ಮಾರ್ಕ್ಸ್ ನ ಪ್ರಸ್ತುತ ಗ್ರಂಥವು ಪ್ರೋದೋನ್ ನ ನಿಲುವು ವಿಮರ್ಶೆಯ ರೂಪದಲ್ಲಿದ್ದರೂ ಸಹ ಪ್ರಮುಖವಾಗಿ ಮಾರ್ಕ್ಸ್ ವಾದದ ಮೂಲ ತತ್ವಗಳ ನಿರೂಪಣೆಗೆ ಮೀಸಲಾಗಿದೆ. ಸಂಕ್ಷೀಪ್ತವಾಗಿ ಹೇಳುವುದಾದರೆ, ಇಲ್ಲಿ ಚಾರಿತ್ರಿಕ ಭೌತವಾದದ ಮಜುಲುಗಳನ್ನು ಗುರುತಿಸಲಾಗಿದೆ. ಅದೇ ಸಂದರ್ಭದಲ್ಲಿ ತತ್ವ ಶಾಸ್ತ್ರದ ಪರಿಧಿಯಲ್ಲಿ ಉಂಟಾಗಿದ್ದ ಗೋಜಲುಗಳ ನಿವಾರಣೆಯನ್ನು ಸಾಧಿಸಿರುವುದು ಸಹ ಈ ಗ್ರಂಥದ ವೈಶಿಷ್ಟ್ಯೆ.
ಚಿಂತನೆಗೆ ಒಂದು ಚಾರಿತ್ರಿಕ ಮಹತ್ವವಿದೆ. ಇತಿಹಾಸದ ಪರಿಕಲ್ಪನೆಯು ಅತ್ಯಂತ ಗಂಭೀರವಾದದ್ದು ಕೇವಲ “ಶುದ್ಧ ಚಿಂತನೆಯು” ಸಾಲದು, ಅದನ್ನು ಸಮಗ್ರವಾಗಿ ತಿಳಿಯಲು ವಾಸ್ತವ ಪ್ರಪಂಚದ ಸಂಪೂರ್ಣ ಮಾಹಿತಿಯನ್ನು ನಿರ್ದಾಕ್ಷಿಣ್ಯವಾಗಿ ಪಡೆದುಕೊಳ್ಳಬೇಕು. ಅದನ್ನು ನಿಷ್ಕೃಷ್ಟವಾಗಿ ವಿಶ್ಲೇಷಿಸಿದಾಗ ಮಾತ್ರವೇ ಚಾರಿತ್ರಿಕ ಭೌತವಾದದ ಹೂರಣವು ದೊರಕಬಲ್ಲದು.
Reviews
There are no reviews yet.