“ದಿವಂಗತ ಬೂದು ಗುಂಬಳ ಕಾಯಿ”

“ದಿವಂಗತ ಬೂದು ಗುಂಬಳ ಕಾಯಿ”

ಇಂದಿನ ಆಯುಧ  ಪೂಜೆಯ  ದಿನ ಇದ್ದಕಿದ್ದಂತೆ  ನಮ್ಮ  H. ನರಸಿಮ್ಮಯ್ಯನವರು  ಬರೆದ “ದಿವಂಗತ ಬೂದುಗುಂಬಳಕಾಯಿ” ಲೇಖನ  ನೆನಪಿಗೆ ಬಂತು.  ತಿಳಿಯಾದ ಹಾಸ್ಯ, ಸಮಾಜಕ್ಕೆ ಒಂದಷ್ಟು ಸಂದೇಶದೊಂದಿಗೆ ಚನ್ನಾಗಿ ಬರೆದಿದ್ದಾರೆ, ಅದರ ನೆನಪಿನಲ್ಲಿ ಇದಕ್ಕೊಂದು ಉಪಕಥೆ ಬರೆಯುವ ಪ್ರಯತ್ನ.

ಒಬ್ಬ ಬ್ರಾಹ್ಮಣ ಆಯುಧ ಪೂಜೆಯ ದಿನ ಸ್ನಾನ, ಸಂಧ್ಯಾವಂದನೆ ಪೂಜಾದಿಗಳನ್ನು ಮುಗಿಸಿ ಜಗುಲಿಯ ಮೇಲೆ ಕಾಫಿ ಕುಡಿಯುತ್ತ ಕುಳಿತ, ಮಾಡುವುದಕ್ಕೆ ಇನ್ನೇನು ಕೆಲಸವಿರಲಿಲ್ಲವಲ್ಲ, ಸರಿ.. ಯಾವುದೊ ಹಳೆಯ ಪತ್ರಿಕೆ ನೋಡತೊಡಗಿದ. ಇವನ ಅದೃಷ್ಟವೋ ಅಥವಾ ದುರಾದೃಷ್ಟವೋ ನಮ್ಮ ನರಸಿಮ್ಮಯ್ಯನವರು ಬರೆದ ಲೇಖನ ಕಣ್ಣಿಗೆಬಿತ್ತು. ಓದತೊಡಗಿದ ಲೇಖನದಲ್ಲಿ ಬರೆದಿರುವಂತೆ ಪೇಟೆ ಬೀದಿಯಲ್ಲಿ ಬೂದಗುಂಬಳಕಾಯಿಗಳ ಇಂದಿನ ಪರಿಸ್ಥಿತಿಯನ್ನು ನೆನೆದು ಬಹಳ ದುಖ್ಖ ಪಟ್ಟ, ಇವನ ದುಃಖ್ಖಕ್ಕೆ ಕಾರಣ ಅವುಗಳ ಪರಿಸ್ಥಿತಿಯಲ್ಲ. ಮಜ್ಜಿಗೆಹುಳಿಯೋ ದಮರೊಟೊ ಆಗಿ ನನ್ನ ಹೊಟ್ಟೆ ಪಾಲಾಗಬೇಕಿದ್ದಈ   ಕುಂಬಳಕಾಯಿ ಹೀಗೆ ಬೀದಿಪಾಲಾಗಿದೆಯಲ್ಲ ಎನ್ನುವುದು ಅವನ ಚಿಂತೆ. ಬ್ರಾಹ್ಮಣ ಭೋಜನಪ್ರಿಯನಲ್ಲವೇ ಅದರಲ್ಲೂ ಮಜ್ಜಿಗೆಹುಳಿಯೆಂದರೆ ಎಲ್ಲಿಲ್ಲದ ಪ್ರೀತಿ. ತನಗೆ ಪ್ರೀತಿ ಪಾತ್ರವಾದ ಮಜ್ಜಿಗೆ ಹುಳಿಯನ್ನು ನೆನಪಿಸಿದ ಲೇಖನವನ್ನು ಪಕ್ಕದಲ್ಲಿ ಇಟ್ಟು ಪೇಟೆಯ ಪರಿಸ್ಥಿತಿಯನ್ನು ಅವಲೋಕಿಸಿ ಬರೋಣವೆಂದುಮನೆ ಬಿಟ್ಟ. ಪೇಟೆಯ ಪ್ರಾರಂಭದಲ್ಲೇ ಈ ಮಾರಣ ಹೋಮವನ್ನು ನೋಡಿ ಕಂಗಾಲಾಗಿ ಹೋದ. ಬಲಿತ-ಮೊಳೆತ , ಹೀಚು ಪಾಚುಗಳೆಂಬ ತಾರತಮ್ಯವಿಲ್ಲದೆ ಜನ ಕುಂಬಳಕಾಯಿಗಳನ್ನು ಕೊಚ್ಚಿ ಹಾಕಿದ್ದರು , ಈ ದಾರುಣ ಕೃತ್ಯವನ್ನು ಭಾರವಾದ ಹೆಜ್ಜೆ ಹಾಕುತ್ತಾ ಮುಂದೆ ಮುಂದೆ ನೆಡದಂತೆ ಈ ಕೃತ್ಯದ ಪರಿಣಾಮ ಮತ್ತು ವ್ಯಾಪ್ತಿ ಹೆಚ್ಚಾಗಿಯೇ ಇತ್ತು. ದಮರೊಟು ಮಜ್ಜಿಗೆ ಹುಳಿ ಆಗಿ ತನ್ನಹೊಟ್ಟೆಯಲ್ಲಿಇರಬೇಕಿದ್ದಎಳೆಕುಂಬಳಕಾಯಿಗಳನ್ನುಕಂಡು ಕಂಬನಿ ಮಿಡಿದ , ಮಧ್ಯಾಹ್ನವಾಗಿತ್ತು ಹೊಟ್ಟೆ ಹಸಿದಿತ್ತು ಇದೆ ದುಃಖ್ಖದಲ್ಲಿ ಮನೆಯ ಕಡೆ ನೆಡೆದು ಜಗುಲಿಯ ಮೇಲೆ ಕುಳಿತ, ಅತ್ತ ಕಡೆಯಿಂದ ಹೆಂಡತಿಯ ಕೂಗು, ರೀ.! ಊಟಕ್ಕೆ ಬನ್ನಿ ಮಜ್ಜಿಗೆಹುಳಿ ದಮರೊಟು ಮಾಡಿದೀನಿ….!!!!

 

 

Leave a Reply