ಮರಳಿನ ಮೇಲೆ ಕಟ್ಟುವ ಆರ್ಥಿಕತೆ ಬಹಳ ದಿನ ಉಳಿಯುವುದಿಲ್ಲ ಎಂಬ ಮಾತಿನಿಂದ ಹೊರಟು, ಚೌಡಿ ಚಾಮುಂಡಿಯಾಗಿ ಅವತಾರ ಎತ್ತುವ ಮಹಾನಾಟಕದ ತನಕ ಹಳೆಯೂರಿನಲ್ಲಿ ನಡೆಯುವ ಪ್ರಸಂಗಗಳೇ ಕುತೂಹಲಕಾರಿ… ಟೂರಿಸಮ್ಮು ಎಂಬ ತಮಾಷೆ, ಮೊಬೈಲು ಎಂಬ ಜೋಕು, ದುಡ್ಡಿನೊಂದಿಗೆ ಬದಲಾಗುವ ವೇಷ, ನಾವು ಬದಲಾಗುವುದು ಕೇವಲ ಹೊರಗಿನಿಂದಲೇ ಎಂದು ಸಾಬೀತು ಮಾಡುವಂಥ ದೃಶ್ಯಗಳಲ್ಲಿ, ತಂತ್ರಜ್ಞಾನ ನಮ್ಮ ಭಾಷೆಯನ್ನು ತಿದ್ದುತ್ತಾ ಹೋಗುವ ವಿಚಿತ್ರ ಜಾಯಮಾನವೂ ನಾಟಕದಲ್ಲಿದೆ… ಇಡೀ ನಾಟಕ ನನ್ನನ್ನು ತಾಕಿದ್ದು ನಳದಮಯಂತಿಯ ಪ್ರಸಂಗದಲ್ಲಿ. ಬೇಕಾದ ಚಕ್ರವನ್ನು ಆವಾಹಿಸಿಕೊಂಡು ಬೇಕಾದ ರೂಪದಲ್ಲಿ  ಕಲ್ಲನ್ನು ಕಾಣುವ ಋಷಿಯ ಕತೆಯಲ್ಲಿ. ಕೊನೆಯಲ್ಲಿ ಭಾಮೆ ಮತ್ತು ಕಿಟ್ಟಿ ಆಡುವ ನಾಟಕದಲ್ಲಿ. ಹಾಗೆ ನಾಟಕ ಆಡುತ್ತಾ ಆಡುತ್ತಾ ಅವರು ತಮಗೇ ಗೊತ್ತಿಲ್ಲದ ಮಾತುಗಳನ್ನು ಹೇಳುವಲ್ಲಿ… ಬದುಕಿನ ಪವಾಡ ಅಲ್ಲೇ ಇದೆ. ನಾವು ಅನುಭವಿಸಿದ ಕ್ಷಣವನ್ನು ನಾವು ಕೇವಲ ಕಲೆಯ ಮೂಲಕ ಮಾತ್ರ ಮತ್ತೊಮ್ಮೆ ಮುಖಾಮುಖಿಯಾಗಬಲ್ಲೆವು. ಒಂದು ಭೂತ-ಕ್ಷಣವನ್ನು ವರ್ತಮಾನ ಕ್ಷಣದಲ್ಲಿ ಎದುರಾಗುವ ವ್ಯಕ್ತಿ ಭೂತಕಾಲದಲ್ಲಿ ಬದುಕುತ್ತಾನೋ ವರ್ತಮಾನದಲ್ಲೋ ಅಥವಾ ಅವೆರಡರಲ್ಲೂ ಅಲ್ಲದ ಭವಿಷ್ಯದಲ್ಲೋ ಎಂಬ ಪ್ರಶ್ನೆಯನ್ನು, ನಾಟಕದ ಕೊನೆಯ ದೃಶ್ಯ ಮತ್ತು ಅದು ಮೂಡಿಸಿದ ತಲ್ಲಣ, ನನ್ನಲ್ಲಿ ಹುಟ್ಟುಹಾಕಿತು… ಈ ನಾಟಕ ಓದಿಸುವ ಮೂಲಕ ಕಲೆಯ ಮೇಲೆ ನಾವು ಇಡಬೇಕಾದ ನಂಬಿಕೆಯನ್ನು ಮರುಸ್ಥಾಪನೆ ಮಾಡಿದ್ದಕ್ಕೆ ಧನ್ಯವಾದ…

– ಜೋಗಿ

Additional information

Category

Author

Publisher

Language

Kannada

Book Format

Ebook

Year Published

2015

Reviews

There are no reviews yet.

Only logged in customers who have purchased this product may leave a review.