Ebook

ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

Author: Lohit Naikar

Original price was: $0.84.Current price is: $0.50.

ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ.

ಹಾಗೆಂದು ಇವು ಮಾನವ ಹಕ್ಕುಗಳು ಮತ್ತು ಜೀವನ ಸಂದರ್ಭಗಳ ಸಮಸ್ಯಾತ್ಮಕತೆಯನ್ನು ಉದಾಹರಿಸುವ ಕೇಸ್ ಹಿಸ್ಟರಿಗಳಲ್ಲ. ಸಮಸ್ಯೆಗಳ ಹಿಂದಿನ ತೊಡಕಾದ ಮಾನವೀಯ ಸಂಬಂಧಗಳ ಸಹನುಭುತಿಪರವಾದ ತಿಳುವಳಿಕೆಯೊಂದಿಗೆ ಹದವಾದ ಸೃಜನಶೀಲತೆಯನ್ನು ಮೇಳೈಸಿಕೊಂಡ ವಿಶಿಷ್ಟ ಬರಹಗಳಾಗಿವೆ. ಕಾಯಿದೆಯ ತಿಳುವಳಿಕೆಯೊಂದೇ ಇವುಗಳ ಹೆಚ್ಚಳವಲ್ಲ.ಅದಕ್ಕೆ ಲೋಹಿತ್ ಅವರು ತೋರಿರುವ ಸಹಜ ಸೃಜನಶೀಲತೆ ಮತ್ತು ಬದುಕಿನ ಅರ್ಥಪೂರ್ಣತೆಯ ಬಗೆಗಿನ ಕಳಕಳಿ ಮಹತ್ವದವಾಗಿವೆ.

ವೈವಿಧ್ಯಪೂರ್ಣವಾದ ಸಂದರ್ಭ, ಪರಿಸರ, ಜೀವನನಿರೀಕ್ಷಣೆ, ಪ್ರಯೋಗಶೀಲತೆಗಳು ಈ ಕತೆಗಳ ಹರವನ್ನು ಹೆಚ್ಚಿಸಿವೆ. ಸೃಜನಶೀಲತೆಯ ಕೈ ಮೇಲಾಗಿ, ಸಮಸ್ಯೆಗಳು ಧ್ವನಿಪೂರ್ಣ ಬರಹಗಳಾದಾಗ ಅವರ ಕತೆಗಳು ಹೆಚ್ಚು ಯಶಸ್ವಿಯಾಗಿವೆ. ಹಾಗಾಗಿ ಇವು ಸಾಹಿತ್ಯಕವಾಗಿಯೂ ಕುತೂಹಲಕರ ಪ್ರಯೋಗಗಳಾಗಿವೆ .

Additional information

Category

Author

Publisher

Language

Kannada

ISBN

978-81-88478-82-8

Book Format

Ebook

Year Published

2010

Reviews

There are no reviews yet.

Only logged in customers who have purchased this product may leave a review.