್ಣು ಕಟ್ಟುವಂತೆ ರಚಿಸಿ ನಮಗೆಲ್ಲ ಉಣಬಡಿಸಿದ್ದಾರೆ.

ಶ್ರೀರಾಮನು ಗ್ರಹಸ್ತ್ಯ ಧರ್ಮ ಹೇಗಿತ್ತೇ೦ದರೆ ಏಕಪತಿವ್ರತನಿಷ್ಠನು. ಸೀತೆ ಹೇಗೆ ಸಾದ್ವಿ ಶಿರೋಮಣಿಯೋ ರಾಮನೂ ಅದರಂತೆ ಸೀತೆ ಯೋರ್ವಳಲ್ಲಿಯೇ ಅನುರಕ್ತನೆಂಬುದು ಮೂಲೋಕವೂ ತಿಳಿದಿರುವ ಸಂಗತಿ. “ರಾಜಾನೋ ಬಹುವಲ್ಲಭಾಃ” ರಾಜರು ಹೆಚ್ಚು ಮಂದಿ ಹೆಂಡಿರುಳ್ಳವರು ‘-ಎಂಬ ಮಾತು ಮತ್ತು ಮಾತಿನಂತೆ ನಡತೆ ಪ್ರಚಲಿತವಿದ್ದರೂ ರಾಮನು ಮಾತ್ರ ಅದಕ್ಕೆ ಅಪವಾದವಾಗಿ ಈ ಕಾಲದ ಹಿಂದೂಗೃಹಸ್ಥರಿಗೆ, ತನ್ಮೂಲಕ ಲೋಕಕ್ಕೆ ಆದರ್ಶನಾಗಿ ದ್ದಾನೆ. ಅವನಿಗೆ ಇಬ್ಬರೇ ಮಕ್ಕಳೆಂಬುದು ಇಂದಿಗೂ ಒಂದು ಆದರ್ಶವಲ್ಲವೇ ? ಸೀತೆಯನ್ನು ರಾವಣನು ಅಪಹರಿಸಿದಾಗ-ರಾಮನಿಗಾದ ದುಃಖವೂ ವರ್ಣನಾ ತೀತ, ರಾವಣನನ್ನು ವಧಿಸಿದ ಅನಂತರ, ಜನಾಪ ವಾದಕ್ಕೆ ಎಡೆಗೊಡಬಾರದೆಂಬ ಸದುದ್ದೇಶದಿಂದ ಮಾತ್ರವೇ ರಾಮನು ಆಕೆಯನ್ನು-ಅಗ್ನಿ ಪರೀಕ್ಷೆಗೆ ಒಳ ಗಾದ ಮೇಲೆಯೇ-ಸ್ವೀಕರಿಸಿದುದಾಗಿ ವಾಲ್ಮೀಕಿ ವರ್ಣಿ ಸಿರುತ್ತಾನೆ.

ಆದಿಕವಿ ವಾಲ್ಮೀಕಿಮಹರ್ಷಿಗಳು ವಿರಚಿತ ಮಹಾ ಇತಿಹಾಸ ಕಾವ್ಯವೇ ರಾಮಾಯಣ, ಆದಿಕಾವ್ಯವೆಂದು ಪ್ರಖ್ಯಾತವಾಗಿರ ಇದರ ಮಹಿಮೆ-ಹಿರಿಮೆಗೆ, ಕಥಾನಾಯಕಿ ಸೀತೆಯ ಪಾತ್ರವೇ ಮೂಲಾಧಾರ.ಅಧ್ಯಯನದಿಂದಲೇ ತಿಳಿದುಬರುವಂತೆ ರಾಮ ನಿಲ್ಲದೇ ಸೀತೆಯಿಲ್ಲ, ಸೀತೆಯಿಲ್ಲದೇ ರಾಮನಿಲ್ಲ. ಆದರೆ ರಾಮನ ಕೀರ್ತಿಗೆ ಸೀತೆಯೇ ಚಿಚ್ಛಕ್ತಿ, ಮಹಾಚೈತನ್ಯ. ಏಕೆಂದರೆ : “ ಶಕ್ತಿ ಇಲ್ಲದೆ ಶಕ್ತನಿಲ್ಲ ”

ವಾಲ್ಮೀಕಿ ಋಷಿಗಳುಕಾವ್ಯದಲ್ಲಿ ಈ ರೀತಿ ವರ್ಣಿಸಿದ್ದಾರೆ.
ಗುಣಾದ್ರೂಪಗುಣಾಚ್ಚಾಪಿ
ಪ್ರೀತಿರ್ಭೋಯೋಧ್ಯವರ್ಧತ |
ತಸ್ಯಾಕ್ಷ ಭರ್ತಾ ದ್ವಿ
ಗುಣಂ ಹೃದಯೇ ಪರಿವರ್ತತೇ |
ಅಂತರ್ಗತಮಪಿ ವ್ಯಕ್ತ
ಮಾಖ್ಯಾತಿ ಹೃದಯo ಹೃದಾ ll ೨೭ll
ರಾಮಾಯಣ ಸರ್ಗದಲ್ಲಿ ಹೇಳಿದ್ದಾರೆ.

ಅಂದರೆ “ ಸೀತಾ-ರಾಮರು ಪರಸ್ಪರಭಾವನೆಗಳನ್ನು ಅರಿಯು ತಿದ್ದರು ; ತಮ್ಮ ಇಚ್ಛೆಗಳನ್ನು ವ್ಯಕ್ತಪಡಿಸುತ್ತಿದ್ದರು. ನಾಲಿಗೆ, ತುಟಿಗಳು ಅಥವಾ ಕಣ್ಣುಗಳು ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಹೃದಯಗಳು ಪರಸ್ಪರ ಸ್ಪಂದಿಸುತ್ತಿದ್ದು ವು. ಹೃದಯ ಹೃದಯಗಳು ಬೆರೆಯು ತಿದ್ದುವು. ಯಾರು ಯಾರನ್ನು ಹೆಚ್ಚು ಪ್ರೀತಿಸು ತಿದ್ದರು-ಎಂಬುದನ್ನು ಹೇಳುವುದು ಕಷ್ಟ.”

ರಾಮರಾವಣರ ಯುದ್ಧ ಮುಗಿದ ಮೇಲೆ ರಾಮನ ಕಟು ಮಾತುಗಳಿಗೆ ಅಘಾತಳಾಗಿ ಎಷ್ಟದರೂ ರಾಮ ಸರ್ವಸ್ವ ಎಂದು ತಿಳಿದು, ಅವನ ಇಟ್ಟ ಅಗ್ನಿ ಪರೀಕ್ಷೆ ಎದುರಿಸಿದಳು. ಸೀತೆ ಪರಿಶುದ್ಧಳೆಂಬುದು ರಾಮನಿಗೆ ಗೊತ್ತಿದ್ದರೂ ಜನಾಪವಾದದ ಭೀತಿಯಿಂದ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪತಿವೃತ್ಯ ತೋರಿಸಿದಳು.ಆದರೂ ಆಕೆಯ ಬಗೆಗೆ ಜನರು ಆಡಿಕೊಳ್ಳುವುದು ಕೇಳಿಬಂದುದರಿಂದ ರಾಮನು ಸೀತೆ ಯನ್ನು-ಗರ್ಭಿಣಿಯಾಗಿದ್ದವಳನ್ನು – ಆಕೆಯ ಬಯಕೆಯ ನೆಪವಿಟ್ಟು-ಲಕ್ಷ್ಮಣನೊಡನೆ ಕಾಡಿಗೆ ಕಳುಹಿಸುತ್ತಾನೆ. ಮೇಲ್ನೋಟಕ್ಕೆ ಇಲ್ಲಿ ರಾಮನು ಅಪರಾಧಿಯಾಗಿ ತೋರಬಹುದು. ರಾಜಾ ಪ್ರಕೃತಿರಂಜ ನಾತ್ ‘ ಎಂಬುದನ್ನು ಯಥಾ ರಾಜಾ ತಥಾ ಪ್ರಜಾಃ ‘ ಎಂಬುದನ್ನು ನಾವು ಪರಿಗಣಿಸಿ, ಕುಚೋದ್ಯದ ಪ್ರಜೆಗಳ ಮುಂದೆಯೂ ರಾಮನು ತನ್ನ ನಿಷ್ಕ ಳಂಕತೆಯನ್ನು ದೃಢಪಡಿಸಲು ಹಿಂಜರಿಯಲಿಲ್ಲ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ.

ದೇಶವನ್ನಾಳುವ ಉನ್ನ ತಾಧಿಕಾರಿ ಅದೆಷ್ಟು ಪರಿಶುದ್ಧನಾಗಿರಬೇಕು ಎಂಬ ಪಾಠ ವನ್ನು ಈ ಸೀತಾಪರಿತ್ಯಾಗದ ಸನ್ನಿವೇಶ ದೃಢಪಡಿಸು ಇದೆ. ಆದರೆ ಈ ಕಾಲದ ರಾಜಕೀಯದಲ್ಲಿ ಅನೇಕರು ಸ್ವಜನಪಕ್ಷಪಾತ, ಸ್ವಾರ್ಥ, ಲಂಚ, ಕಪಟ, ಸುಳ್ಳು, ದೇಶದ್ರೋಹವರ್ತನೆಗಳ ಆಪಾದನೆಗಳು ಎಷ್ಟಿದ್ದರೂ ಅಧಿಕಾರಕ್ಕೆ ಅಂಟಿಕೊಂಡೇ ಇರುತ್ತಾರಲ್ಲವೇ ?

ರಾಮಾಯಣದಲ್ಲಿ ಬರುವ ಒಂದು ಪ್ರಸಂಗದಲ್ಲಿ ಶ್ರೀರಾಮನು ಸೀತಾಮಾತೆಯನ್ನು ಪರಿತ್ಯಕ್ತ ಮಾಡಿದಾಗಲೂ ತನ್ನ ವಚನ ಬದ್ಧತೆ ಪ್ರಜೆಗಳಿಗೆ ಹೇಗೆ ಇರಬೇಕು ಎಂದು ಸಾರಿ ಸಾರಿ ಹೇಳಿದ್ದಾನೆ. ಸೀತಾ ಮಾತೆಯು ಜನಕರಾಜನ ಮಗಳಾಗಿ ಬೆಳೆದು ಸ್ವಯಂವರದಲ್ಲಿ
ರಾಮನನ್ನು ವರೆಸಿ ಆಯೋಧ್ಯೆಗೆ ಬಂದು ಸಂತೋಷದಿಂದಿರಲು ಮತ್ತೆ ವಚನ ಪಾಲನೆಗಾಗಿ ಸ್ತ್ರೀಧರ್ಮ ಪಾಲನೆಗೆ ವನವಾಸಕ್ಕೆ ಹೋರಡಲು ಸಿದ್ಧಳಾಗುತ್ತಾಳೆ ಪ್ರಾಸಂಗಿಕವಾಗಿ ಇವೆಲ್ಲ ನಡೆದರು ಅಂದರೆ ವನವಾಸ ಮಾಯಾ ಜಿಂಕೆಯ ಮಾರಿಚನ ತಂತ್ರ ಎಲ್ಲವೂ ಗೋತ್ತಿದ್ದರು ಲೋಕಕಲ್ಯಾಣಾರ್ಥವಾಗಿ ಮುಂದೆ ಆಗಬೇಕಾದ ದಶಹರನ ವಧೆ ಧರ್ಮ ಸ್ಥಾಪನೆಗಾಗಿ ಪತಿಯ ಬೆಂಬಲಕ್ಕೆ ನಿಂತುಕೊಂಡು ಪತ್ನಿ ಧರ್ಮವನ್ನು ಸಂಪೂರ್ಣವಾಗಿ ಪಾಲಿಸಿ ಶ್ರೀರಾಮನ ಕೃಪೆಗೆ ಪಾತ್ರಳಾಗುತ್ತಾಳೆ
ಮುಂದೆ ಮರಳಿ ಅಯೋಧ್ಯೆಗೆ ಬಂದು ಇನ್ನೇನು ಸಂತೋಷದಿಂದ ಮುಂದಿನ ಜೀವನ ಸಾಕಾರಗೋಳಿಸಿಕೋಳ್ಳಬೇಕು ಎಂಬುವಷ್ಟರಲ್ಲಿ ಮತ್ತೆ ಪ್ರಜೆಯ ಚುಚ್ಚು ಮಾತುಗಳಿಗೆ ಒಳಗಾಗಿ ಪತಿಯ ಆಜ್ಞೆಗೆ ಶಿರಬಾಗಿ ಕಾಡಿಗೆ ಸೇರುವ ಪ್ರಸಂಗ ತನ್ನ ಪಾವಿತ್ರ್ಯತೆಯನ್ನು ತೋರಿಸಲು ಅಗ್ನಿಗೆ ತನ್ನನ್ನು ತಾನು ಸಮರ್ಪಣೆ ಗೋಳಿಸಿಕೊಳ್ಳುವ ತಂದೆ ಮಕ್ಕಳ ಯುದ್ಧ ನೋಡುವ ಪ್ರಸಂಗ ಕೋನೆಗೆ ಭೂತಾಯಿ ಒಡಲಲ್ಲಿ ಸೇರಿ ಕೊಳ್ಳುವ ಕೊನೆಯ ಪ್ರಸಂಗದ ವರೆಗೆ ಅವಲೋಕಿಸಿದರೆ ತಾಯಿಸೀತೆ ದಿಟ್ಟೆ ಲೋಕಕಲ್ಯಾಣಾರ್ಥವಾಗಿ ಎಲ್ಲವೂ ಸಹಿಸಿಕೊಂಡು ಪತಿ ಧರ್ಮಪಾಲನೆ ಮಾಡಿ ಪ್ರಪಂಚಕ್ಕೆ ಸತಿ ಪತಿಗಳು ಹೇಗಿರಬೇಕು ಎಂದು ತೋರಿಸಿಕೋಟ್ಟಿದ್ದಾಳೆ.

ಆದರೆ ಮಾತೆ ಸೀತೆಯ ಹಾಗೆ ಧರ್ಮಪಾಲಕನಾಗಿ ಪ್ರಜೆಗಳ ಹಿತಾಸಕ್ತಿ ಪಾಲನೆಗಾಗಿ ಮರ್ಯಾದ ಪುರುಷೋತ್ತಮನಾಗಿ ಶ್ರೀರಾಮಚಂದ್ರ ಮಾತೆ ಸೀತಾದೇವಿಯ ಪರಿತ್ಯಕ್ತ ಜೀವನ ಮಾನಸಿಕ ವೇದನೆ ಪ್ರಜೆಯ ಚುಚ್ಚು ಮಾತು ತನ್ನ ಮಕ್ಕಳ ಪರಾಕ್ರಮ ಕೊನೆಗೆ ನೋಡಿ ಆನಂದಿಸುವ ಪತ್ನಿಯನ್ನು ಇನ್ನೇನೂ ಮತ್ತೋಮ್ಮೆ ತನ್ನ ಅರಮನೆಗೆ ಕರೆದುಕೊಂಡು ಹೋಗಬೇಕು ಅನ್ನುವಷ್ಟರಲ್ಲಿ ಸೀತಾ ಮಾತೆಯ ಭೂಗರ್ಭ ಪ್ರವೇಶ ಅಂತ್ಯ ಹಾಡಿದರು ತ್ರೇತಾಯುಗದಿಂದ ಕಲಿಯುಗದವರೆಗೂ ಶ್ರೀರಾಮನ ಸೀತಾ ಮಾತೆಯ ಜೋತೆಗೆ ಪ್ರೀತಿಯ ಲಕ್ಷ್ಮಣ ಅವತಾರ ಅಜರಾಮರವಾಗಿದೆ ಅದಕ್ಕೆ ಇಂದು ಸಹ ಶ್ರೀರಾಮನಂತೆ ಮಗ ಪತಿ ಇರಬೇಕೆಂದು ತಂದೆ ತಾಯಿ ಸ್ರೀಯರು ಇಚ್ಛಿಸುವರು ಹಾಗೆ ಲಕ್ಷ್ಮಣನಂತಹ ತಮ್ಮ ನೀರ ಬೇಕು ಎಂಬ ಅಭಿಲಾಶೆಯಿದೆ.
ಇದೆಲ್ಲದರ ಸಂದೇಶ ಸಾರದಿಂದ ತಿಳಿಯುವುದು ಏನೆಂದರೆ ಜೀವನದ ಮೌಲ್ಯಗಳನ್ನು ತಿಳಿಸುತ್ತವೆ.

Leave a Reply