ಇತಿಹಾಸದ ವಿಷಯವೊಂದನ್ನಿಟ್ಟುಕೊಂಡು ಬರೆಯುವ ಎಲ್ಲಾ ಕೃತಿಗಳಿಗೂ ಇರುವ ಮಿತಿಯೇ ಇದು. ಇದೊಂದು ನಾಜೂಕಿನ ಕೆಲಸ. ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ನಡೆಯುವ ಹಾಗೆ ಸ್ವಲ್ಪ ಆಯ ತಪ್ಪಿದರೂ ಟೀಕೆಗಳ ಟ್ರಾಫಿಕ್ಕಿನಲ್ಲಿ ತಲೆಕೆಳಗಾಗಿ ಬೀಳುವುದು ಖಚಿತ. ಇತಿಹಾಸದ ದಾಖಲೆಗಳನ್ನಿಟ್ಟುಕೊಂಡು ಅಲ್ಲಲ್ಲಿ ಒಂದಿಷ್ಟು ಕ್ರಿಯೇಟಿವ್ ಲಿಬರ್ಟಿಗಳನ್ನು ಉಪಯೋಗಿಸಿಕೊಂಡು ಕಥನದ ಗಾಢತೆಯೂ ಕೆಡದಂತೆ, ಇತಿಹಾಸದ ದಾಖಲೆಗಳಿಗೂ ಚ್ಯುತಿ ಬರದಂತೆ ಬರೆಯುವ ಪ್ರಯತ್ನ ಮಾಡಿದ್ದೇನೆ.
ಗಾಂಧೀಜಿಯವರ ಬಗ್ಗೆ ಬಂದಿರುವಷ್ಟು ಪುಸ್ತಕಗಳು ಲೇಖನಗಳು ಬಹುಶಃ ಬೇರಾರ ಬಗ್ಗೆಯೂ ಬಂದಿರಲಿಕ್ಕಿಲ್ಲ. ನಾಥೋರಾಂ ಗೋಡ್ಸೆಯ ಬಗ್ಗೆಯೂ ಬೇಕು ಬೇಕಾದಷ್ಟು ಬರಹಗಳು ಬಂದಿವೆ. ಹಾಗಾಗಿ ಇವರಿಬ್ಬರ ಬದುಕಿನ ಬಗ್ಗೆ, ಸಂಘರ್ಷಗಳ ಬಗ್ಗೆ ಗೊತ್ತಿಲ್ಲದಂಥದ್ದು ಏನೂ ಇಲ್ಲ. ಆದರೆ ಎಲ್ಲದರ ಬಗ್ಗೆಯೂ ವಿವಾದಗಳಿವೆ. ಎಲ್ಲ ಸಂಗತಿಗಳ ಮುಂದೆಯೂ ಪ್ರಶ್ನಾರ್ಥಕ ಚಿಹ್ನೆಗಳಿವೆ! ಭಾರತೀಯ ಇತಿಹಾಸದ ಕೌತುಕವೇ ಇದು. ಇಲ್ಲಿ ಇದಮಿತ್ಥಂ ಎಂಬಂಥ ಸತ್ಯ ಸಿಗುವುದು ಕಷ್ಟ. ಹಾಗಾಗಿಯೇ ಹುಡುಕಾಟ ನಿರಂತರ.
-40%
About this Ebook
Information
Additional information
Category | |
---|---|
Author | |
ISBN | 978-93-81055-91-5 |
Book Format | Ebook |
Publisher |
Reviews
Only logged in customers who have purchased this product may leave a review.
Reviews
There are no reviews yet.