ಆಧುನಿಕತೆಯ ಆಕರ್ಷಣೆಗಳ ನಡುವೆ ಅನಿವಾರ್ಯವಾದ ಶಾಲಾ ಓದಿನ ಜೊತೆಗೆ ಒಂದಿಷ್ಟು ಪ್ರಪಂಚ ಜ್ಞಾನವೂ ಬೆಳೆಯಲು ಸಹಾಯಕವಾಗಬಹುದು ಎನ್ನುವ ಚಿಂತನೆಯೊಂದಿಗೆ ಮಕ್ಕಳಲ್ಲಿ ಭಾವನೆಗಳನ್ನು ಅರಳಿಸಿ ವ್ಯಕ್ತಿತ್ವ ಬೆಳೆಯಲು ಮಾಡುವ ಪ್ರಯತ್ನ ಇದು. ಹಾಡಿಗೆ ಮಕ್ಕಳನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯವಿದೆ. ಅದರಲ್ಲೂ ಕತೆಯನ್ನೊಳಗೊಂಡ ಪದ್ಯಗಳು ಮಕ್ಕಳನ್ನು ಬಲುಬೇಗ ಆಕರ್ಷಿಸುತ್ತದೆ. ಭಾವನಾ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಅದರ ಜೊತೆಗೆ ಮಕ್ಕಳಿಗೆ ಕುತೂಹಲ ಕೆರಳಿ ಅವರಾಗಿಯೇ ಓದಿ, ನೋಡಿ, ಮಾಡಿ ತಿಳಿದುಕೊಳ್ಳುವ ಸಾಹಿತ್ಯವನ್ನೂ ಅವರ ಕೈಗೆ ಕೊಡಬೇಕು. ಅವುಗಳನ್ನು ಭಾವಪೂರ್ಣವಾಗಿ ಮಕ್ಕಳಿಗೆ ಹೇಳಲು, ತಿಳಿಸಿಕೊಡಲು ಹೆತ್ತವರು ಬೇಕು. ಆಗಲೇ ಅದರ ಪ್ರಯೋಜನ ಅವರಿಗೆ ದಕ್ಕುವುದು. ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ದೊರೆತಾಗ ಹೊಸ ಹೊಸ ಯೋಚನೆಗಳನ್ನು ಮನದಲ್ಲಿ ಮೂಡಿಸಿಕೊಂಡಾಗಲೇ ಮಕ್ಕಳು ಬುದ್ಧಿವಂತರಾಗುವುದು. ಈಗ ಆಕರ್ಷಣೀಯವಾದ ಟಿ.ವಿ.ಯಂತಹಾ ಮಾಧ್ಯಮಗಳು ಅವರನ್ನು ದಾರಿತಪ್ಪಿಸುತ್ತಿವೆ. ನಾವೂ ಮಕ್ಕಳನ್ನು ಶಾಲೆಯ ಓದಿಗೆ ಮಾತ್ರ ಅಗತ್ಯಕ್ಕಿಂತ ಹೆಚ್ಚಾಗಿ ಹಚ್ಚಿ ಅವರ ಉಳಿದ ಮಾನಸಿಕ ವಿಕಸನದ ಕಡೆಗೆ ಲಕ್ಷ್ಯ ಕೊಡುತ್ತಿಲ್ಲ. ಮಾನಸಿಕ ವಿಕಸನ, ದೈಹಿಕ ಆರೋಗ್ಯಕ್ಕೆ ಮಾರಕವಾದ ಕೂತಲ್ಲೇ ಕೂರುವ ಯಂತ್ರಗಳಾಗುತ್ತಿದ್ದಾರೆ ಮಕ್ಕಳು. ಅದನ್ನು ಬದಲಿಸುವ ದಿಕ್ಕಿನಲ್ಲಿ ಒಂದು ಸಣ್ಣ ಪ್ರಯತ್ನ ಇದು.
ಹಾಡು, ಕತೆ, ಮಾಹಿತಿ, ನೀತಿಕತೆ, ಮನರಂಜನೆ ಇತ್ಯಾದಿ ಬೇರೆ ಬೇರೆ ರೂಪಗಳಲ್ಲಿ ಹೊಸ ಚಿಗುರು ಹಳೆ ಬೇರಿನೊಂದಿಗೆ ಮಕ್ಕಳಿಗಾಗಿ ಕಾದಿವೆ. ಮಕ್ಕಳ ಮಟ್ಟ ನೋಡಿಕೊಂಡು ಅವರೊಂದಿಗೆ ಸಮಾಲೋಚನೆ ಮಾಡಿಯೇ ಬರೆದಿ ದ್ದಾರೆ. ದೊಡ್ಡವರಿಗೆ ಓದುವಾಗ ಸಣ್ಣ ಸಣ್ಣ ವಿಷಯಗಳು ಎನಿಸಬಹುದು. ಆದರೆ ಮಕ್ಕಳಿಗೆ ಅವೇ ಖುಷಿ ಮತ್ತು ಜ್ಞಾನ ನೀಡುವಂಥದ್ದು. ಅವುಗಳನ್ನು ಅರಗಿಸಿಕೊಂಡೇ ಮಕ್ಕಳು ಬೆಳೆಯಬೇಕು. ಅದಕ್ಕೆ ಹೆತ್ತವರ ಸಹಕಾರವೂ ಬೇಕು.
Reviews
There are no reviews yet.