…… ಚಂದ್ರಕಾಂತ ಕುಸನೂರ ಅವರು ಗುರುತಿಸಿರುವಂತೆ ಅಭಿವ್ಯಕ್ತಿಯಲ್ಲಿನ ನಿಖರತೆ ಇಲ್ಲಿನ ಕವಿತೆಗಳ ಮುಖ್ಯ ಗುಣವಾಗಿದೆ. ಶ್ವೇತಾ ಅವರ ಕವಿತೆಗಳು ಅಬ್ಬರವಿಲ್ಲದೆ ಸರಳ ಸುಂದರ ಭಾವಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿವೆ.
ಲಯದ ಮೇಲೆ ಸಾಕಷ್ಟು ಹಿಡಿತವಿರುವ, ಒಂದೆರಡು ಗೇಯ ಗೀತೆಗಳನ್ನೂ ನೀಡಿರುವ ಶ್ವೇತಾ ಅವರ ಕವಿತೆಗಳು, ಕುಸನೂರರು ಹೇಳುವಂತೆ `ಹಸಿರು ಹುಲ್ಲಿನ ಹಾಸಿಗೆಯಲ್ಲಿ ನೀಲಿ-ಹಳದಿ ಹೂ ಅರಳಿದಂತೆ’ ಕಾಣಿಸುತ್ತವೆ.
– ೬-೫-೨೦೦೬ ರ `ಉದಯವಾಣಿ’ಯ ಪುಸ್ತಕ ಸಮೀಕ್ಷೆಯಲ್ಲಿ ಸುಬ್ರಾಯ ಚೊಕ್ಕಾಡಿ.
“ಶ್ವೇತಾ ಅವರ ಕವಿತೆಗಳು ನಿರುಮ್ಮಳವಾಗಿವೆ. ಅವುಗಳ ಹಿಂದೆ ಯಾವದೇ ಸಿದ್ಧಾಂತಗಳಿಲ್ಲ. ತನಗನ್ನಿಸಿದ್ದನ್ನು ಹಸಿಹಸಿಯಾಗಿ, ರಸವತ್ತಾಗಿ ಹೇಳುತ್ತಾ ಹೋಗಿದ್ದಾರೆ ಅನ್ನುವ ಕಾರಣಕ್ಕೇ ಅವುಗಳು ಇಷ್ಟವಾಗುತ್ತವೆ.”
– ಕನ್ನಡ ಪ್ರಭ ೧೦-೬-೨೦೦೫
“ದಿನನಿತ್ಯದ ಅನುಭವಗಳು, ಸಮಾಜದ ರೀತಿ ನೀತಿಗಳು, ಮನದೊಳಗಿನ ಭಾವನೆಗಳು ಈ ಸಂಕಲನದಲ್ಲಿ ಕಾವ್ಯವಾಗಿ ಹೊರಹೊಮ್ಮಿವೆ. ಭಾಷೆ, ಬಂಧ, ಕಲ್ಪನೆ ಹಾಗೂ ನಿರೂಪಣೆಗಳ ಹೊಸತನದಿಂದ ಈ ಸಂಕಲನ ಗಮನ ಸೆಳೆಯುತ್ತದೆ. ಹೆಣ್ಣಿನ ಬದುಕು, ಹದಗೆಟ್ಟ ಸಮಾಜದಲ್ಲಿನ ಮಕ್ಕಳ ಸ್ಥಿತಿಗತಿ – ಹೀಗೆ ದಿನನಿತ್ಯದ ಅನುಭವಗಳೂ ಇಲ್ಲಿ ಕಾವ್ಯವಾಗಿ ಹರಳುಗಟ್ಟುತ್ತವೆ. `ಸರಳತೆ’ – ಈ ಕವಿತೆಗಳಿಗೆ ಆಕರ್ಷಕವಾದ ಲಾವಣ್ಯವನ್ನು ತಂದುಕೊಟ್ಟಿದೆ.”
Reviews
There are no reviews yet.