ನಮ್ಮ ನಾಡಿನ ಪರಮ ಪುಣ್ಯದ ಫಲವಾಗಿ ನಮಗೆ ಲಭಿಸಿರುವ ಪ್ರಕೃತಿಯ ವರಗಳಲ್ಲಿ ಹಿಮಾಲಯ, ವಿಂಧ್ಯಾದ್ರಿಗಳು, ಪೂರ್ವ- ಪಶ್ಚಿಮ ಘಟ್ಟಗಳು ಅನೇಕ ಪರ್ವತ ಸ್ತೋಮಗಳು ಮತ್ತು ಗಂಗೆ, ಯಮುನೆ, ಗೋದೆ, ಕಾವೇರಿ ಮೊದಲಾದ ಪುಣ್ಯನದಿ ಗಳು ಮುಖ್ಯವಾಗಿದೆ. ಇವು ಭಾರತೀಯರ ‘ಇಹ’ ದ ಪ್ರಯೋಜನಕ್ಕೂ ‘ಪರ’ ದ ಶ್ರೇಯಸ್ಸಿಗೂ ಕಾರಣವಾಗಿವೆ.
ಹಿಂದಿನಿಂದಲೂ ಭಾರತೀಯರು ತೀರ್ಥ ಕ್ಷೇತ್ರಗಳಲ್ಲಿ ಭಗವಂತನ ಶ್ರೀಮದೂರ್ಜಿತವಾದ ಅಂಶವನ್ನು ಮನಗಾಣುತ್ತ ಶ್ರೇಯ, ಪ್ರೇಯಗಳನ್ನು ಪಡೆಯುತ್ತಾ ಬಂದಿದ್ದಾರೆ. ಪವಿತ್ರ ನದಿಗಳ ತೀರ್ಥ ಸ್ಥಳ, ಕ್ಷೇತ್ರ ಮಹಾತ್ಮೆಯ ಪುಣ್ಯ ಸ್ಥಳಗಳಲ್ಲಿ ಗುಡಿ- ಗೋಪುರಗಳನ್ನು ನಿರ್ಮಿಸಿ ಭಕ್ತಿ ಶ್ರದ್ಧೆ , ಕಲಾ ನೈಪುಣ್ಯ ತೋರಿ ಮೆರೆದಿದ್ದಾರೆ.
ಶ್ರೀ ರಾಮನ ಬಗ್ಗೆ ರಾಮಾಯಣದ ಬಗ್ಗೆ ಭಾರತೀಯರಿಗಿರುವ ಅಚಲ ಅಭಿಮಾನವನ್ನು ತಿಳಿಯಪಡಿಸುತ್ತದೆ. ಹೀಗೆ ಅನೇಕ ಯೋಗಿಗಳ , ತಪಸ್ವಿಗಳ ಸಾಧು- ಸಂತರ ಮಹಾತ್ಮೆಯಿಂದ ಪ್ರಸಿದ್ಧ ಪಡೆದ ಸ್ಥಳಗಳು ಪುಣ್ಯ ಕ್ಷೇತ್ರ ಗಳೆನಿಸಿವೆ.
Reviews
There are no reviews yet.