‘ಆರೋಗ್ಯಕ್ಕಾಗಿ ನಾವು ಎಷ್ಟೆಲ್ಲ ಪರದಾಡುತ್ತೇವೆ, ಎಷ್ಟು ದೂರಕ್ಕೆ ಹುಡುಕಿ ಹೋಗುತ್ತೇವೆ. ಗುಣವಾಗುವ ಪ್ರಕ್ರಿಯೆ ನಮ್ಮೊಳಗೆ, ನಮ್ಮಲ್ಲಿಯೇ ಇದೆ’ ಎಂಬ ಆತ್ಮವಿಶ್ವಾಸವನ್ನು ತುಂಬುತ್ತದೆ. ‘ನಮ್ಮ ಚಿಂತನೆ, ವಿಚಾರ ಕ್ರಿಯೆಯ ನಡುವೆ ಸಾಮರಸ್ಯವಿರಬೇಕು. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳು ಇಲ್ಲಿವೆ.
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ, ಕತೆಗಾರ್ತಿಯಾಗಿ, ಅಂಕಣಕಾರ್ತಿಯಾಗಿ ಪರಿಚಿತರು.
ಅಧ್ಯಾಯಗಳು
1. ಮರೆತು ಹೋಗದ ಮಹಾತ್ಮಾ
2. ಪರಿಹಾರ ಸರಳವಿದೆ
3. ಅಮೃತಬಳ್ಳಿಗೆ ಸಾವಿಲ್ಲ
4. ಸಾಲವೆಂಬ ಹುಲಿ ಸವಾರಿ
5. ಅರ್ಧದೇಹ ಪೂರ್ಣ ಸ್ಥೈರ್ಯ
6. ಖಾಲಿಯಾಗದೆ ಕಲಿಯಲಾರೆನು
7. ದೇವನು ನಗುವ ನಾಡಿನಲ್ಲಿ
8. ನಂಬಿದರೆ ಭಯವಿಲ್ಲ
9. ಮಾತೆಂಬ ದಿವ್ಯ ಔಷಧ
10. ಲಿಟಲ್ ಡೀಡ್ಸ್ ಆಫ್ ಕೈಂಡ್‌ನೆಸ್
11. ಕೊಟ್ಟು ನೋಡೋಣ ಕರುಣೆಯನ್ನು .
12. ಅಮ್ಮಂದಿರ ಕಷಾಯ
13. ಇರಲಿ ನಾಳೆಯು ನಾಳೆಗೆ
Reviews
There are no reviews yet.