Grip of Unless
Unless I get this or that. I won’t be happy
Unless I achieve this or that, I won’t be successful
Unless I am loved by this or that person, I won’t be fulfilled
Unless, Unless, Unless….
The life spent with countless Unlesses
Each bringing its own share of sorrow
Each pushing me further away from the Truth, from
What is
Unless I get rid of Unless……!)
ಇಲ್ಲದಿದ್ದರೆ
ಅದು- ಇದು ನನಗೆ ಸಿಗದಿದ್ದರೆ
ಸಂತೋಷವಿಲ್ಲ…
ಅದು – ಇದನ್ನು ಸಾದಿಸದಿದ್ದರೆ
ನಾನು ಯಶಸ್ವಿಯಲ್ಲ…
ಅವರಿವರು ನನ್ನ
ಪ್ರೀತಿಸದಿದ್ದರೆ
ನನಗೆ ತೃಪ್ತಿಯಿಲ್ಲ…
ಅದಿಲ್ಲದಿದ್ದರೆ.. ಇದಿಲ್ಲದಿದ್ದರೆ
ಬದುಕು ಬರಿ ಅಗಣಿತ
“ಇಲ್ಲಗಳ” ನಡುವೆಯೇ
ಕಳೆದು ಹೋಯ್ತು…
ಪ್ರತಿಸಲ ಪ್ರತಿಯೊಂದಕ್ಕೂ
ತನ್ನದೇ ನೋವು ತಂತು…
ನನಗೆ ನಿಜ ಹೊಳೆಯಲೇ ಇಲ್ಲಾ
“ಇಲ್ಲದಿದ್ದರೆ”
ಎಂಬುದೇ ಇಲ್ಲದಿದ್ದರೆ
ಏನಾಗಬಹುದಿತ್ತು ?
(ಅಜಿತಾಳ (Grip of Unless) – ಕವಿತೆಯ ಅನುವಾದ )